ht ಶ್ರೀಮದಾನಂದ ರಾಮಾಯಣ, ಈ ಮೊದಲಾದ ರಾಜಬಂಧುಗಳಿಗೆ ಮೊಸರು ಅನ್ನ, ಹಾಲು, ತುಪ್ಪ, ತೈಲ ಇt ಮೊದಲಾದ ವಸ್ತುಗಳನ್ನು ದೃಷ್ಟಿ ಪರಿಹಾರಕ್ಕಾಗಿ ನಿವಾಳಿಸಿ ಬಿಸಔವರು, ಮತ್ತು ಶ್ರೀ ರಾಮಚಂದ್ರ ಸೀತಾದೇವಿಯರಿಗೆ ನವರತ್ನದ ಆರತಿಗಳನ್ನೆತ್ತಿದರು, ಅನಂ ತರ ಶ್ರೀ ರಿಾಮನು ಸಭಾಮಂಟಪಕ್ಕೆ ದಯಮಾಡಿಸಿದನು. ಸೀತಾದೇವಿಯು ಪರಿಜನರೊಡನೆ ಅಂತಃಪುರವನ್ನು ಪ್ರವೇಶಮಾಡಿದಳು. ಶ್ರೀ ರಾಮನೊಡನೆ ಸಮಸ್ತ ರಾಜರು, ಮಂತ್ರಿಗಳು, ಸೇನಾಪತಿಗಳು, ನಾಗರಿಕರು, ಬ್ರಾಹ್ಮಣರು ಇವ ರೇ ಮೊದಲಾದ ಸಮಸ್ತ ಪರಿಜನರೂ ಸಭೆಯನ್ನು ಪ್ರವೇಶಿಸಿದರು. ಅನಂತರ ಷ್ಣ ನು, ತೃಪ್ತರಾದ ಎಲ್ಲ ಸುಜನರಿಗೂ ಐದು ದಿವಸಗಳ ವರೆಗೆ ವಿಶ್ರಾಂತಿಯನ್ನು ಹೊಂದಲು ಕಾಲಕೊಟ್ಟನು, ಮತ್ತು ತನ್ನ ಜೊತೆಗೆ ಬಂದ ಸಮಸ್ತ ರಾಜರಿಗೂ ಯಜ್ಞಯೋಗ್ಯ ಮರ್ಯಾದೆಗಳಿಂದ ಸಂತೋಷವನ್ನುಂಟುಮಾಡಿ, ಶ್ರೀ ರಾಮನು ಕೈ ಜೋಡಿಸಿಕೊಂಡು “ಓ ಸಾಮಂತರಾಜರೇ, ನೀವು ನನ್ನ ಯಜ್ಞದ ಕುದರೆಯನ್ನು ನೋಡಿದೊಡನೆ ಇಲ್ಲಿಗೆ ತಡಮಾಡದೆ ದಯಮಾಡಿಸಬೇಕು. ಈ ನನ್ನ ಮಾತನ್ನು ಯಾರೂಉದಾಸ ಮಾಡಬಾರದು ಎಂದು ಪ್ರಾರ್ಥಿಸಿದನು. ಸಮಸ್ತ ರಾಜರೂ ಶ್ರೀ ರಾಮನ ಈ ವಿನಂತಿಯನ್ನು ಪರಮ ಸಂತೋಷದಿಂದ೨ ೦ಗೀಕರಿಸಿದರು. ಈ ದಿವ ಸ ಮೊದಲುಗೊಂಡು ನಾನು ಭಾವಿಯಲ್ಲಿ ಕಟ್ಟಿ ನಡುವ ವರೆಗೂ ಗೃಹಸ್ಥರು ಹರತಾಗಿ ಮತ್ತಾವ ವರ್ಣದವರೂ ತಮಗೋಸ್ಕರ ಬೇತೆ ಪಾಕಮಾಡಲು ಆ ಗತ್ಯವಿರುವದಿಲ್ಲ' ಎಂದು ತನ್ನ ಎಲ್ಲ ರಾಜ್ಯದಲ್ಲಿ ಪ್ರಸಿದ್ದಿ ಪಡಿಸಿದನು. ಅಯೋಧ್ಯೆ ಯಲ್ಲಿ ವೇದಘೋಷವು ತಾನೇತಾನಾಗಿ ಕೇಳಲಾರಂಭಿಸಿತು. ಎಲ್ಲಿ ನೋಡಿದರೂ ಮಂಗಳ ಕಾರ್ಯಗಳೇ ನಡೆಯುತ್ತಿದ್ದವು. ಪುರಾಣ, ಹರಿಕಧಾ, ಕೀರ್ತನ ಇವು ಗಳು ನಾಲಲ್ಕ ದಿಕ್ಕುಗಳಲ್ಲಿ ಹಬ್ಬಿದವ ಶ್ರೀ ರಾಮನ ಕೃಪೆಯಿಂದ ಸಮಸ್ತ ಪ್ರಜೆಗಳೂ ಪರಮಾನಂದವನ್ನು ಹೊಂದಿದರು. ಎಲೈ ಪ್ರಿಯಶಿಷ್ಯನೇ, ನಿನಗೆ ಈ ಯಾ ಶಾಕಾಂಡವನ್ನು ಹೇಳಿರುವೆನು. ಇವನ್ನು ಯಾರ ವಿಶ್ವಾಸದಿಂದ ಕೇಳು ದರೋ, ಅವರು ತೀರ್ಥಯಾತ್ರ ಫಲವನ್ನು ಹೊಂದುವರು. ಈ ಕಾರಣ ದಿಂದ ಸಮಸ್ತ ಇಚ್ಛೆಗಳೂ ಪೂರ್ಣ ವಾಗುವವ, ಮತ್ತು ಸಮಸ್ತ ಪಾತಕಗಳೂ ನಷ್ಟವಾಗುವವು, ನಿತ್ಯ ಸುಖವು ದೊರೆಯುವದು, ಯಾತ್ರಾಕಾಂಡಸ್ಸಮಸ್ತ
ಪುಟ:ಶ್ರೀ ಮದಾನಂದ ರಾಮಾಯಣ.djvu/೧೫೦
ಈ ಪುಟವನ್ನು ಪರಿಶೀಲಿಸಲಾಗಿಲ್ಲ.