42
ಹೊರಡಲೊಲ್ಲದು. ವಿನೀತನಾಗಿ ಸದ್ಗುರುಗಳನ್ನು ವಂದಿಸಿದಾಗ ಅವರ
ಚರಣಗಳನ್ನು ತೊಳೆದ ಅಶ್ರುಗಳೇ ಆತನ ಭಾವನೆಯು ಉತ್ಕಟತೆಯನ್ನು
ಪ್ರಕಟಿಸಿದವು.
ಈಶಾನ್ಯ ಗುರುಗಳಿಗೆ ತಮ್ಮ ಕನಸು ನನಸಾಗುವ ಸಮಯವು
ಸನ್ನಿಹಿತ ಆಗಿದೆ ಎಂದೆನಿಸಿತು. ತಮ್ಮ ಶಿಷ್ಯವರನಾದ ಬಸವಣ್ಣನು ಇನ್ನು
ಕಾರ್ಯ ರಂಗಕ್ಕೆ ಇಳಿಯುವ, ಶಿವಭಕ್ತಿಯನ್ನು ಬೆಳೆಸುವ.
ಶಿವಭಾಂಧವ್ಯವನ್ನು ನಿರ್ಮಿಸುವ, ಹಾಗೂ ತಮ್ಮ ಬಹುದಿನಗಳ
ಮನೋರಥವನ್ನು ಪೂರ್ಣಗೊಳಿಸುವ. ಇನ್ನು ತಮ್ಮ ಜೀವನ
ಸಫಲವಾಯಿತು, ಎಂದೆನಿಸಿತವರಿಗೆ ಕೂಡಲೇ ಅವರು ಬಸವಣ್ಣನ
ಪ್ರಯಾಣದ ಸಿದ್ಧತೆಯನ್ನು ಮಾಡಿದರು. ಅವನಿಗೆ ಬಟುವಿನ ವೇಷವನ್ನು
ತೊರೆದು ಕರಣಿಕನ ವೇಷವನ್ನು ಧರಿಸಲು ಹೇಳಿದರು. ಬಸವಣ್ಣನು
ಗಣಿತ ವಿದ್ಯೆಯಲ್ಲಿಯೂ ಕರಣಿಕ ವಿದ್ಯೆಯಲ್ಲಿಯೂ ಕುಶಲನಿದ್ದುದರಿಂದ
ಅವನಿಗೆ ಅದೇ ಕಾಯಕವನ್ನು ಕೈಗೊಳ್ಳಲು ಬೋಧಿಸಿದರು.
ಮಂಗಳವಾಡದಲ್ಲಿನ ಬಾಚರಸನೆಂಬ ತಮ್ಮ ಶಿಷ್ಯನಿಗೆ ಒಂದು ಕಾಗದ
ಕಳುಹಿಸಿ, ಬಸವಣ್ಣನ ಬರವನ್ನು ಅವನಿಗೆ ತಿಳಿಸಿದರು. ಬಸವನನ್ನು ತನ್ನ
ಮನೆಯಲ್ಲಿ ಬರಮಾಡಿಕೊಳ್ಳಬೇಕು ಹಾಗೂ ಆತನನ್ನು ತಮ್ಮ ಭಕ್ತ
ಸಿದ್ಧರಸನೆಡೆ ಕರೆದುಕೊಂಡು ಹೋಗಬೇಕು ಎಂದು ಆತನನ್ನು
ಆಜ್ಞಾಪಿಸಿದರು. ಮೊದಲು ಬಸವಣ್ಣನೊಬ್ಬನೇ ಅಲ್ಲಿ ಹೋಗಬೇಕು.
ಆತನಿಗೆ ಅಲ್ಲಿ ಕೆಲಸವು ದೊರೆತ ಮೇಲೆ ಹಿಂದಿನಿಂದ ಅಕ್ಕಭಾವಂದಿರೂ
ಆತನೆಡೆ ತೆರಳಬೇಕು ಎಂದು ಗೊತ್ತು ಪಡಿಸಲಾಯಿತು. ಒಂದು
ಶುಭಮುಹೂರ್ತವನ್ನು ನೋಡಿ ಬಸವಣ್ಣನು ಅಲ್ಲಿಗೆ ಪ್ರಯಾಣ ಬೆಳೆಸಲು
ಸಿದ್ಧನಾದನು.
ಸದ್ಗುರು- ಸಚ್ಚಿಷ್ಯರ ಅಂದಿನ ಅಗಲಿಕೆಯು ನಲಿವು-
ನೋವುಗಳಿಂದ ಕೂಡಿತ್ತು ಬಸವಣ್ಣನ ಮುಂದಿನ ಭಾಗ್ಯದ ಅರಿವು
ಆನಂದದ ಸೆಲೆ. ಭಕ್ತನ ಅಂದಿನ ವಿರಹ ದುಃಖದ ನೆಲೆ. ಗುರು-ಶಿಷ್ಯರ
ಕಂಗಳಲ್ಲಿ ಅಂದು ಆನಂದ-ದುಃಖಗಳ ಕುರುಹುಗಳು ಆದ ಕಂಬನಿಗಳ
ಪುಟ:ಶ್ರೀ ಬಸವಣ್ಣನವರ ದಿವ್ಯಜೀವನ.pdf/೬೧
ಈ ಪುಟವನ್ನು ಪ್ರಕಟಿಸಲಾಗಿದೆ