ಈ ಪುಟವನ್ನು ಪ್ರಕಟಿಸಲಾಗಿದೆ



 
೫೭ತೃತೀಯಾಂಕಂ.

ನಮ್ಮ ಕರ್ಮವನ್ನು ನಾವನುಭವಿಸಿದೆವು ನೀನೇಕೆ ದುಃಖಿಸುವೆ?
ಗತಿಸಿದ ಕಾರ್ಯಕ್ಕೆ ಪಶ್ಚಾತ್ತಾಪವೇ ಪ್ರಾಯಶ್ಚಿತ್ತವು. ಮಾಡತಕ್ಕು
ದೇನು ? ದೈವವಿಲಾಸವನ್ನು ಮೀರ ತಕ್ಕವರಾರು? ಇನ್ನಾದರೂ
ಸನ್ಮಾರ್ಗದಲ್ಲಿ ಕಾಲಕಳೆಯುತ್ತ ಭಗದನುಗ್ರಹಕ್ಕೆ ಪಾತ್ರನಾಗು!
    [ಕಂಸನು ದೀನ ಮುಖದಿಂದ ತೆರಳುವನು. ಎಲ್ಲರೂ ನಿಷ್ಕ್ರ
ಮಿಸುವರು.]

            ಪ್ರದೇಶ:- ಗೋಕುಲ.
 
    "ಯಮುನಾ ತೀರದಲ್ಲಿ" ಬೃ೦ದಾವನ ಪೂಜೆಯೆಂಬ ಉತ್ಸವವನ್ನು
ನಡಿಸುತ್ತ, ಗೋಪ-ಗೋಪಿಯರೊಂದಿಗೆ ನಂದಗೋಪನು ವಿನೋದ
ಮಗ್ನನಾಗಿರುವನು.

Insert picture>>

ಶ್ಲೋಕ|| ಯನ್ಮೂಲೇ ಸರ್ವ ತೀರ್ಥಾನಿ, ಯ ನ್ಮಧ್ಯೇ ಸರ್ವದೇ ವತಾಃ|
        ಯದಗ್ರೇ ಸರ್ವವೇದಾಶ್ಚ ತುಲಸೀಂ ತಾಂ ನಮಾಮ್ಯಹಂ|

ತಾತ್ಪರ್ಯ|| ಯಾವ ಮೂಲದಲ್ಲಿ ಸಮಸ್ತ ತೀರ್ಥಗಳೂ, ಮಧ್ಯದಲ್ಲಿ
           ಸಮಸ್ತ ದೇವತೆಗಳೂ, ಅಗ್ರದಲ್ಲಿ ಸಮಸ್ತ ವೇದಗಳೂ
           ಪ್ರಸನ್ನವಾಗಿರುವುವೋ ಅಂತಹ ತುಲಸಿಗೆ ನಮಸ್ಕಾರವು!