ಭೂದೇವಿ:- ರಾಗ-ಆರಭಿ (ಲಲಿತಪದಿ)
ಜಯ ಜಯ ಸರ್ವೇಶ ಜಯ ಪಾಪನಾಶ | ಜಯ ಸತ್ಯ ಚಾರಿತ್ರ ಜಯವಿಶ್ವ
ಗಾತ್ರ | ಜಯ ಶಾಂತಗಂಭೀರ ಜಯ ಮಹಾಧೀರ | ಜಯನತಾವ:ರಬೃಂದ|.
ಜಯ ಚಿದಾನಂದ | ಜಯ ಸತ್ಯಸಂಕಲ್ಪ ಜಯಸತ್ಪ್ರತಾಪ| ಜಯ ಕೃಪಾ
ರಸಧಾಮ ಜಯಸಾರ್ವಭೌಮ | ಜಯಧರ್ಮಗುಣಭೂಷ ಜಯಸಾಧುಪೋ
ಷ | ಜಯಜಯ ಸರ್ವಜ್ಞ ಜಯನಿರ್ಗಳಾಜ್ಞ | ಜಯ ಭಕ್ತ ಮಂದಾರ ಜಯ
ಶುಭಾಕಾರ | ಸಗುಣ ನಿರ್ಗುಣ ಪೂರ್ಣ ಸರ್ವ ಸಂತ್ರಾಣ | ನಿಖಿಲ ಸಜ್ಜನ
ರಕ್ಷನಿರಪಾಯಪಕ್ಷ| ದೀನ ಚಿಂತಾನುಣೀ ಧೃತ ಧರ್ಮಪಾಣಿ| ಭವಬಂಧ
ಮೋಚನ ಪರಮ ಕಲ್ಯಾಣ | ಸರಸ ಗುಣಾಢ್ಯ ಸಜ್ಜನಮಾನ ರಕ್ಷ| ವೇದ
ವೇದಾಂತ ವೇದಾಂಗಗಳು ನೀನೆ! ಕ್ರತುಗಳು ನೀನೆ ಸದ್ವ್ರತಗಳು
ನೀನೆ | ಬಲ್ಲೆಯೆಲ್ಲವ ನೀನು ಪಾವನ ಮೂರ್ತಿ | ಕಂಸಾದಿ ದುಷ್ಟ ರಾಕ್ಷಸರ
ಹಾವಳಿಯು | ಮಿತಿಮೀರಿ ಸಲ್ಲುತಿಹುದು ದೇವದೇವ| ದುರುಳರಾದವರ
ಸೂಕ್ತಡಗಿಸಿ ಬೇಗ। ಕುಶಲದಿ ಪಾಲಿಸೆಮ್ಮನು ಪ್ರಾಣನಾಥ | ಜಯವಿಶ್ವ
ನಾಥ ಸಜ್ಜನ ವಾರನೇತ||
(ಎಂದು ಭೂದೇವಿಯು ನಮಸ್ಕರಿಸುವಳು.)
ವಿಷ್ಣುವು:- ಕ೦॥ ಧರಣೀ ರಮಣೀ ನಿನ್ನಯ |
ಪರಿತಾಪವು ನೀಗಿ ಸುಖವ ಪಡೆಯುವೆ ಸುಗುಣೀ||
ನೆರೆಸೈಸು ಕೆಲದಿನಗಳೋಳ್|
ದುರುಳರ ಶಿಕ್ಷಿಸೆನು ಕೃಷ್ಣರೂಪದಿ ನಿಕ್ಕಂ ||
ಭೂದೇವಿ:-(ತನ್ನಲ್ಲಿ) ಆಹಾ ! ಭಗವಂತನೆಷ್ಟು ದಯಾಕರ
ಮೂರ್ತಿಯು ! ನನ್ನ ದೀನಾಲಾಪವನ್ನು ಪರಮಶಾಂತದಿಂದ ಲಾಲಿಸಿದು
ದೇ ನನಗೆಷ್ಟೋ ಗೌರವವು. ಅದಕ್ಕೆ ನೆರೆಯಾಗಿ ನನ್ನನ್ನು “ಧರಣೀ !
ರಮಣೀ!!ಸುಗುಣೀ!!' ಎಂದು ಸಂಬೋಧಿಸಿದುದನ್ನು ಯೋಚಿಸಿ
ದರೆ, ಈ ಭಾಗ್ಯವು ಬ್ರಹ್ಮಾದಿಗಳಿಗೂ ಇಲ್ಲವೆಂದು ಕಾಣುತ್ತದೆ. ನಾ
ನೇ ಧನ್ಯಳು! ನಾನೇ ಗಣ್ಯಳು!! ನಾನೇ ಮಾನ್ಯಳು!! (ಎಂದು ಸಂ
ತೋಷಿಸುತ್ತ, ಭಗವಂತನನ್ನು ನೋಡಿ ಪ್ರಕಾಶವಾಗಿ) ಪರಂಧಾಮ
ನೇ ! ಪ್ರಪಂಚದ ಹೊರಗೂ ಒಳಗೂ ಸಹ ವ್ಯಾಪಿಸಿ, ಜೀವಕೋಟಿ
ಗಳ ಅಂತರಂಗದಲ್ಲಿರುವ ನಿಜವಾದ ವಿಶ್ವಾಸವನ್ನರಿಯತಕ್ಕ ಸರ್ವಜ್ಞ
ನಾದ ನಿನಗೆ ನಾನೇನು ಹೇಳಬಲ್ಲೆನು? ನಿನ್ನಿಷ್ಟಾನುಸಾರ ನಡೆಯಲಿ