ಈ ಪುಟವನ್ನು ಪ್ರಕಟಿಸಲಾಗಿದೆ



ದ್ವಿತೀಯಾಂಕಂ

೧೭

ಎಲೌ ದೌರ್ಭಾಗ್ಯಳೇ ! ನಿನ್ನ ಅಷ್ಟಮಗರ್ಭದಲ್ಲಿ ಜನಿಸತಕ್ಕ
ಶಿಶುವು ನನ್ನನ್ನು ಕೊಲ್ಲುವುದೆಂದುನುಡಿದ ಅಶರೀರವಾಣಿಯನ್ನು
ಕೇಳಿದೆಯಲ್ಲವೆ ? ನೀನಿದ್ದರಲ್ಲವೇ ನಿನ್ನ ಶಿಶುವಿನಿಂದ ನನಗೆ ಭೀತಿಯುಂ
ಟಾಗುವುದು ? ಅನರ್ಥಕ್ಕೆ ಕಾರಣಭೂತಳಾದ ನಿನ್ನೊಬ್ಬಳನ್ನು ಸಂಹರಿಸಿ
ಬಿಟ್ಟರೆ ನಂತರ ನನಗೆ ಯಾವ ಭಯವೂ ಇರುವುದಿಲ್ಲವು.

      (ಎಂದು ಕತ್ತಿಯನ್ನು ಮೇಲಕ್ಕೆತ್ತುವನು.)
ವಸುದೇವ-(ಕಂಸನ ಕೈಯನ್ನು ಅಡ್ಡಗಟ್ಟಿ ಪ್ರಾರ್ಥಿಸುವನು.)

       ಭಾವಾ ! ಕಂಸ ಭೂಪಾಲಾ! ಸೈರಿಸು ! ಸೈರಿಸು ! ಏನೀ ಅನ್ಯಾ
ಯವು ? ಈಗೊಂದು ಮುಹೂರ್ತಕಾಲಕ್ಕೆ ಹಿಂದೆ ನಿನ್ನ ತಂಗಿಯನ್ನು
ಬಹು ಸಂಭ್ರಮದಿಂದ ರಥದಲ್ಲಿ ಕೂಡಿಸಿ ಪರಮ ವೈಭವದಿಂದ ಬೀದಿ
ಮೆರವಣಿಗೆ ಮಾಡಿಸಿ ಆನಂದಪಡುತ್ತಬಂದ ನಿನ್ನ ಸೋದರವಾತ್ಸಲ್ಯವು
ಇಷ್ಟುಬೇಗನೆ ಮಾಯವಾಯಿತೇ ? ಈಗೇನು ವಿಪತ್ತು ಸಂಭವಿಸಿತು?
ಈ ಪ್ರಮಾದಕ್ಕೆ ಕಾರಣವೇನು ? ಶಾಂತಚಿತ್ತನಾಗು ! ಕಾತುರಪಡಬೇಡ!

ಕಂಸ:-ಎಲೈ ವಸುದೇವನೇ ! ಪ್ರಪಂಚದಲ್ಲಿ ಪ್ರತಿಯೊಬ್ಬರೂ
ಅವರವರ ಸ್ವಸೌಖ್ಯವನ್ನೇ ಯೋಚಿಸುವರಲ್ಲದೆ ಪರರ ಸೌಖ್ಯವನ್ನು
ಯೋಚಿಸಲಾರರು. ಇವಳು ನಿನ್ನ ಭಾರ್ಯೆಯಾದುದರಿಂದ ನಿನಗೆ ಮುದ್ದಾ
ಗಿರಬಹುದು ! ಇವಳು ನನ್ನ ಪಾಲಿಗೆ ಗರ್ಭಶತ್ರುವೆಂದು ಯಾವ
ಕ್ಷಣದಲ್ಲಿ ಅಶರೀರವಾಣಿಯು ನುಡಿದಳೋ ಆ ಕ್ಷಣದಲ್ಲಿಯೇ ಇವಳ
ವಿಷಯದಲ್ಲಿ ನನಗಿದ್ದ ಪ್ರೇಮವು ನಿರ್ಮೂಲವಾಯಿತು! ಇವಳನ್ನು
ಸಂಹರಿಸಿದ ಹೊರತು ನನ್ನ ಮನಸ್ಸಿಗೆ ಸಮಾಧಾನ ವುಂಟಾಗಲಾರದು!
ಈ ದೌರ್ಭಾಗ್ಯಳನ್ನು ಈಗಲೇ ಕೊಲ್ಲುವೆನು !
           (ಎಂದು ಖಡ್ಗವನ್ನು ಝುಳಿಪಿಸುವನು.)

ವಸುದೇವನು:-(ಕಂಸನನ್ನು ತಡೆದು ಪ್ರಾರ್ಥಿಸುವನು.)

             ರಾಗ- ಹಿಂದುಸ್ಥಾನಿ - ಕಾಪಿ-ಆಟತಾಳ.

ಕ್ಷಮಿಸೆಮ್ಮನು ಭಾವಾ! ನಮಿಸುವೆವು ||ಪ|| ಅಮಮಾ ಈ ಕೋಪವು
ತರವಲ್ಲವು ||ಅ|| ಪ||
ಅಶರೀರವಾಣಿಯ ಪುಸಿಮಾತಿಗೇ| ಅಸಹಾಯಶೂರನೇ ಭಯವೇತಕೇ|
||ಕ್ಷಮಿ||