ಈ ಪುಟವನ್ನು ಪ್ರಕಟಿಸಲಾಗಿದೆ


೫೦ಕೃಷ್ಣಲೀಲೆ

ನನ್ನ ಮುದ್ದು ಕೂಸನ್ನಿಲ್ಲಿಟ್ಟು, ಈ ಕೂಸನ್ನು ನಾನು ತೆಗೆದುಕೊಂಡು
ಹೋಗುವೆನು.
   (ಎಂದು ನಿಶ್ಚಯಿಸಿ, ತನ್ನ ಶಿಶುವನ್ನಲ್ಲಿ ಮಲಗಿಸಿ, ಆ ಶಿಶುವನ್ನು
ತಾನೆತ್ತಿಕೊಂಡು ಹಿಂದಿರುಗಿ ತೆರಳುವನು).

          ಪ್ರದೇಶ:- ಮಧುರಾಪುರದ ಕಾರಾಗೃಹ

    ವಸುದೇವನು ಯೋಗಮಾಯಾ ಶಿಶುವನ್ನು ತಂದು ದೇವಕಿಯ
ಮಗ್ಗಲಲ್ಲಿ ಮಲಗಿಸಿ ತಾನು ಕೈಗೆ ಸಂಕೊಲೆಗಳನ್ನು ಹಾಕಿಕೊಳ್ಳು
ವನು. ಬಾಗಿಲುಗಳೆಲ್ಲವೂ ಯಥಾಪ್ರಕಾರ ಮುಚ್ಚಿಕೊಳ್ಳುವುವು. ಶಿಶುವು
ಅಳುವುದಕ್ಕಾರಂಭಿಸುವುದು. ದೇವಕಿಯು ಎಚ್ಚತ್ತು ಮಗುವನ್ನು
ಮುದ್ದಾಡುವಳು. ಮಗುವು ಮತ್ತಷ್ಟು ಗಟ್ಟಿಯಾಗಿ ಆರ್ಭಟಿಸು
ವುದು. ನಿದ್ರಾಪರವಶರಾಗಿದ್ದ ಕಾವಲುಗಾರರು ಬೆಚ್ಚು ಬಿದ್ದೇಳುವರು.
ದೇವಕಿಯು ಪ್ರಸವಿಸಿದಳೆಂದರಿತು, ಗಾಬರಿಯಿಂದ ಕಂಸನ ಬಳಿಗೆ ಓಡಿ
ಹೋಗುವರು.

    'ಪ್ರದೇಶ'- ಕಂಸನ ಅರಮನೆಯ ಮುಂಭಾಗ.

   ಹಂಸತೂಲಿಕಾ ತಲ್ಪದಮೇಲೆ ಮಲಗಿ ನಿದ್ರಿಸುತ್ತಿದ್ದ ಕಂಸನು,
ತನ್ನನ್ನು ಯಾರೋ ಹೊಡೆಯಲು ಬಂದಂತೆ ಕನಸು ಕಂಡು, ನಿದ್ದೆಗಣ್ಣಿ
ನಲ್ಲಿಯೇ ಎದ್ದು ಬಂದು ಬೀದಿಯಲ್ಲಿ ತಿರುಗಾಡುತ್ತ ಕಳವಳಿಸುತ್ತಿರು
ವನು.

ಕಂಸ:-ಯಾರದು ? ಚೀ ಚೀ ! ಮೂರ್ಖರೇ ! ನಿಮ್ಮಹೆಸ
ರೇನು ? ನನ್ನನ್ನು ಹೊಡೆಯುವಿರಾ ? ಯಾರೆಂದರೇ ನಗುವಿರಲ್ಲಾ !
ಏನು ಎಹ್ಹೆ ಹ್ಹೆ ಹ್ಹೆ ಹ್ಹೆ? ಸುಮ್ಮನೇ ಹಲ್ಲು ಕಿಸಿದರೇ ಅರ್ಥವೇನು ? (ಎಂ
ದು ಕಳವಳಿಸುತ್ತ ಮತ್ತಷ್ಟು ಗಟ್ಟಿಯಾಗಿ ) ಯಾರಲ್ಲಿ ? ನಾನು
ಸಾಯಬೇಕೋ ? ಎಂಟನೇ ಗರ್ಭವೋ ? ನೀವೇ ಕೊಲ್ಲುವಿರೋ?
ಸಾಕು ಸಾಕು !
   ಇಂತು ಹುಚ್ಚನಂತೆ ತನ್ನಷ್ಟಕ್ಕೆ ತಾನೇ ಪೇಚಾಡಿಕೊಳ್ಳುತ್ತ
ಬೀದಿಯಲ್ಲಿ ಓಡಾಡುತ್ತಿದ್ದ ಕಂಸನನ್ನು, ಕಾರಾಗೃಹದಿಂದ ಬಂದ ಸೇವ
ಕರು ನೋಡುವರು.