ಈ ಪುಟವನ್ನು ಪ್ರಕಟಿಸಲಾಗಿದೆ

೮೧ಚತುರ್ಥಾಂಕಂ

ಚಾರುಮತಿ:- ಯಶೋದಮ್ಮಾ ! ನಿನ್ನ ಸುಕುಮಾರನನ್ನು
ತೋರಿಸಿ ನಮ್ಮನ್ನು ಸಂತೋಷಪಡಿಸಮ್ಮ!

ಯಶೋದೆ:- ಲತಾಂಗಿಯರೆ ! ನಿಮ್ಮನ್ನು ಸಂತೋಷಪಡಿಸಬೇ
ಕೆಂಬುದೇ ನನ್ನ ಕೋರಿಕೆಯು. ಶ್ರೀಕೃಷ್ಣನನ್ನು ಈಗಲೇ ಕರಿ
ಸುವೆನು.

ವಸಂತಮಾಲತಿ:- ಬೇಗನೆ ಕರಿಸಮ್ಮ!
ಯಶೋದೆ:- ಸಖೀ ಪದ್ಮಿನಿ!
ಪದ್ಮಿನಿ:- ದೇವೀ ಏನಪ್ಪಣೆ?
ಯಶೋದೆ:- ನಮ್ಮ ಕೃಷ್ಣ ಮೂರ್ತಿಯನ್ನು ಕರೆತಾರಮ್ಮ!
ಪದ್ಮಿನಿ:- ಅಪ್ಪಣೆ.

   [ಪದ್ಮಿನಿಯು ಶ್ರೀಕೃಷ್ಣನನ್ನು ಕರೆದು ತರುವಳು. ಶ್ರೀಕೃ
ಷ್ಣನು, ನಾಟ್ಯವಾಡುವಂತೆ ಮೆಲ್ಲ ಮೆಲ್ಲನೆ ಹೆಜ್ಜೆಗಳನ್ನಿಡುತ್ತ ಪ್ರವೇಶಿ
ಸುವನು.]

      ಯಶೋದೆ:- ರಾಗ-ಮಧ್ಯಮಾವತಿ-ಆದಿ.
 
  ಬಾರೊ ಗೋಕುಲಬಾಲ ಶುಭಲೀಲಾ || ಪಲ್ಲ ||
  ಅಡಿಯಿಡುತ ಬಿರಬಿರನೆ ಬಾರೊ||ಅ-ಪ||
  ವರ ಗುಣಶೀಲಾ| ಪರಿಕಿಸೆ ನಿನ್ನನು| ಸರಸಿಜಾಕ್ಷಿಯರು ಬಂದಿಹರಯ್ಯ|
  ಸುರುಚಿರಾಕಾರಾ| ಬಾ ಸುಕುಮಾರಾ| ಕರುಣಾಕರ ಶಿವರಾಮಾಧಾರಾ||ಬಾರೊ||

[ಶ್ರೀಕೃಷ್ಣನು ಬರುತ್ತಲೇ ಯಶೋದೆಯು ಎತ್ತಿ ಮುದ್ದಾಡು
ವಳು. ತದನಂತರ ಗೋಪಿಯರೆಲ್ಲರೂ ಮುದ್ದಾಡುವರು.]

ಪದ್ಮಿನಿ:- ದೇವೀ!

ಯಶೋದೆ:-ಏನಮ್ಮಾ ಪದ್ಮಿನಿ!

ಪದ್ಮಿನಿ:-ಯಾರೋ ಒಬ್ಬ ಸುಮಂಗಲಿಯು ಬಂದಿರುವಳು.

ಯಶೋದೆ:-ಆಕೆಯನ್ನು ಮರ್ಯಾದೆಯಿಂದ ಒಳಗೆ ಬರಮಾಡು.

ಪದ್ಮಿನಿ:-ಅಪ್ಪಣೆ.