ಈ ಪುಟವನ್ನು ಪ್ರಕಟಿಸಲಾಗಿದೆ


೮೩ಚತುರ್ಥಾ೦ಕಂ.

ಯಶೋದೆ:-(ಮಗನನ್ನೆತ್ತಿಕೊಂಡು) ಕಂದಾ ! ಕೃಷ್ಣಾ !
ಕೃಷ್ಣಾ! (ಎಂದು ತಲೆಸವರುತ, ಗೋಪಿಯರನ್ನು ಕುರಿತು) ನೋಡಿದಿ
ರೇನಮ್ಮಾ ! ಎಷ್ಟು ಮೋಸವಾಯಿತು. ಬಾಲಕನನ್ನು ದೇವರೇ ಕಾ
ಪಾಡಿದನು. ನನ್ನ ಪುಣ್ಯವು ಚನ್ನಾಗಿದ್ದಿತು. ಈ ಹಾಳು ರಕ್ಕಸಿಯು
ಎಲ್ಲಿಂದ ಬಂದಳಮ್ಮ!

ಇಂದುಲೇಖೆ:-ಅಮ್ಮಾ! ದೇವರು ನಮ್ಮ ಭಾಗದಲ್ಲಿರಲಾಗಿ
ನಾವು ಗಡ್ಡೆಗೆ ಬಿದ್ದೆವು.

ಕಳಾವತಿ:-(ಕೃಷ್ಣನ ಮುಖದಲ್ಲಿ ತನ್ನ ಮುಖವನ್ನಿಟ್ಟು)
ಹಾ ! ಮುದ್ದುಕಂದ! ಭಗವಂತನೇ ನಿನ್ನನ್ನು ಕಾಪಾಡಿದನು.

ಚಾರುಮತಿ:-ಮಾಯಾವಿನಿಯಾದ ಇವಳು ಬಂದಾಗಲೆ ನನಗೆ
ಅನುಮಾನವು ತೋರಿತು.

ಭಾನುಮತಿ:- ತಿಳಿದವಳು ಯಾಕೆ ಹೇಳಲಿಲ್ಲ ಮತ್ತೆ ?

ವಸಂತಮಾಲತಿ:-ಸರಿ ಸರಿ ! ಇದೆಲ್ಲಾ ಬರಿಯ ಭ್ರಾಂತಿ. ಭೂತ
ಭವಿಷ್ಯದ್ವರಮಾನಗಳನ್ನು ತಿಳಿಯುವುದಕ್ಕೆ ನಾವೇನು ಸರ್ವಜ್ಞರೆ?

ಪಬ್ಬಿನಿ:-ಹಾಗೆಲ್ಲಾ ತಿಳಿಯುವ ಹಾಗಿದ್ದರೆ ನಾವೇ ದೇವತೆಗಳಾ
ಗುತ್ತಿದ್ದೆವು! ಮನುಷ್ಯ ಮಾತ್ರರಿಗೆ ಅಂತಹ ವರಿಜ್ಞಾನವೆಲ್ಲಿಯದು?

ಯಶೋದೆ:-ಹೇಗೋ! ದೇವರು ಕಾಪಾಡಿದನು | ಪದ್ಮಿನೀ!
ಈ ಪಾಪಿ ರಕ್ಕಸಿಯ ವಿಚಾರವನ್ನು ಯಜಮಾನರಿಗೆ ತಿಳಿಸು. ಅವರಿ
ದನ್ನು ಹೊರಕ್ಕೆ ಸಾಗಿಸುವರು. ಅಷ್ಟರೊಳಗೆ ನಾವು ಪೂಜಾಗೃಹಕ್ಕೆ
ಹೋಗಿ, ಬಾಲಕನಿಗೆ ಭೀತಿ ಪರಿಹಾರಾರ್ಥವಾಗಿ, ರಕ್ಷೆಯಿಡಿಸಿ ಆರತಿ
ಎತ್ತುವೆವು.

ಪದ್ಮಿನಿ:-ಹಾಗೆಯೇ ಆಗಲಿ.
     [ಎಲ್ಲರೂ ನಿಷ್ಕ್ರಮಿಸುವರು.]

              ಪ್ರದೇಶ :- ಮಧುರಾಪುರ

ನಾರದರು:- (ದೇವಕೀ ವಸುದೇವರನ್ನು ನೋಡಲೆಳಸಿ ಮಧುರಾ
ಪುರಕ್ಕೆ ಬರುವರು).