ಈ ಪುಟವನ್ನು ಪ್ರಕಟಿಸಲಾಗಿದೆ

೧೮ಕೃಷ್ಣಲೀಲೆ.

     ಭಾವಾ ! ಕಂಸ ರಾಜೇಂದ್ರಾ !! ಅಶರೀರವಾಣಿ ನುಡಿಯುವುದೆಂದ
ರೇನು ? ಆದರಂತೆ ನಡೆಯುವುದೆಂದರೇನು ? ಇಂತಹ ವಿಚಿತ್ರವನ್ನು
ಎಂದಾದರೂ ಕೇಳಿರುವೆವೆ ? ಪ್ರಾಣಿಕೋಟಿಗಳು ತಮ್ಮ ತಮ್ಮ ಕರ್ಮ
ಕ್ಕನುಸಾರವಾದ ಶುಭಾಶುಭ ಫಲಗಳನ್ನು ಹೊಂದಬೇಕಾದುದು ಸಹಜ
ವಾಗಿರುವಲ್ಲಿ, ಒಬ್ಬರಿಂದ ಮತ್ತೊಬ್ಬರಿಗೆ ಹಾನಿಯುಂಟಾಗುವುದೆಂ
ಬುದು ನಿಜವಾಗಲಾರದು.

ಶ್ಲೋ॥ ಸುಖಸ್ಯ ದುಃಖಸ್ಯನ ಕೋಪಿದಾತಾ | ಪರೋದದಾತೀತಿ ಕುಬುದ್ದಿರೇಷಾ|
      ಅಹಂಕರೋಮಿಾತಿ ವೃಥಾಭಿಮಾನಃ| ಸ್ವಕರ್ಮ ಸೂತ್ರ ಗ್ರಥಿತೋಹಿ ಲೋಕಃ

      ಸುಖದುಃಖಗಳು ಮತ್ತೊಬ್ಬರಿಂದ ತನಗುಂಟಾಗುವುದೆಂದು
ಹೇಳುವವರು ವಿವೇಕಿಗಳಲ್ಲವೆಂತಲೂ, ತಾವು ಇತರರಿಗೆ ಸುಖದುಃ
ಖಗಳನ್ನುಂಟು ಮಾಡುತ್ತೇವೆಂದು ಹೇಳುವವರು ದುರಭಿಮಾನಿಗಳೆಂ
ತಲೂ, ಆವರವರು ಮಾಡತಕ್ಕ ಪುಣ್ಯ ಪಾಪ ಕರ್ಮಗಳನ್ನನುಸರಿಸಿ ಅವರ
ವರಿಗೆ ಸುಖದುಃಖಗಳುಂಟಾಗುವುವೆಂತಲೂ, ಘಂಟಾಘೋಷವಾಗಿ ಹೇಳಿ
ರುವ ಮಹಾತ್ಮರ ವಚನವನ್ನು ಯೋಚಿಸಿ ನೋಡು. ಈ ವಾಕ್ಯದ
ಅಭಿಪ್ರಾಯವನ್ನು ಗ್ರಹಿಸಿದೆಯಾದರೆ, ತಂಗಿಯ ಮಕ್ಕಳಿಂದ ಅಣ್ಣನಿಗೆ
ವಿಪತ್ತು ಸಂಭವಿಸುವುದೆಂಬ, ಅಶರೀರವಾಣಿಯ ಮಾತು ಸಟಿಯಂಬುದು
ನಿನಗೇ ಗೋಚರವಾಗುತ್ತದೆ. ಭಾವಾ | ಒಡಹುಟ್ಟಿದ ತಂಗಿಯೆಂದೆಣಿ
ಸದೆ, ಉಭಯ ವಂಶಗಳನ್ನುದ್ದರಿಸುವ ಹೆಣ್ಣು ಮಗಳೆಂದೆಣಿಸದೆ, ಪತಿವ್ರ
ತೆಯಾದ ಸುಮಂಗಲಿಯೆಂದೆಣಿಸದೆ, ಮಹಾಪಾತಕವಾದ ಸ್ತ್ರೀಹತ್ಯೆ
ಯೆಂದಾದರೂ ಎಣಿಸದೆ, ಸಹಜ ಕೋಮಲೆಯಾದ ಅಬಲೆಯನ್ನು
ಕೊಲ್ಲುವುದು ನಿನಗೆ ಧರ್ಮವೆ ? ಇದು ನಿನ್ನ ಕೀರ್ತಿಗೆ ಭಂಗಕರವಲ್ಲವೆ?

   ಕಂಸ:- ಎಲೈ ವಸುದೇವನೇ ! ನನ್ನನ್ನು ಯಾರೆಂದು ತಿಳಿದಿ
ರುವೆ ? ಒಂದು ಸಾರಿ ಭುಜಾಸ್ಫಾಲನಮಾಡಿ ಸಿಂಹನಾದ ಮಾಡಿದೆನಾದರೆ
ದಂಡಧರನಾದ ಯಮನು ಸಹಾ ಗುಂಡಿಗೆ ಹೊಡೆದು ಸಾಯುವನೆಂದು
ತಿಳಿ ! ನರಿಯ ಗರ್ಜನೆಗೆ ಸಿಂಹವು ಹೆದರುವುದೇನು ? ನಿನ್ನ ಶುಷ್ಕೋ
ಕ್ತಿಗಳಿಂದ ನನ್ನನ್ನು ಹೆದರಿಸುತ್ತಿರುವೆಯೋ? ಅವಕ್ರಪರಾಕ್ರಮ