೮೨ಕೃಷ್ಣಲೀಲೆ
[ಕಂಸನಿಂದ ಕಳುಹಿಸಲ್ಪಟ್ಟ “ಪೂತನೆ” ಎಂಬ ರಕ್ಕಸಿಯು
ಮುತ್ತೈದೆಯಂತೆ ಕಪಟ ವೇಷವನ್ನು ಧರಿಸಿ ಒಳಗೆ ಪ್ರವೇಶಿಸುವಳು.]
ಯಶೋದೆ:-ಬನ್ನಿ ರಮ್ಯಾ! ಈ ಪೀಠದಲ್ಲಿ ಕೂಡಿರಿ, ತಮ್ಮ
ಸ್ಥಳ ವ್ಯಾವುದು ? ಎಲ್ಲಿಂದ ಬಂದಿರಿ ?
ಪೂತನೆ:-ಅಮ್ಮಾ-ನನ್ನ ಸ್ಥಳವು ಈ ಸಮೀಪದಲ್ಲಿಯೇ ಒಂದು
ಹಳ್ಳಿಯು. ಪುಣ್ಯಕ್ಷೇತ್ರಗಳನ್ನೂ, ಪುಣ್ಯತೀರಗಳನ್ನೂ ಸೇವಿಸಬೇಕೆಂಬ
ಕೋರಿಕೆಯಿಂದ ಮಹಾಯಾತ್ರೆಗೆ ಹೊರಟಿರುವೆನು.
ಶ್ರೀಕೃಷ್ಣ:-ಅಮ್ಮಾ ! ಈಕೆ “ಮಹಾಯಾತ್ರೆ” ಮಾಡುವುದಕ್ಕಾಗಿ
ಇಲ್ಲಿಗೆ ಬಂದಿರುವಳಂತೆ. ಕೇಳಿದೆಯೇನಮ್ಮಾ!
ಪೂತನೆ:- (ಆಚ್ಚರಿಯಿಂದ) ಸರಿಯಮ್ಮ! ಈ ಹುಡುಗನು
ಬಹಳ ಚಟುವಟಿಕೆಯುಂಟಾದವನು. ಏನು ತಿಳಿವಳಿಕೆ ? ಏನು ಕಥೆ ?
ಇವನು ಯಾರ ಮಗನಮ್ಮ?
[ಎಂದು ನಟಿಸುತ್ತ ಯಶೋದೆಯ ಕೈಯಲ್ಲಿದ್ದ ಕೃಷ್ಣನನ್ನು
ತಾನು ತೆಗದು ಮುದ್ದಾಡುತ್ತ ಕೃಷ್ಣನಿಗೆ ಹಾಲು ಕೊಡಲಾರಂಭಿ
ಸುವಳು]
ಯಶೋದೆ:- ಏನಮ್ಮಾ! ಮಗುವಿಗೆ ಹಾಲು ಕೊಡುವಿರಾ?
ಪೂತನೆ:- ಅಹುದಮ್ಮ!
ಯಶೋದೆ:ಹಾಗಾದರೆ ಸ್ವಲ್ಪ ಮರೆಯಾಗಿ ಕುಳಿತು ಕೊಡಿ
ರಮ್ಮಾ.
ಪೂತನೆ:-ಯಾತಕ್ಕಮ್ಮ? ಇಲ್ಲಿಯೇ ಕೊಡುವೆನು. ಏನೂ
ಭಯವಿಲ್ಲ.
(ಎಂದು ಕೃಷ್ಣನಿಗೆ ಹಾಲು ಕೊಡುವಳು. ಕೃಷ್ಣನು ಪೂತ
ನೆಯ ದೌರ್ಜನ್ಯವನ್ನರಿತು ಅವಳ ಶರೀರದಲ್ಲಿನ ಜೀವಬಲವನ್ನೆಲ್ಲಾ
ಹೀರಿಬಿಡುವನು. ಕೂಡಲೇ ಅವಳು ಸಿಡಿಲಿನ ಗರ್ಜನೆಯಂತೆ ಅರಚು
ತ್ತ ಪರ್ವತಾಕಾರವಾಗಿ ನೆಲಕ್ಕೆ ಬಿದ್ದು ಮೃತಳಾಗುವಳು. ಯಶೋದೆ
ಮುಂತಾದವರೆಲ್ಲರೂ ಭಯಭ್ರಾಂತರಾಗಿ ಓಡಿ ಬಂದು ಬಾಲಕನನ್ನೆತ್ತಿ
ಕೊಳ್ಳುವರು.]
ಪುಟ:ಶ್ರೀ ಕೃಷ್ಣ ಲೀಲೆ.djvu/೯೮
ಈ ಪುಟವನ್ನು ಪ್ರಕಟಿಸಲಾಗಿದೆ