ಶ್ರೀಮದಾನಂದ ರಾಮಾಯಣ, ಆಗ ವಿಭಾಂಡಕರ ಮಕ್ಕಳಾದ ಋಶ್ಯಶೃಂಗರನ್ನು ಕರೆತಂದರೆ, ವೃಷ್ಟಿಯಾಗುವದೆಂ ದು ತಿಳಿದು, ರಾಜನು ಬಹು ಪ್ರಯಾಸದಿಂದ ಆ ಮುನಿಯನ್ನು ತನ್ನ ರಾಜಧಾನಿಗೆ ಕರೆತರಿಸಿದನು. ಕೂಡಲೆ ಸಮೃದ್ಧವಾದ ಸೃಷ್ಟಿಯಾಯಿತು. ತನ್ನ ಮಗಳಾದ ಶಾಂತೆಯನ್ನು ಆ ಮಹರ್ಷಿಗಳಿಗೆ ಕೊಟ್ಟು ವಿವಾಹವನ್ನು ಬೆಳಿಸಿ ಅಳಿಯನನ್ನು ತನ್ನ ಮನೆಯಲ್ಲಿ ಇರಿಸಿಕೊಂಡಿದ್ದನು. ಈ ಅ ಮೇಧದ ಕಾಲದಲ್ಲಿ ಸುಮಂತ್ರನೂ ವಸಿಷ್ಠರೂ, ತಮ್ಮ ಯಜಮಾನನಾದ ದಶರಥನಿಗೆ ಮಕ್ಕಳಿಲ್ಲವೆಂತಲೂ, ಋ ಶಿಶೃಂಗರನ್ನು ಕರೆಸಿ ಅವರ ಸಹಾಯದಿಂದ ಪುತ್ರ ಕಾಮೇಷ್ಟಿಯನ್ನು ಮಾಡಿಸಿ ದರೆ ಮಕ್ಕಳಾಗುವವೆಂತಲೂ ಯೋಚಿಸಿ, ಆ ಮಹರ್ಷಿಗಳನ್ನು ಕರೆಸಿದ್ದರು. ಪುತ್ರ ಕಾಮೇಷ್ಟಿಯು ಸಾಂಗವಾಗಿ ನೆರವೇರಿತು. ಯಾಗದ ಕೊನೆಯಲ್ಲಿ ಯಜ್ಞಪುರು ಷನು ಪ್ರತ್ಯಕ್ಷನಾಗಿ ಸುವರ್ಣದ ಪಾತ್ರೆಯಲ್ಲಿರುವ ಪಾಯಸವನ್ನು ದಶರಥನಿಗೆ ಕೊಟ್ಟು, ಇದನ್ನು ನಿನ್ನ ಪತ್ನಿಯರಿಗೆಕೊಡು ಎಂದು ಹೇಳಿ ಅಂತರ್ಹಿತನಾದ ನು, ಹಗೆಯೇ ದಶರಥನು ಪಾಯಸವನ್ನು ಹಂಚಿದನು. ಆಗ ಬ್ರಹ್ಮನ ಶಾಪದಿಂ ದ ಹದ್ದಿನ ರೂಪವನ್ನು ಹೊಂದಿದ ಒಬ್ಬ ಅಪ್ಪರಸ್ತ್ರೀಯು ಕೈಕೇಯಿಜು ಕೈಯ್ಯಲ್ಲಿ ಈ ಭಾಗವನ್ನು ತೆಗೆದುಕೊಂಡುಹೋಗಿ, ಶೇಷಾಚಲದಲ್ಲಿ ತಪಸ್ಸು ಮಾಡುತ್ತಿ ಅಂಜನಾದೇವಿಯ ಕೈಯ್ಯಲ್ಲಿ ಹಾಕಿ, ಮೊದಲಿನ ದಿವ್ಯವಾದ ತನ್ನ ರೂಪ ವನ್ನು ಹೊಂದಿ ಬ್ರಹ್ಮಲೋಕವನ್ನು ಸೇರಿದಳು. ಬಳಿಕ ಕೌಸಲ್ಯಾ-ಸುಮಿತ್ರೆಯ ರಿಬ್ಬರೂ ತಮ್ಮ ಭಾಗಗಳಲ್ಲಿ ಸ್ವಲ್ಪ ಸ್ವಲ್ಪ ತೆಗೆದು, ಕೈಕೇಯಿಗೆ ಕೊಟ್ಟರು ಮುಂದೆ ಮೂವರು ರಾಜಪತ್ನಿಯರೂ ಗರ್ಭಿಣಿಯಾದರು. ದಶರಥನಿಗೆ ಪರ ಮಸಂತೋಷವಾಯಿತು, ಮತ್ತು ಪುಂಸವನವೇ ಮೊದಲಾದ ಗರ್ಭಸಂಸ್ಕಾರಗಳ ನೆಲ್ಲಾ ನೆರವೇರಿಸಿ ತನ್ನ ಪ್ರೀತಿಪಾತ್ರರಾದ ಪತ್ನಿಯರ ಬಯಕೆಗಳನ್ನೆಲ್ಲಾ ಸಮಯವರಿತು ಕೈಗೂಡಿಸಿದನು. ಇಷ್ಟರೊಳಗೆ ಪಾಪಿಯಾದ ರಾವಣನ ಬಾಧೆಯು ಭೂದೇವಿಗೆ ತಡೆಯ ದಂತಾಯಿತು. ಆಕೆಯು ಬ್ರಹ್ಮನನ್ನು ಮರೆಹೊಕ್ಕಳು, ಬ್ರಹ್ಮಸೂಕೂಡ ಸಮ ದೇವತೆಗಳೊಡನೆ ಕ್ಷೀರಸಮುದ್ರದಲ್ಲಿ ವಾಸಮಾಡುವ ಶ್ರೀಮನ್ನಾರಾಯಣನ ಮುರಬಿದ್ದನು. ಆಗ ಜಗದೀಶನು ಬಹ್ಮನೇ ಮೊದಲಾದ ದೇವತೆಗಳ ಮುಖದಿಂದ ರಾವಣನ ಹಾವಳಿಯನ್ನು ಕೇಳಿ ನಾನೇ ಭೂಲೋಕದಲ್ಲಿ ದಶರಥಮಹಾರಾಜ ನಿಗೆ ಮಗನಾಗಿ ಜನಿಸಿ, ನಿಮ್ಮೆಲ್ಲರ ಬಾಧೆಯನ್ನು ಪರಿಹಾರ ಮಾಡುವೆನು, ಹೆದ ರಬೇಡಿ, ನನಗೆ ಸಹಾಯ ಮಾಡಲು ನಿವೇಲ್ಲರೂ ವಾನರ ರೂಪದಿಂದ ಭೂಮಿ
ಪುಟ:ಶ್ರೀ ಮದಾನಂದ ರಾಮಾಯಣ.djvu/೧೮
ಈ ಪುಟವನ್ನು ಪರಿಶೀಲಿಸಲಾಗಿಲ್ಲ.