ಈ ಪುಟವನ್ನು ಪರಿಶೀಲಿಸಲಾಗಿಲ್ಲ.

6. ಇಂಥ ಹೊತ್ತಿಗೆಯನ್ನು ಪುನಃ ಪ್ರಕಟಿಸುವಲ್ಲಿ ACPR (Academy of Comparative Philosophy and Religion, Belgaum) ಕೃತಕೃತ್ಯತೆಯನ್ನು ಭಾವಿಸುತ್ತದೆ. ಶ್ರೀ ಗುರುದೇವ ಡಾ|| ಆರ್.ಡಿ. ರಾನಡೆಯವರು ಸ್ವತಃ ಒಂದು ವಿಶ್ವವಿದ್ಯಾಲಯವೇ ಆಗಿದ್ದರು, ಅವರು ಅಲಂಕರಿಸಿದ ಅಲಹಾಬಾದ್ ವಿಶ್ವವಿದ್ಯಾಲಯದ ಕುಲಪತಿ' ಪದವಿಯು ಅಕ್ಷರಶಃ ಅನ್ವರ್ಥಕವಾಗಿತ್ತು. ಅವರು ತತ್ವಶಾಸ್ತ್ರದ ಓಡಾಡುವ ವಿಶ್ವಕೋಶವೇ ಆಗಿದ್ದರು. ಅವರ ಎಲ್ಲಾ ಅಂಶಗಳ ವ್ಯಾವಹಾರಿಕ ರೂಪವೇ ಅವರು ಸಂಕಲ್ಪಿಸಿ ಸ್ಥಾಪಿಸಿದ ACPR ಸಂಸ್ಥೆ (4 ಈ ಹೊತ್ತಿಗೆಯ ಪ್ರಕಟಣೆಗೆ ಪ್ರೇರಣೆ ಆದರಣೀಯ ಹಿರಿಯ ಲೇಖಕ ದಿ|| ಮ. ಶ್ರೀ ದೇಶಪಾಂಡೆಯವರ ಜೀರಂಜೀವಿ ಶ್ರೀ ಗೋವಿಂದ ಮ. ದೇಶಪಾಂಡೆ ಮಹನೀಯರು, ತಾವು ರಕ್ಷಿಸಿಕೊಂಡು ಬಂದ ಪ್ರಸ್ತುತ ಗ್ರಂಥದ ಪ್ರತಿಯನ್ನು ನೀಡಿ ಪ್ರಕಟಣೆಗೆ ಬೇಕಾದ ಆರ್ಥಿಕ ಸಹಾಯವನ್ನು ಸಲ್ಲಿಸಿ ನಮಗೆ ಒತ್ತಾಸೆಯಾಗಿ ನಿಲ್ಲದಿದ್ದರೆ ಈ ಕಾರ್ಯ ಸಾಧ್ಯವಾಗುವುದು ಕಷ್ಟವೇ ಆಗಿತ್ತು. ಈ ಆವೃತ್ತಿಯಲ್ಲಿ ಮಾಡಬೇಕಾದ ಸೂಕ್ತ ಬದಲಾವಣೆಗಳನ್ನು ಸೂಚಿಸಿ ಕರಡು ಪ್ರತಿಯನ್ನು ಈ ಇಳಿ ವಯಸ್ಸಿನಲ್ಲಿ ತಿದ್ದುವ ಕ್ಷಮತೆ ತೋರಿದ್ದು ಶ್ರೀ ಗುರುದೇವರು ಹಾಗೂ ಶ್ರೀ ಬಸವಣ್ಣನವರ ಮೇಲಿನ ಅವಿಚ್ಛಿನ್ನ ಪ್ರೀತಿಯಿಂದ ಎಂಬುದನ್ನು ನೆನೆದು ನಮ್ಮ ಹೃದಯ ಆದರ ಭಾವದಿಂದ ತುಂಬಿ ಬರುತ್ತದೆ. ಅವರಿಗೆ ನಾವು ಚಿರಋಣಿ. ಸಮನ್ವಯ ಸಿದ್ಧಾಂತವು ಕೇವಲ ಪಂಡಿತ ಚರ್ಚೆಯ ವಿಷಯವಾಗದೆ, ಅದು ಒಂದು ಸಾಮಾಜಿಕ ಬದ್ಧತೆಯ ಸೂತ್ರದಡಿಯಲ್ಲಿ ಸಾಧನಾರೂಪದಲ್ಲಿ ಬರಬೇಕೆಂಬ ಮಹಾಸಂಕಲ್ಪವನ್ನು ಶ್ರೀ ಗುರುದೇವರು ಹೊಂದಿದ್ದರು. “ದೇವರೊಬ್ಬ ಜಗವೆಲ್ಲ ಒಂದು, ಮಾನವೀಯತೆಯ ಧರ್ಮಒಂದೇ' ಎಂಬ ತತ್ವವನ್ನು ರೂಪಿಸಿ, ನಿರೂಪಿಸುವ ಸಂಸ್ಥೆ ACPR ೧೯೨೪ ರಲ್ಲಿ ಪುಣೆಯಲ್ಲಿ ಸ್ಥಾಪಿತವಾಗಿ, ೧೯೫೨ ರಲ್ಲಿ ಬೆಳಗಾವಿಯಲ್ಲಿ ಸ್ಥಾಯಿಯಾಗಿದೆ. ಈಗಿನ ಕೇಂದ್ರ ಕಟ್ಟಡವು ಅಂದಿನ ರಾಷ್ಟ್ರಪತಿ ಡಾ|| ಎಸ್. ರಾಧಾಕೃಷ್ಣನ್‌ರವರಿಂದ ೧೯೬೫ ರಲ್ಲಿ ಉದ್ಘಾಟಿತವಾಯಿತು. ಸಂಸ್ಥೆಯು ಈ ಕೆಳಗಿನ ಉದ್ದೇಶಗಳನ್ನು ಹೊಂದಿದೆ.