ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಜನ್ಮಕಂಹ. ೧೮೫ ವಂತ ಲಕ್ಷ್ಮಣನಿಗೆ ಆಜ್ಞಾಪಿಸಿದನು. ಭೂಶುದ್ಧಿಯಾದ ಬಳಿಕ ಶ್ರೀರಾಮನು ಸುವ ರ್ಣದ ಸೀತೆಯನ್ನು ಮೂಡಿಸಿ ಅಶ್ವ ಮೇಧಕ್ರತುವನ್ನು ಪಕ್ರಮಿಸಿದನು. ಆ ಕ್ರತುಸ ಮರಂಭವು ಹಿಂದಿನಂತೆ ಅತಿ ವಿಜೃಂಭಣೆಯಿಂದ ನಡೆಯಿತು. ಪ್ರತಿ ನವಮಿ ತಿ ಥಿಯಲ್ಲಿ ಶ್ರೀರಾಮನು ಅವಚ್ಛತಾನವೂಡುತ್ತಿದ್ದನು. ಹೀಗೆ ಅನೇಕ ಅಶ್ವ ಮೇಧಗಳು ನಡೆಯಹತ್ತಿದವು, ಇದರಿಂದ ಶ್ರೀರಾಮನ ಕೀರ್ತಿಯು ಎಲ್ಲ ಕಡೆ ಯಲ್ಲ ಹಬ್ಬಿತು. ಆಗ ಅನೇಕ ಲಕ್ಷ ಬ್ರಾಹ್ಮಣರು ಭಕ್ಷ್ಯ-ಭೋಜ್ಯಗಳಿಂದ ತೃ ಸ್ತರಾಗಿ ಗಂಗಾತೀರದಲ್ಲಿ ವಾಸವಾಗಿದ್ದರು. ಪ್ರತಿಯಜ್ಞದ ಕೊನೆಯಲ್ಲಿ ಶ್ರೀ ರಾಮನು ಸುವರ್ಣದ ಸೀತೆಯನ್ನು ವಸಿಷ್ಠರಿಗೆ ದಾನವೂಡುತ್ತಿದ್ದನು. ಪ್ರತಿ ಆ ಶ್ವ ಮೇಧದಲ್ಲ೧ ಶತ್ರುಘ್ನನು ಯಜ್ಞೆಯಾಶ್ವವನ್ನು ಕಾಪಾಡಲು ಹೊರಡುತ್ತಿದ್ದ ನು. ಈ ರೀತಿಯಾಗಿ ಶ್ರೀರಾಮನ ತೊಂಭತ್ತೊಂಭತ್ತು ಯಜ್ಞಗಳು ಸಾಂಗವಾ ಗಿ ನೆರವೇರಿದವು. ಬಳಿಕ ನೂರನೇ ಯಜ್ಞವನ್ನು ಮೂಡಲು ಲೋಕಾಭಿರಾಮ ಸಾದ ರಘುನಾಥನು ಸಂಕಲ್ಪಮೂಡಿದನು. - ಅತ್ತಲಾ ವಾಲ್ಮೀಕಿ ಮುನಿಗಳು ಹತ್ತು ದಿವಸಗಳ ವರೆಗೂ ಆ ಮಗುವನ್ನು ರಾಮರಕ್ಷಾಮಂತ್ರದಿಂದ ಯಾವ ಬಾಧೆಗಳೂ ಬರದಂತೆ ಕಾಪಾಡಿದರು. ಅನಂ ತರ ಶುಭಮುಹೂರ್ತದಲ್ಲಿ ಮುನಿಗಳು ಆ ಬಾಲಕನಿಗೆ ಕುಶನೆಂದು ನಾಮಕರಣ ಮಡಿದರು. ಎಲ್ಲಾ ಮಹರ್ಷಿಗಳ ದೀರ್ಘಾಯುಷ್ಮಂತನಾಗೆಂದು ಶಿಶುವನ್ನು ಆಶೀರ್ವದಿಸಿದರು. ಆ ಬಾಲಕನು ದಿನ ದಿನಕ್ಕೆ ಶುಕ್ಲ ಪಕ್ಷದ ಚಂದ್ರನಂತೆ ಅಭಿವೃ ದ್ಧಿ ಹೊಂದುತ್ತಿದ್ದನು. ಆ ಬಾಲಕನ ಬಾಲಲೀಲೆಗಳನ್ನು ನೋಡಿ, ಸೀತೆ, ಜನಕ, ಸುಮೇಧಾ ಇವರು ಬಹಳ ಆನಂದಪಡುತ್ತಿದ್ದರು. ಒಂದು ದಿವಸ ಸೀತೆಯು ತೊ ಟ್ಟಿಲಲ್ಲಿ ಮಲಗಿರುವ ತನ್ನ ಮಗುವನ್ನು ಸ್ವಲ್ಪ ನೋಡಿಕೊಂಡಿರುವಂತೆ ವಾಲ್ಮೀಕಿ ಮುನಿಗಳಿಗೆ ಹೇಳಿ, ತಾನು ಸಖಿಯೊಡನ ತುನಾ ನದಿಯಲ್ಲಿ ನಮೂಡಲು ಹೊರಟಳು. ದಾರಿಯಲ್ಲಿ ಐದು ಮರಿಗಳನ್ನು ಹೆಗಲ ಮೇಲೆ ಹಾಕಿಕೊಂಡು ಓ ಡಿ ಹೋಗುತ್ತಿರುವ ಒಂದು ಕಪಿಯನ್ನು ಕಂಡು, ಜಾನಕಿಯು ಈ ಕೋತಿಗಾದ ರೂ ತನ್ನ ಮಕ್ಕಳ ಮೇಲೆ ಎಷ್ಟು ವಿಶ್ವಾಸವಿರುವದು!! ಮರಿಗಳನ್ನು ಹೊಟ್ಟೆಗೆ ಅಪ್ಪಿಕೊಂಡು, ಹೆಗಲುಗಳ ಮೇಲೆ ಹಾಕಿಕೊಂಡು ಎಷ್ಟು ಸಂತೋಷದಿಂದ ಹೋಗುವದಲ್ಲ11 ಇರುವ ಒಬ್ಬ ಮಗನನ್ನೂ ಮನೆಯಲ್ಲಿ ಬಿಟ್ಟು ಏಕಾಂಗಿಯಾ ಗಿ ಬಂದ ನನಗೆ ಸ್ವಲ್ಪವಾದರೂ ನಾಚಿಕೆ ಇಲ್ಲವಲ್ಲ !' ಎಂದು ಯೋಚಿಸಿ, ಆ ಇಂದ ಆಶ್ರಮಕ್ಕೆ ಹಿಂತಿರುಗಿ ಮಗುವನ್ನು ಎತ್ತಿಕೊಂಡು ನದೀತೀರಕ್ಕೆ ಬಂದಳು. ೨೪