ಈ ಪುಟವನ್ನು ಪ್ರಕಟಿಸಲಾಗಿದೆ



೭೨ಕೃಷ್ಣಲೀಲೆ

ಕಂಸ:--ಅದು ಹೇಗೆ ?
ವಕ್ರವದನೆ:-ಎಲ್ಲಿ ಇವನ ಬಾಯಿಂದ ಸಪ್ತಸ್ವರಗಳು ಹೊರಡಲಿ
ನೋಡೋಣ?

ಕಂಸ:-ಎಲೈ ಪಂಡಿತನೇ! ಸಪ್ತಸ್ವರಗಳನ್ನು ಹೇಳು, ಕೇಳುವ.

ವಿದ್ವಾಂಸ:-ಸ-ರಿ-ಗ-ಮ-ದ-ದ-ನಿ
ವಕ್ರವದನೆ:-ಲಂಬೋದರಿ ಮುಂತಾದ ನರ್ತನಾಂಗನೆಯರೆಲ್ಲರೂ
ಒಂದೇ ಧ್ವನಿಯಿಂದ ತಪ್ಪೂ-ತಪ್ಪೂ ಎಂದು ಕೂಗುತ್ತ ನಗುವರು.
       [ವಿದ್ವಾಂಸನು ಭ್ರಾಂತನಾಗುವನು.]

ಕಂಸ:-ಏನು ತಪ್ಪು ?
ವಕ್ರವದನೆ:-ಪ್ರಭುವೇ| ಚಿತ್ತೈಸಬೇಕು. ಸ್ವರಗಳಲ್ಲಿ ಒಂದು
"ಸ” ಎಂತಲೂ, ಮತ್ತೊಂದು “ರಿ” ಎಂತಲೂ ಇರುತ್ತವೆಯೆ? ಒಂ
ದಕ್ಕೆ “ಸ” ಎಂಬ ತಲೆಕಟ್ಟೂ, ಮತ್ತೊಂದಕ್ಕೆ “ರಿ” ಎಂದು ಗುಡಿಸೂ
ಇರುತ್ತದೆಯೆ ? ಇದು ಶಾಸ್ತ್ರವಿರುದ್ದವು. ಯಾವುದಾದರೂ ಒಂದು
ವಿಧವಾಗಿರಬೇಕು.

ಕಂಸ:-ಅಹುದಹುದು ! ಈ ವಿಚಾರದಲ್ಲಿ ನನಗೂ ಸ್ವಲ್ಪ ಸಂಶ
ಯವುಂಟು.

ವಿದ್ವಾಂಸ:-ಚನ್ನಾಯಿತು !

ವಕ್ರವದನೆ:-ಆಹುದು-ಮಹಾಪ್ರಭೂ! ಇದ್ದರೇ ಸ-ರ-ಗ-
ಮ-ಪ-ದ-ನ, ಎಂದಿರಬೇಕು. ಇಲ್ಲವೇ ಸಿ-ರಿ-ಗಿ-ಮಿ-ಸಿ-ದಿ-ನಿ, ಎಂ
ದಿರಬೇಕು. `ಹಾಗಲ್ಲದೆ, ಒಂದನ್ನು ಸ” ಎಂತಲೂ, ಮತ್ತೊಂದನ್ನು
"ರಿ" ಎಂತಲೂ ಹೇಳಬೇಕಾದ ಕಾರಣವೇನು?

ಅಸುರರೆಲ್ಲರೂ:- ಭೇಷ್! ಭೇಷ್! ಬಹಳ ಸಮಂಜಸವಾದ
ಮಾತು. ಇದ್ದರೆ ಎಲ್ಲಕ್ಕೂ ಅಕಾರಗಳೇ ಇರಬೇಕು. ಇಲ್ಲವೇ ಎಲ್ಲ
ಕ್ಕೂ ಇಕಾರಗಳೇ ಇರಬೇಕು. ವಕ್ರವದನೆಯ ಮಾತು ನ್ಯಾಯ ವಾಗಿದೆ.