೪೯ತೃತೀಯಾಂಕ೦
ವಸುದೇವ:-(ತನ್ನಲ್ಲಿ) ಇದೇನಾಶ್ಚರ್ಯವು? ಭಯಂಕರವಾದ
ಗುಡುಗು, ಸಿಡಿಲು, ಮಿಂಚುಗಳಿಂದೊಡಗೂಡಿದ ವರ್ಷವು ವಿಪರೀತ
ವಾಗಿ ವರ್ಷಿಸಿದಾಗ್ಗೂ ಶಿಶುವಿನ ಮೇಲೆಯಾಗಲಿ, ನನ್ನ ಮೇಲೆಯಾ
ಗಲಿ ಒಂದು ಹನಿಯಾದರೂ ಬೀಳಲಿಲ್ಲವಲ್ಲಾ!
(ಎಂದು ಸುತ್ತಮುತ್ತಲೂ ನೋಡತೂಡಗಿ, ಹಿಂದಕ್ಕೆ ನೋಡು
ವಾಗ್ಗೆ ಸರ್ವರಾಜನಾದ ಶೇಷನು ಕಾಣಿಸುವನು)
ವಸುದೇವ- (ಆಶ್ಚರ್ಯದಿಂದ) ಆಹಾ ! ಇದೇನು ವಿಚಿತ್ರವು?
ಫಣಿರಾಜನಾದ ಶೇಷನು ತನ್ನ ವಿಶಾಲವಾದ ಹೆಡೆಗಳನ್ನು ಬಿಚ್ಚಿ , ಶಿಶು
ವಿನ ಮೇಲ್ಬಾಗದಲ್ಲಿ ಛತ್ರಿಯಂತೆ ಹರಡಿರುವನು. ಈತನೆಷ್ಟು ದೂರದಿಂ
ದ ಹೀಗೆ ಬರುತ್ತಿರುವನೆಂಬುದನ್ನೇ ನಾನರಿಯೆನು. ಎಲ್ಲವೂ ಭಗವದಾ
ಜ್ಣೆಯು.
ಶ್ಲೋ|| ನಮೋನಂತಾಯ ಶೇಷಾಯ, ನಾಗಾಧೀಶಾಯತೇ ನಮಃ|
ಧರಾಧರಾಯ ಪೂರ್ಣಾಯ ವಿದ್ಯುತ್ತೇಜಾಯತೇ ನಮಃ |
(ಎಂದು ಶೇಷನನ್ನು ಸ್ತೋತ್ರಮಾಡುತ್ತಾ ತೆರಳುವನು)
*** ***** ***** ***
ತೃತೀಯಾಂಕಂ - ಚತುರ್ಥರಂಗಂ.
ಪ್ರದೇಶ:- ಗೋಕುಲ
(ನಂದಗೋಪನ ಪತ್ನಿಯಾದ ಯಶೋದಾದೇವಿಯು ಆಗತಾನೆ
ಪ್ರಸವಿಸಿರುವಳು. ಯಶೋದೆಗೆ ಪುತ್ರಿಯಾಗಿ ಅವತರಿಸಿದ ಶಿಶುವು
(ಯೋಗಮಾಯೆಯು) ದೇದೀಪ್ಯಮಾನವಾದ ತನ್ನ ತೇಜಸ್ಸಿನಿಂದ ಹೆರಿಗೆ
ಯ ಮನೆಯನ್ನೆಲ್ಲಾ ಬೆಳಗುತ್ತಿರುವಳು. ಶಿಶುವಿನ ಕಾಂತಿಗೆ ಮರು
ಳಾಗಿ ಯಶೋದೆ ಮುಂತಾದವರೆಲ್ಲರೂ ನಿದ್ರಾವರವಶರಾಗಿರುವರು. ವಸು
ದೇವನು ಮೆಲ್ಲನೆ ಪ್ರವೇಶಿಸಿ ಶಿಶುವನ್ನು ನೋಡುವನು.)
ವಸುದೇವ-ಭಕ್ತವತ್ಸಲನಾದ ಭಗವಂತನು ಹೇಳಿದಂತೆ ನಂದ
ಗೋಪನ ಪತ್ನಿಯಾದ ಯಶೋದೆಯ ಗರ್ಭದಲ್ಲಿ ಜನಿಸಿದ ಈ ಶಿಶುವು
ಮನಮೋಹನಕರವಾಗಿ ರಾರಾಜಿಸುತ್ತಿರುವುದು. ಭಗವದಾಜ್ಞೆಯಂತೆ
ಪುಟ:ಶ್ರೀ ಕೃಷ್ಣ ಲೀಲೆ.djvu/೬೪
ಈ ಪುಟವನ್ನು ಪ್ರಕಟಿಸಲಾಗಿದೆ