ಈ ಪುಟವನ್ನು ಪ್ರಕಟಿಸಲಾಗಿದೆ



ಪ್ರಥಮಾಂಕಂ
೧೧

ವಿಷ್ಣುವು:- ಕಲ್ಯಾಣೀ! ನಿನಗೆ ಮಂಗಳವಾಗಲಿ! [ಎಂದು
     ಆಶೀರ್ವದಿಸಿ ದೇವತೆಗಳೊಂದಿಗೆ ಮಾತನಾಡುವನು. | ಕಮಲಾಸನಾ |
     ದೇವೇಂದ್ರಾ! ಸುರಗುರುವೇ ! ದೇವಮುನಿಗಳಿರಾ ! ತ್ರಿಕಾಲಜ್ಞನಾದ
     ನಾರದ ಮಹರ್ಷಿಯ, ಭೂದೇವಿಯೂ ಹೇಳಿದ ವಿಚಾರವನ್ನೆಲ್ಲಾ
     ಕೇಳಿದಿರಲ್ಲವೆ ? ಕಂಸಾದಿ ದುಷ್ಟ ರಾಕ್ಷಸರ ದುಷ್ಕೃತ್ಯಗಳನ್ನು ನಾ
     ನು ಬಲ್ಲೆನು. ಆದಾಗ್ಯೂ ಸಮಯವನ್ನು ಪ್ರತೀಕ್ಷಿಸುತ್ತಿದ್ದೆನು.
     ಈಗ ನಾನು ಭೂಲೋಕದಲ್ಲಿ ಅವತರಿಸುವುದಕ್ಕೆ ತಕ್ಕ ಸಮಯವು
     ಒದಗಿರುತ್ತದೆ. ಆದುದರಿಂದ, ನನ್ನ ಭಕ್ತರಾದ ದೇವಕೀ ವಸುದೇವ
     ರಿಗೆ ಪುತ್ರನಾಗಿ ಯದುಕುಲದಲ್ಲವತರಿಸುವೆನು. ಲಕ್ಷ್ಮಿಯು ರುಕ್ಮಿಣಿ
     ಯಾಗವತರಿಸಿ ನನ್ನನ್ನು ವರಿಸುವಳು. ಆದಿಶೇಷನು ಬಲರಾಮ
     ನಾಗಿ ಅವತರಿಸಿ ನನಗಗ್ರಜನಾಗುವನು. ಪರಾಶಕ್ತಿಯಾದ ಯೋಗ
     ಮಾಯೆಯು ನಂದಗೋಕುಲದಲ್ಲವತರಿಸಿ ನನ್ನಾಜ್ಣೆಯನ್ನು ಪರಿಪಾ
     ಲಿಸುವಳು. ದೇವತೆಗಳೆಲ್ಲರೂ ಯಾದವರಾಗಿ ಜನಿಸಲಿ. ಕಮಲಾಸ
     ನಾ ! ಸಮಯೋಚಿತ ಕಾರ್ಯಕರಣದಲ್ಲಿ ಎಲ್ಲರೂ ದಕ್ಷರಾಗಿರುವಂತೆ
     ಮಾಡಬೇಕು. ದೇವತೆಗಳಿರಾ! ಮುನಿಗಳಿರಾ ! ನೀವಿನ್ನು ನಿರ್ಭೀತ
     ರಾಗಿರಬಹುದು !
          (ಎಂದು ಅಭಯಹಸ್ಥವನ್ನು ಅನುಗ್ರಹಿಸುವನು.)

 ಋಷಿಗಳು-ದೇವತೆಗಳು:-(ಕೈಮುಗಿದು) ಮಹಾಭಾಗ್ಯವು !
         ಅಪ್ಪಣೆಯಂತೆ ನಡೆದುಕೊಳ್ಳುವವು !
        [ಎಂದು ಬಿನ್ನವಿಸಿ, ಎಲ್ಲರೂ ನಿಷ್ಕ್ರಮಿಸುವರು.]

                ----------------------
               ಪ್ರಥಮಾ೦ಕಂ ಸಂಪೂರ್ಣ೦.
                 ---------------------

                ಲೀಲಾವಿನೋದಾಯ ನಮಃ !!!