ಈ ಪುಟವನ್ನು ಪ್ರಕಟಿಸಲಾಗಿದೆ



ಶ್ರೀರಸ್ತು

ಶ್ರೀಕೃಷ್ಣಲೀಲೆ

ದ್ವಿತೀಯಾಂಕಂ

ಪ್ರಥಮರಂಗಂ.

            
            
           ಪ್ರದೇಶ:- ಮಧುರಾ ಪಟ್ಟಣ
              ಕಲ್ಯಾಣಮಂಟಪ.

     [ಮಧುರಾಪುರದರಸನಾದ ಉಗ್ರಸೇನನು ತನ್ನ ಪುತ್ರಿಯಾದ
ದೇವಕಿಯನ್ನು, ಶೂರಸೇನನ ಪುತ್ರನಾದ ವಸುದೇವನಿಗೆ ಕೊಟ್ಟು,
ವಿವಾಹ ಮಹೋತ್ಸವವನ್ನು ನಡಿಸುತ್ತಿರುವನು. ಪುರೋಹಿತರು ವೇದ
ಮಂತ್ರಗಳನ್ನು ಪಠಿಸುತ್ತಿರುವರು. ಸುಮಂಗಲಿಯರು ಮಂಗಳ
ಗೀತವನ್ನು ಹಾಡುತ್ತಿರುವರು. ನಂತ್ರಿಸಾಮಂತರು ಸತ್ತಲೂ ಕುಳಿತಿ
ರುವರು. ಕಂಸನು ತಂಗಿಯ ಬಳಿಯಲ್ಲಿ ನಿಂತಿರುವನು]

ಪುರೋಹಿತರು:-
    ಶ್ರುತಿ|| ಧ್ರುವಂತೇರಾಜಾವರುಣೋಧ್ರುವಂ ದೇವೋಬೃಹಸ್ಪತಿಃ | ಧ್ರುವಂತ
ಇಂದ್ರಶ್ಚಾಗ್ನಿಶ್ಚ ರಾಷ್ಟ್ರಧಾರಯತಾ೦ ಧ್ರುವಮ್||
       
        ಶ್ರೀ ಲಕ್ಷ್ಮೀನಾರಾಯಣಾಭ್ಯಾ೦ ನಮಃ| ವಾಣೀಹಿರಣ್ಯಗರ್ಭಾಭ್ಯಾ೦ ನಮಃ
        ಉಮಾಮಹೇಶ್ವರಾಭ್ಯಾ೦ ನಮಃ | ಶಚೀಪುರಂದರಾಭ್ಯಾಂ ನಮಃ | ಮಾತಾ
        ಪಿತೃಭ್ಯಾಂ ನಮಃ | ಇಷ್ಟದೇವತಾಭ್ಯೋ ನಮಃ | ಸರ್ವೇಭ್ಯೋಮಹದ್ಭ್ಯೋ
        ನಮಃ ||

      ಶ್ಲೋ|| ತದೇವಲಗ್ನಂ ಸುದಿನಂತದೇವ | ತಾರಾಬಲಂ ಚಂದ್ರಬಲಂ ತದೇವ |
             ವಿದ್ಯಾಬಲಂದೈವಬಲಂತದೇವ ! ಲಕ್ಷ್ಮೀಪತೇತೇಂಘ್ರಿಯುಗಂಸ್ಮರಾಮಿ||