ಈ ಪುಟವನ್ನು ಪ್ರಕಟಿಸಲಾಗಿದೆ


೫೪ಕೃಷ್ಣಲೀಲೆ.

ಭೋಜಕುಲಕ್ಕೆ ನೀನು ಮೃತ್ಯು ದೇವತೆಯಾಗಿ ಜನಿಸಿರುವೆ. ಚೀ ಚೀ !
ಮೂರ್ಖಳೆ ! ದೂರ ಸಾರು, ಇಲ್ಲವಾದರೆ ನನ್ನೀ ಖಡ್ಗಧಾರೆಗೆ ನೀನೂ
ತುತ್ತಾಗುವೆ. (ಎಂದು ತಂಗಿಯನ್ನು ನೀಚವಾಗಿ ಬೈಯ್ಯುತ ದೂ
ರಕ್ಕೆ ತಳ್ಳಿ ಆಕೆಯ ಎದುರಿನಲ್ಲಿಯೇ ಆ ಶಿಶುವಿನ ಕಾಲುಗಳನ್ನು ಪಿಡಿದು
ಮೇಲಕ್ಕೆಸೆದು, ಕತ್ತಿಯನ್ನು ಬೀಸುವನು).

ದೇವಕಿ:- (ಕೈಗಳನ್ನು ಮೇಲಕ್ಕೆತ್ತಿ) ಹಾ! ಹಾ! ದೈವವೇ !
ಇನ್ನೇನುಗತಿ !

(ಎಲ್ಲರೂ ಮೇಲಕ್ಕೆ ದೃಷ್ಟಿಯಿಟ್ಟು ನೋಡುತ್ತಿರುವರು.)


Insert picture >>






    (ಯೋಗಮಾಯಾ ಸಂದರ್ಶನ)