ಯಾಗಶಂಡ. ೧ನೆಯ ಪ್ರಕರಣ. ಯ ಜ್ಞಾರ೦ಭ. ಒಂದಾನೊಂದು ದಿವಸ ಶ್ರೀರಾಮನು ಸಭಾಮಂಟಪದಲ್ಲಿ ಕುಳಿತು ಕುಲಗುರುಗ ಕಾದ ವಸಿಷ್ಠರನ್ನು ಕುರಿತು-ಮಹಾಸ್ವಾಮಿ, ಕುಂಭೋದರನ ಮೂತಿನಂತ ನಾ ನು ತೀರ್ಥಯಾತ್ರೆಯನ್ನು ದೂಡಿದೆನು. ಇನ್ನು ಅಶ್ವ ಮೇಧಯಾಗವನ್ನು ಮಾಡ ಬೇಕೆಂದಿರುವೆನು. ಆದ್ದರಿಂದ ಯಜ್ಞದ ಎಲ್ಲಾ ಸಾಮಗ್ರಿಗಳನ್ನು ತರಲು ಲಕ್ಷ್ಮಣ ನಿಗೆ ಆಜ್ಞಾಪಿಸಿ, ಸುಮುಹೂರ್ತದಲ್ಲಿ ಭಾಗ್ರದಕ್ಷಿಣೆಗಾಗಿ ಶಾಮಕರ್ಣದ ಅಶ್ವ ವನ್ನು ಬಿಡಬೇಕು. ಅದರ ರಕ್ಷಣೆಗಾಗಿ ಶತ್ರುನು ಸೇನಾಸಮೇತನಾಗಿ ಪ್ರಯಾಣ ಮೂಡಲಿ' ಎಂದು ಪ್ರಾರ್ಥಿಸಿದರು. ಆನಂತರ ವಸಿಷ್ಠರು ಆ ಸಭಾಮಂಟಪದಲ್ಲಿ ಕುಳಿತಿರುವ ಲಕ್ಷ್ಮಣನನ್ನು ನೋಡಿ 'ಎಲೈ ಸೌಮಿತ್ರಿಯೋ, ಇಂದಿಗೆ ಏಳನೇ ದಿವಸ ದಲ್ಲಿ ಸುಮಹಾರ್ತವಿರುವದು. ಆ ದಿವಸವೇ ಅಶ್ವ ಮೇಧಯಾಗವು ಪ್ರಾರಂಭ ದಾಗಬೇಕು. ಅಷ್ಟರೊಳಗೆ ಯಜ್ಞಶಾಲೆಯನ್ನು ನಿರ್ಮಾಣಮಾಡಿಸು, ಸಮಿತಿ, ಕುತ ಗಳೇ ಮೊದಲಾದ ಸಮಸ್ತ ಸಾಧನಗಳನ್ನೂ ಯೋಗ್ಯರೀತಿಯಿಂದ ತೆಗೆದುಕೊಂಡು ಬರಬೇಕು' ಎಂದು ಆಜ್ಞೆ ಮಾಡಿದರು. ಕುದುರೆಯ ಹಣೆಗೆ ಕಟ್ಟುವ ಚಿನ್ನದ ತಗ ಡಿನಲ್ಲಿ ಬರೆಯುವ ಕ್ರಮಗಳನ್ನೂ ತಿಳಿಸಿದರು. ಜನಕನೇ ಮೊದಲಾದ ಕೆಲವು ರಾಜರ್ಷಿಗಳಿಗೆ ಮೊದಲೇ ಈ ವರ್ತಮಾನವನ್ನು ತಿಳಿಸಿ ಕರೆಸಲು ಉದ್ಯೋಗ ಡಿದರು. ಗುರುಗಳಾಜ್ಞೆಯಂತೆ ಲಕ್ಷಣನು ಹತ್ತು ಯೋಜನ ವಿಸ್ತೀರ್ಣವ ಮಂಟಪವನ್ನು ಸಿದ್ಧ ಪಡಿಸಿ, ಅಲ್ಲಿ ಎಲ್ಲ ಯಜ್ಞದ ಸಾಮಗ್ರಿಗಳನ್ನೂ ಇರಿಸಿದನು. ಯಷಿಗಳು, ಮಂಡಲೇಶ್ವರರು, ಸದಸ್ಯರು, ಸ್ತ್ರೀಯರು ಇವರೆಲ್ಲರಿಗೂ ಯಜ್ಞಶಾಲೆ ಯಲ್ಲಿ ಕುಳಿತುಕೊಳ್ಳಲು ಬೇರೆ ಬೇರೆ ಸ್ಥಾನಗಳು ನಿರ್ಮಿತವಾಗಿದ್ದವು, ಬ್ರಾಹ್ಮಣ ರಿಗೆ ದರ್ಭೆಯ ಆಸನಗಳು, ಮಂಡಲೇಶ್ವರರಿಗೆ ಸಿಂಹಾಸನಗಳು, ಸಾಮಾನ್ಯ ಜನ ರಿಗೆ ಮಣೆಗಳು, ಇವೆಲ್ಲ ಅನುಕ್ರಮದಿಂದ ಸಿದ್ದ ಪಡಿಸಲ್ಪಟ್ಟಿದ್ದವ ಧನ, ಧಾ ನ್ಯ, ವಸ್ತ್ರ, ಭೂಷಣಗಳೇ ಮೊದಲಾದ ಸಮಸ್ತ ವಸ್ತುಗಳೂ ಯಜ್ಞ ಮಂಟಪ ದಲ್ಲಿ ಸಿದ್ಧವಾಗಿದ್ದವು, ಲಕ್ಷಣನು ಗುರುಗಳ ಅಪ್ಪಣೆಗಿಂತಲೂ ನೂರರಷ್ಟು
ಪುಟ:ಶ್ರೀ ಮದಾನಂದ ರಾಮಾಯಣ.djvu/೧೫೧
ಈ ಪುಟವನ್ನು ಪರಿಶೀಲಿಸಲಾಗಿಲ್ಲ.