ಈ ಪುಟವನ್ನು ಪ್ರಕಟಿಸಲಾಗಿದೆ



೭೧ತೃತೀಯಾಂಕಂ
 
ವುದಿಲ್ಲವೋ, ಅದರಂತೆಯೇ ನಿರಕ್ಷರಕುಕ್ಷಿಗಳಾದ ಈ ನಿರ್ಭಾಗ್ಯರ
ಮಧ್ಯದಲ್ಲಿ ನನ್ನ ಪಾಂಡಿತ್ಯವನ್ನು ಕೇಳತಕ್ಕವರಾರೂ ಇಲ್ಲವಾದಾಗ್ಯೂ
ಇಲ್ಲಿನ ವಿಚಿತ್ರಗಳನ್ನು ನೋಡಿ ನಾನಾದರೂ ಸಂತೋಷಪಡುವೆನು.

'ಕಂಸ:-ಏನಯ್ಯಾ ! ನಿನಗೆ ಸಂಗೀತ ಬರುತ್ತದೆಯ ?
ವಿದ್ವಾಂಸ:--ಸ್ವಲ್ಪಮಟ್ಟಿಗೆ ಬರುತ್ತದೆ.
ಕಂಸ:-ಎಲ್ಲಿ ! ಸ್ವಲ್ಪ ಹಾಡು ನೋಡೋಣ !
ವಿದ್ವಾಂಸ:--ಆಗಬಹುದು. (ಎಂದು ಹಾಡತೂಡಗುವನು.)

          ರಾಗ- ಈಶ ಮನೋಹರಿ ರೂಪಕ.
ಶ್ರೀರಘುರಾಮಂ ಭಜರೇ | ಚಿತ್ತ ಸದಾ । ನ೦ದಮಯಂ || ಪಲ್ಲವಿ ||
ಸಾರಿಗ ರೀ| ರೀ ಗಮಪಾ। ನೀಧಪಮಾ ಗಾರಿ ಸ ನೀ || ಪಲ್ಲವಿ ||
ವಾರಿಜಾ ಸ ! ನಾದಿನುತಂ| ವಾರಣ ಸಂ। ತಾಪಹರಂ || ಅನುಪಲ್ಲವಿ
ಗಾಗಮಾಮ | ಪಾಸನಿಸಾ | ನೀಧನಿಪಾ | ಮಾಗರಿಸನಿ | ಅನುಪಲ್ಲವಿ
ನಾಗರಾಜ| ಸೇವಿತಂ । ನರಸುರಾದಿ | ಪೂಜಿತಂ || ಚರಣ ||
ರೀಗಮಾರಿ! ಗಾಸರೀ| ಸನಿಧಪಾಗ | ರೀನಿಸಾ | ಚರಣ ||
ಯೋಗಿಮಾನ |ಸಾಲಯ೦! ರಾಗಲೋಭ | ವರ್ಜಿತಂ || ಚರಣ ||
ನೀಗ ರೀಮ। ಗಾಪಮಾ | ಪಾಗಮಾ ರಿ! ಗಾಪಮಾ|| ಚರಣ ||
ಶ್ರೀಗೌರೀನಾಥ ಮುದಿತಂ| ಶಿವರಾಮ ಹೃದಯ ನಿಲಯ|| ಚರಣ ||
ಸಾಸನ್ನಿಧಾನಿ ಧ ಪಮ| ಗಮಪಾಧಪ ಧ ನಿಸ ನಿ ಸಾ।| ಚರಣ ।।
ಸಾಗರ ಶಯನಂ ವಿಮಲಂ | ಸಂತತ ಪರಮಾನಂದಂ || ಚರಣ ||
ರೀಗಮರಿ ಗ ಸಾನಿಧಪಾ | ನಿನ್ನೀಧಪಮಗರ್ರೀಸನಿ || ಚರಣ ||

ಎಂದು ಮನೋಹರವಾಗಿ ವರ್ಣವನ್ನು ಹಾಡಲಾರಂಭಿಸುವನು.

ವಕ್ರವದನೆ:- ಹಾ ಹಾ ಹಾ ! ಸಾಕು, ಸಾಕು, ನಿಲ್ಲಿಸು, ನಿಲ್ಲಿಸು.
ಕಂಸ:-ಏಕೆ?
ವಕ್ರವದನೆ:-ಇವನ ಹಾಡಿಕೆಯು ಅಪಶಬ್ದಮಯವಾಗಿದೆ.
ಕಂಸ-ಹೇಗೆ ?
ಚಕ್ರವದನೆ:-ಇವನಿಗೆ ಸ್ವರಜ್ಞಾನವೇಯಿಲ್ಲ. ಕಡೆಗೆ ಸಪ್ತ
ಸ್ವರಗಳ ಅಕ್ಷರ ನಿಬಂಧನೆಯಾದರೂ ತಿಳಿದವನಲ್ಲ.