ಈ ಪುಟವನ್ನು ಪ್ರಕಟಿಸಲಾಗಿದೆ

೫೩ತೃತೀಯಾಂಕಂ

          ರಾಗ--ಕಮಾಚ್ ಅಥವಾ ಸುರಟಿ-ಆದಿ

  ಬಿಡು ಬಿಡು ಕೋಪವನು, ಅಣ್ಣಯ್ಯ ನಿನ್ನ ! ಅಡಿಗಳಿಗೆರಗುವೆನು ||ಪ||
  ಪಿಡಿದು ಪಸುಳೆಯನು ಕಡು ಕಾತುರದಿಂ | ದಡಿಗಡಿಗೀಪರಿ ದುಡುಕುವುದೇನಿ
  ದು||ಬಿಡು||ಅ-ಪ|| ಅಳಿಯನಲ್ಲವಣ್ಣ | ನಿನಗೆ ಮುದ್ದು ಸೊಸೆ ಇದು ಕ್ಷಮಿ
  ಸಣ್ಣ! ಗಗನವಾಣಿ ನುಡಿ ಸಟೆಯಾಯಿತು ಕೇಳ್, ಮಿಗೆ ಸುಖವನು ನೀಂ
  ಪಡೆಯುವೆ ನಿಜವಿದು || ಬಿಡು ||

  ಅಣ್ಣಾ ! ಕ್ಷಣ ಮಾತ್ರ ಸೈರಿಸು ! ಈ ಪಸುಳೆಯನ್ನೇತಕ್ಕೆ ಕೊ
ಲ್ಲುವೆ ? ಇದು ಗಂಡು ಮಗುವಲ್ಲ. ಹೆಣ್ಣು ! ನನ್ನ ಗರ್ಭದಲ್ಲಿ ಜನಿ
ಸುವ ಗಂಡು ಮಗುವಿನಿಂದ ನಿನಗೆ ಹಾನಿಯುಂಟಾಗುವುದೆಂದಲ್ಲವೇ
ಅಶರೀರವಾಣಿಯು ನುಡಿದುದು ! ಆ ಮಾತು ಸುಳ್ಳಾಯಿತು. ಈ ಶಿಶುವು
ನಿನಗಳಿಯನಲ್ಲ-ಸೊಸೆಯು. ನಾನು ನಿನ್ನ ತಂಗಿಯಲ್ಲವೆ ? ನನ್ನ
ಮಾತನ್ನು ಲಾಲಿಸು ಅಣ್ಣಾ ! ಹೆಣ್ಣನ್ನು ಕೊಲ್ಲುವುದು ರಾಜಧರ್ಮ
ವಲ್ಲ. ರಾಜಾಧಿರಾಜರಾದ ನಳ-ಹರಿಶ್ಚಂದ್ರ ಮಾಂಧಾತಾದಿ ಮಹೀಪಾ
ಲಕರು ನಡೆದ ರೀತಿಯಲ್ಲಿ ನಡೆ ! ಪ್ರಪಂಚವೆಲ್ಲವೂ ನಿನ್ನನ್ನು ಹೊಗ
ಳುವಂತೆ ಪ್ರವರ್ತಿಸು. ಮಹಾತ್ಮರ ಪದ್ದತಿಯನ್ನನುಸರಿಸು. ಅದ
ರಿಂದ ನಿನ್ನ ಕೀರ್ತಿಯು ನಿಷ್ಕಳಂಕವಾಗಿ ಶೋಭಿಸುವುದು. ನಾನು
ನಿನ್ನ ಒಡಹುಟ್ಟಿದವಳಲ್ಲವೆ ? ಮನೆಯ ಹೆಣ್ಣು ಮಗಳು ಕಣ್ಣೀರು ಹಾ
ಕಿದರೆ ಅದು ಕುಲನಾಶನಕ್ಕೆ ಕಾರಣವಾಗುವುದಲ್ಲವೆ ! ಇದು ನಿನಗೆ
ತಿಳಿಯದ ವಿಷಯವಲ್ಲವು. ನನ್ನನ್ನು ರಕ್ಷಿಸುವ ಭಾರವು ನಿನ್ನದಲ್ಲವೆ ?
ಅನುಜಳನ್ನು ಅಗ್ರಜನೇ ಹಿಂಸಿಸ ತೊಡಗಿದರೆ ಅದನ್ನು ಪರಿಹರಿಸುವ
ರಾರು? ಅಣ್ಣಾ ! ಸುಮಂಗಲಿಯೂ, ಆರ್ತಳೂ, ಪುತ್ರ ಶೋಕ ಭೀತ
ಳೂ, ನಿನ್ನ ಶರಣು ಹೊಕ್ಕಿರುವವಳೂ ಆದ ನನ್ನನ್ನು ಸಂಕಟ ಪಡಿಸ
ಬೇಡ. ಶರಣಾಗತರನ್ನು ಕಾಡಿಸುವುದು ಧರ್ಮವಲ್ಲ. ಅಣ್ಣಾ ! ಅಬಲೆ
ಯಾದ ನನ್ನನ್ನು ಕಾಡಿಸುವುದು ಧರ್ಮವಲ್ಲ. ಅಣ್ಣಾ ! ನಿನ್ನ ತಂಗಿಯಾದ
ನನ್ನನ್ನು ರಕ್ಷಿಸು ! ರಕ್ಷಿಸು!!

     (ಎಂದು ಕಣ್ಣೀರು ಸುರಿಸುತ್ತ ದೇವಕಿಯು ಕಂಸನ ಪಾದಗಳ ಮೇಲೆ ಬಿದ್ದು ಬೇಡುವಳು.)

ಕಂಸ-(ದೇವಕಿಯನ್ನು ಒದ್ದು ತಳ್ಳುತ) ದೌರ್ಭಾಗ್ಯಳೆ ! ನಿನ್ನ
ದೆಸೆಯಿಂದಲ್ಲವೆ ನನಗಿಷ್ಟೊಂದು ಮನಸ್ಸಂಕಟವು ? ಪವಿತ್ರವಾದ