ಸರಕಾಂಡ ಹೊರಟನು, ಅಲ್ಲಿ ನೀರನ್ನು ತುಂಬುತ್ತಿರುವ ಆ ವೈಶ್ಯನ ಹೂಜಿಯ ಕಂಠವು ಚಿಕ್ಕದು. ಆದ್ದರಿಂದ ಅದು ಬುಡು ಬುಡು ಎಂದು ಶಬ್ದ ಮಾಡುತ್ತಿತ್ತು. ಈ ಧ್ವನಿಯನ್ನು ಕೇಳಿ, ಶಬ್ಬವನ್ನನುಸರಿಸಿ ಗುರಿಯನ್ನು ಹೊಡೆಯಲು ನಿಪುಣನಾ ದ ದಶರಥನು ಇಲಿ ಆನೆಯು ನೀರು ಕುಡಿಯುತ್ತಿರಬಹುದೆಂದು ತಿಳಿದು, ತನ್ನ ಕೈಯಲಿದ್ದ ಬಾಣವನ್ನು ಆ ಭಾಗಕ್ಕೆ ಪ್ರಯೋಗಿಸಿದನು. ಆ ಬಾಣವಾದ ರೂ ಬಹಳ ಹದನವಾಗಿದ್ದುದರಿಂದ ಅದು ವೈಕಮರನ ಉದರವನ್ನು ಸೀಳಿತು ಆಗ ವೈಶ್ಯಕುಮಾರನು ವ್ಯಥೆಯನ್ನು ತಾಳಲಾರದೆ ಯಾವನೋ ಒಬ್ಬ ಘಾತುಕನು ನಿರಪರಾಧಿಯಾದ ನನ್ನನ್ನು ಬಾಣದಿಂದ ಹೊಡೆದನಲ್ಲ, ಎಂದು ಒದರಿ ಮೂರ್ಛ ಹೊಂದಿದನು. ಈ ಮಾತುಗಳನ್ನು ಕೇಳಿ, ದಶರಥನು ಏನೋ ಅನರ್ಥವು ನಡೆಯಿತಂದು, ಗಾಬರಿಯಿಂದ ಅದೇ ಶಬ್ದವನ್ನ ನುಸರಿಸಿ ಆ ತರುಣನ ಬಳಿಗೆ ಬಂದನು ಆ ವ್ಯ ಶೈವರನಿಂದ ಆತನ ಎಲ್ಲಾ ವೃತ್ತಾಂತವನ್ನೂ ರಾಜನು ಕೇಳಿಕೊಂಡನು. ಮತ್ತು ಆತನ ಉದರದಿಂದ ಬಾಣವನ್ನು ಬಹುವುದಿಂದ ಹೊರಗೆ ತೆಗೆದನು. ಮುಂದೆ ದಶರಥನು ಆ ತರುಣನ ತಾಯಿತಂದೆಗಳ ಬಳಿಗೆ ಹೋಗಿ ತನ್ನ ಅಪ ರಾಧವನ್ನು ಹೇಳಿಕೊಂಡನು. ಆ ದಂಪತಿಗಳು ಬಹು ದುಃಖದಿಂದ-ಅಪಾ, ಧರೆಯೇ, ಅಂಥ ಮಗನಿಲ್ಲದ ಮೇಲೆ ನಾವು ಬದುಕಿ ಏನು ಫಲ ಚತೆಯನ್ನು ಸಿದ್ದಪಡಿಸು, ನಾವಿಬ್ಬರೂ ದೇಹ ತ್ಯಾಗಮಾಡುತ್ತವೆ ಎಂದು ಹೇಳಿದರು. ದಶರಥನೂ ಅದರಂತೆ ಸಿದ್ಧಪಡಿಸಿದನು. ಮುಂದೆ ಆ ವೃದ್ಧರು ಚಿತಾ ಪ್ರವೇಶ ಮಾಡುವಾಗ-ಎಲೈ ದಶರಥನೇ, ನಾವು ಅಂತ್ಯಕಾಲದಲ್ಲಿ ಹಾಗೆ ಪುತ್ರಶೋಕ ದಿಂದ ಮರಣಹೊಂದಿದವೋ, ನೀನಾದರೂ ಹಾಗೆಯೇ ಮರಣಹೊಂದು ಎಂದು ಶಪಿಸಿದರು. ಮುಂದೆ ದಶರಥನು ಅದರ ಎಲ್ಲಾ ಕಾರ್ಯಗಳನ್ನು ಮುಗಿಸಿ, ಬ ಹಳ ದುಃಖದಿಂದ ಅಯೋಧ್ಯೆಗೆ ಬಂದನು. ಮತ್ತು ಇದೆಲ್ಲಾ ಸಂಗತಿಯನ್ನೂ ತಮ್ಮ ಗುರುಗಳಾದ ವಸಿಷ್ಠರಿಗೆ ತಿಳಿಸಿದನು. ಆಗ ಗುರುಗಳೂ ದೋಷ ಪರಿಹಾ ರಕ್ಕೊಸ್ಕರ ದಶರಥನಿಂದ ಅಶ್ವಮೇಧವೆಂಬ ಮಹಾಕ್ರತುವನ್ನು ಮೂಡಿಸಿದರು. ಅದರಿಂದ ದಶರಥನಿಗೆ ಸ್ವಲ್ಪ ಸಮಾಧಾನವಾಯಿತು ದಶರಥನಿಗೆ ಶಾಂತಿಯೆಂಬ ಒಬ್ಬ ಮಗಳಿದ್ದಳು ಆತನು ತನ್ನ ಮಿತ್ರನಾದ ರೋಮಪಾದನಿಗೆ ಮಕ್ಕಳಿಲ್ಲದ್ದರಿಂದ ಆ ಕನ್ಯಾಮಣಿಯನ್ನು ಆತನಿಗೆ ಕೊಟ್ಟಿದ್ದನು. ಆರೋಮಪಾದರಾಜನ ದೇಶದಲ್ಲಿ ಹನ್ನೆರಡು ವರ್ಷಗಳು ಮಳೆ ಇಲ್ಲದಂತಾಯಿತು
ಪುಟ:ಶ್ರೀ ಮದಾನಂದ ರಾಮಾಯಣ.djvu/೧೭
ಈ ಪುಟವನ್ನು ಪರಿಶೀಲಿಸಲಾಗಿಲ್ಲ.