CY ಶ್ರೀಮದಾನಂದ ರಾಮಾಯಣ, ಹೆಚ್ಚು ಸಾಮಗ್ರಿಗಳನ್ನು ಏರ್ಪಡಿಸಿ, ಈ ವಿಷಯವನ್ನು ಶ್ರೀ ರಾಮನಿಗೆ ಅಂಕ ಮಾಡಿಕೊಂಡನು. ಅನಂತರ ಶ್ರೀ ರಾಮನು ಸುಮುಹೂರ್ತದಲ್ಲಿ ಮಂಗಳ ಸ್ನಾನಾದಿಗಳನ್ನು ನೆರವೇರಿಸಿ, ಸೀತಾಸಮೇತನಾಗಿ ಯಜ್ಞ ಮಂಟಪವನ್ನು ಪ್ರವೇಶಿಸಿದನು. ಆ ಕಾ ಲದಲ್ಲಿ ನಾನಾ ವಾದ್ಯಗಳು ಭೋರ್ಗರೆದವು, ಸುಮಂಗಲೆಯರು ಗಾಯನಮಾ ಡಿದರು. ಜಯ ಜಯ ಶಬ್ದಗಳು ಕೇಳಿಸಿದವು. ಶ್ರೀ ರಾಮನು ಉನ್ನತವಾದ ಸಿಂಹಾಸನದಲ್ಲಿ ಕುಳಿತು ವಸಿಷ್ಠ, ಅರುಂಧತಿ, ಇವರಿಗೆ ಅವಮೌಲ್ಯವಾದ ವಸ್ತ್ರ ಗಳನ್ನೂ, ಆಭರಣಗಳನ್ನೂ ದಾನ ಮಾಡಿದನು, ಮತ್ತು ನಾಗರಿಕರು, ಬಂಧು ಗಳು, ಮಿತ್ರರು, ತಾಯಿಯರು, ತಂಗಿ, ಬ್ರಾಹ್ಮಣರು ಇವರೆಲ್ಲರಿಗೂ ವನ್ನಾಭ ರಣಗಳನ್ನು ಕೊಟ್ಟು ಸ೦ತೋಷಗೊಳಿಸಿದನು. ಬಳಿಕ ವಸಿಷ್ಠರು ಸೀತಾರಾ, ಮರನ್ನು ರತ್ನಖಚಿತವಾದ ಮಣಿಗಳ ಮೇಲೆ ಕುಳ್ಳಿರಿಸಿದರು. ಶ್ರೀ ರಾಮನು ಗು ರುಗಳ ಅಪ್ಪಣೆಯಂತೆ ವಿಚ್ಛೇಶ್ವರನನ್ನು ಪೂಜಿಸಿದನು. ಪುಣ್ಯಾಹವಾಚನಾದಿಗ ೪ಾದ ಮೇಲೆ ಆ ದಂಪತಿಗಳಿಗೆ ಯಜ್ಞ ದೀಕ್ಷೆಯನ್ನಿತ್ತರು. ಧ್ವಜಾರೋಹಣಾದಿಗ ಇಾದ ಮೇಲೆ ಶ್ರೀ ರಾಮನು ಗುರುಗಳ ಆಜ್ಞೆಯಿಂದ ಹದಿನಾರು ಜನ ಋತ್ವಿಜ ರನ್ನು ಸ್ವೀಕರಿಸಿದನು, ಸಮಸ್ತ ಕರ್ಮಗಳಲ್ಲಿ ನಿಪುಣರಾದ ವಸಿಷ್ಠರು ಅಧ್ಯೆ ರ್ಯುಗಳಿದರು. ಬ್ರಹ್ಮನು ತಾನೇ ಬ್ರಹ್ಮಶವನ್ನು ಸ್ವೀಕರಿಸಿದನು. ವಿಶ್ರಾ ಮಿತ್ರರು ಹೋತೃಾನವನ್ನು ಹೊಂದಿದರು. ಜನಕಮಹಾರಾಜನ ಗುರುಗಳ, ದ ಶತಾನಂದರು ಉದಾತೃಗಳಾದರು. ಯಮನು ಶಪಿತೃಸ್ಥಾನವನ್ನು ಹೊಂದಿ ದನು, ಕಶ್ಯಪರೇ ಮೊದಲಾದ ಹದಿನಾರು ಜನ ಮಹರ್ಷಿಗಳು ಶ್ರೀ ರಾಮನಿಗೆ ಋತ್ವಿಜರಾದರು. ವಿಕ್ಕೆ ಅನೇಕ ವಿದ್ವಾಂಸರು ಬೇರೆಬೇರೆ ಕಾರ್ಯಗಳನ್ನು ಮಾಡಲು ಸಿದ್ಧರಾದರು. ಕುಂಡದಲ್ಲಿ ಅಗ್ನಿಯನ್ನು ಸ್ಥಾಪಿಸಿ, ಪಾತ್ರಾನಾಧ ನಾದಿಗಳನ್ನು ಯಥಾಸಂಗ ಮುಗಿಸಿ, ವಸಿಷಾದಿಗಳು ಶಾಮಕರ್ಣದ ಅಶ್ವದ ನ್ನು ಪೂಜಿಸಿ, ಭೂಪ್ರದಕ್ಷಿಣೆ ಮಾಡಲು, ಭೂಮಿಯಲ್ಲಿ ಬಿಟ್ಟರು. ಹತ್ತು ಸಾವಿರ ಸೇನೆಯೊಡನೆ ಶತ್ರುತ್ಯ-ಸುಮಂತ್ರರು ಆ ಕುದುರೆಯ ರಕ್ಷಣೆಗಾಗಿ ಹಿಂದೆ ಹೊರಟ ರು, ಮುನಿಸಮೂಹಗಳಿಂದ ನಿಬಿಡವಾದ ಆ ಸರಯೂ ತೀರದಲ್ಲಿರುವ ಯಜ್ಞಶಾಲೆ ಯಲ್ಲಿ ಶ್ರೀರಾಮನು ನಾನಾವಿಧವಾದ ಇತಿಹಾಸಗಳನ್ನು ಕೇಳುತ್ತಾ ಕುಳಿತಿದ್ದನು. ಆಗ ಶ್ರೀರಾಮನು ಕೃಷ್ಣಾಜಿನವನ್ನು ಧರಿಸಿದ್ದ ಸು. ಸಮಸ್ತ ಇಂದ್ರಿಯ ನಿ. ಗ್ರಹ ಮಾಡಿದ್ದನು. ಕೈಯಲ್ಲಿ ಕುಶಗಳನ್ನು ಹಿಡಿದಿದ್ದನು. ಯಜ್ಞದಲ್ಲಿ ಉಚಿತ
ಪುಟ:ಶ್ರೀ ಮದಾನಂದ ರಾಮಾಯಣ.djvu/೧೫೨
ಈ ಪುಟವನ್ನು ಪರಿಶೀಲಿಸಲಾಗಿಲ್ಲ.