ಈ ಪುಟವನ್ನು ಪ್ರಕಟಿಸಲಾಗಿದೆ

೭೦ಕೃಷ್ಣಲೀಲೆ

ಇನ್ನು ಅಲಕ್ಷ್ಯವಾಗಿ ಮಾತನಾಡುತ್ತಿರುವನಲ್ಲಾ, ಇದ್ದು ಇದ್ದು ನಾನು
ಒಳ್ಳೆಯ ಸ್ಥಳಕ್ಕೇ ಬಂದೆನಲ್ಲಾ! ಆಗಲಿ, ಮತ್ತೇನು ವಿಚಿತ್ರಗಳು
ನಡೆಯುವುವೋ ನೋಡುವೆನು.

ಕಂಸ:--ನಿನಗೆ ಏನೇನು ವಿದ್ಯೆಗಳು ಬರುತ್ತವೆ?

ವಿದ್ವಾಂಸ:--ಸರಿ ಸರಿ ! ಈತನು ಮಾಡಿದ ಉಪಚಾರಕ್ಕೆ ಸಲು
ವಾಗಿ ವಿದ್ವತ್ಪರೀಕ್ಷೆಯೂ ಆಗಬೇಕೋ ?

ಕಂಸ:-ಏಕೆ ಸುಮ್ಮನಿರುವೆ ? ನಿನಗೆ ಬರತಕ್ಕ ವಿದ್ಯೆಗಳನ್ನೆಲ್ಲಾ
ಸ್ವಲ್ಪಸ್ಪಲ್ಪ ಹೇಳು ನೋಡೋಣ !

ವಿದ್ವಾಂಸ:--(ತನ್ನಲ್ಲಿ) ಇವನ ರಸಿಕತ್ವವನ್ನು ಎಷ್ಟು ಕೊಂ
ಡಾಡಿದರೂ ಸಾಲದು. ಎಲ್ಲಾ ವಿದ್ಯೆಗಳನ್ನೂ ಸ್ಪಲ್ಪ ಸ್ವಲ್ಪ ಹೇಳ
ಬೇಕಂತೆ ! ನಾನು ಹೇಳಿದರೆ, ಇವನು ನೋಡುವನಂತೆ ! ಹೇಳುವುದ
ನ್ನು ಕೇಳುವುದು ಸಹಜವು, ನೋಡುವುದು ಹೇಗೆ?

ಕಂಸ:-ಏಕೆ ಮಂಕುಸಿದ್ಧನಂತೆ ಮಿಡಕರಿಸುತ್ತಿರುವೆ?

ಅಘಾಸುರ:-ಇಂತಹ ಮಹಾಸಭೆಯಲ್ಲಿ ಮಾತನಾಡಬೇಕಾದರೆ
ಎಲ್ಲರಿಗೂ ಸಾಧ್ಯವೇ ಮಹಾ ಪ್ರಭೂ?

ವಿದ್ವಾಂಸ:-ಅಲ್ಲವೇಮತ್ತೆ ! ಈ ಪಾಟಿ ಘನಪಂಡಿತರಿರುವ ಸಭೆ
ಯಲ್ಲಿ ಯಾವ ವಿದ್ವಾಂಸನು ತಾನೇ ಮಾತನಾಡಬಲ್ಲನು?

ಧೇನುಕಾಸುರ:--ಇವನೆಲ್ಲೋ ಕಾಡಿನಿಂದ ಬಂದ ಕೋತಿಯಂತೆ
ಕಾಣುವನು. ಇಂಥವನು ನನ್ನು ಸಭೆಗೆ ಅರ್ಹನಲ್ಲ.

ವಿದ್ವಾಂಸ:-(ಪ್ರಕಾಶವಾಗಿ) ಅದು ನಿಜ!

ಶ್ಲೋ|| ಹಂಸೋನ ಭಾತಿ ಬಲಿಭೋಜನ ಬೃಂದ ಮಧ್ಯೇ|
       ಗೋಮಾಯು ಮಂಡಲ ಗತೋ ನ ವಿಭಾತಿ ಹರಿಣಃ|
       ಜಾತ್ಯೋನ ಭಾತಿ ತುರಗಃ ಖರಯೂಧ ಮಧ್ಯೇ|
       ವಿದ್ವಾನ್ನ ಭಾತಿ ಪುರುಷೇಷು ನಿರಕ್ಷ ರೇಷು ||

       ಕಾಗೆಗಳ ಗುಂಪಿನ ಮಧ್ಯದಲ್ಲಿ ಹಂಸವೂ, ನರಿಗಳ ಮಧ್ಯದಲ್ಲಿ
ಸಾರಂಗವೂ, ಕತ್ತೆಗಳ ಮಧ್ಯದಲ್ಲಿ ಕುದುರೆಯ ಹೇಗೆ ಶೋಭಿಸು