ಈ ಪುಟವನ್ನು ಪ್ರಕಟಿಸಲಾಗಿದೆ

೫೮ಕೃಷ್ಣಲೀಲೆ

ಗೋಪಸುಂದರಿಯರು:- ರಾಗ-ಮಧ್ಯಮಾವತಿ-ಏಕತಾಳ.

  ಬೃಂದಾವನ ವಾಸಿನಿ ಶ್ರೀತುಲಸೀ | ನಾರಾಯಣನರಸೀ ||ಪ||
  ಸುಂದರಾಂಗಿ ನವ ನವ ವಿಲಾಸಿನೀ| ಮಂದರ ಧರ ಗೋವಿ೦ದ ವಿನೋದಿನಿ||ಆ-ಪ।।
  ನಿತ್ಯವು ಪೂಜಿಪ ಭಕ್ತರ ಮನೆಯಲಿ| ನಿತ್ಯೋತ್ಸವ ಸೌಭಾಗ್ಯಂಗಳನು|
  ಅತ್ಯಾನಂದದಿ ನೆಲೆಗೊಳಿಸುವ ಸರ್ವೋತ್ತಮ ಶುಭಮಂಗಳ ವರದಾಯಿನಿ||
  ಬೃ೦ದಾ||
  ದೇವಮೌನಿ ವರಸನ್ನುತ ಚರಿತೇ| ಭಾವ ಜತಾತ ವಿಲೋಲರಸಯುತೇ |
  ದೇವಿ ನಿರತ ಶಿವರಾಮ ಸೇವಿತೇ ಭಾವನೀಯ ಕರುಣಾರಸ ಭರಿತೇ||ಬೃಂದಾ||

ನಂದ:-ಎಲೈ, ಬಂಧುಜನರೆ ! ಬೃಂದಾವನದ ಸುತ್ತಲೂ, ಹಸರು
ತೋರಣಗಳನ್ನು ಕಟ್ಟಿರಿ, ಮಾಧವನ ಪೂಜೆಗೆ ಬೇಕಾದ ಸಾಮ
ಗ್ರಿಗಳನ್ನು ಸಿದ್ದಪಡಿಸಿರಿ. ನಮ್ಮ ಕುಲಗುರುಗಳಾದ ಗರ್ಗಾಚಾರ್ಯ
ರನ್ನು ಕುಟುಂಬ ಸಮೇತರಾಗಿ ಬರಮಾಡಿರಿ.

ಗೋಪರು:- ಒಡೆಯಾ! ತನ್ನಪ್ಪಣೆಯಂತೆ ಎಲ್ಲವನ್ನೂ ಸಿದ್ದ
ಪಡಿಸುವೆವು.
    [ಎಂದು ಕೆಲವು ಮಂದಿ ಗೋಪರು ನಿಷ್ಕ್ರಮಿಸುವರು. ಸ್ವಲ್ಪ
ಹೊತ್ತಿನಮೇಲೆ ಗರ್ಗಾಚಾರ್ಯರು ತಮ್ಮ ಪತ್ನಿಯಾದ ಸುಮಿತ್ರಾದೇವಿ.
ಯೊಂದಿಗೆ ಪ್ರವೇಶಿಸುವರು.]

    [ನಂದನು ಆಚಾರ್ಯ ದಂಪತಿಗಳಿಗೆ ವಂದಿಸುವನು.]

ನಂದ:- ಆಚಾರ್ಯರಿಗೆ ವಂದಿಸುವೆನು.

ಗರ್ಗಾಚಾರ್ಯ:- ನಂದಗೋಪನೆ ! ಆಯುಷ್ಮಂತನಾಗು!
   [ತದನಂತರ ಸುಮಿತ್ರಾದೇವಿಗೆ ವಂದಿಸುವನು.]

ಸುಮಿತ್ರೆ:-ಪುಣ್ಯಾತ್ಮನೆ ! ನಿನಗೆ ಮಂಗಳವಾಗಲಿ.

ನಂದ:- ಪೂಜ್ಯರೇ ! ಈ ಪೀಠಗಳನ್ನಲಂಕರಿಸಿರಿ.

ಗರ್ಗಾಚಾರ್ಯ:- ಆಗಬಹುದು.
  [ದಂಪತಿಗಳು ಸುಖಾಸೀನರಾಗುವರು.]