ಜನ್ಮಕಂಡು ೧೮೬ ಆಗ ಮುನಿಗಳು ಜಾನಕಿ, ಶ್ರೀರಾಮನ ಪಾದುಕೆಗಳನ್ನು ಮಾಡಿಸಿ, ಅದ ನ್ನು ಪ್ರತಿಪದೆಯಿಂದ ನವಮಿಯ ವರೆಗೂ ಸುವರ್ಣಕಮಲಗಳಿಂದಲೂ ಹೋಡ ಶೋಪಚಾರಗಳಿಂದಲೂ ಪೂಜಿಸಿದರೆ, ನಿನಗೆ ಶ್ರೀರಾಮನ ದರ್ಶನವಾಗುವದು” ಎಂದು ಹೇಳಿದರು. ಈ ಮಾತುಗಳನ್ನು ಕೇಳಿ ಸೀತೆಯು 'ಸುವರ್ಣದ ಕಮಲಗ ಳು ಶ್ರೀ ರಾಮನ ಉಪವನದಲ್ಲಿ ಕುವವ ಈ ಕಾಲಕ್ಕೆ ಅವು ನನಗೆ ಹ್ಯಾಗ ದೊ ರೆತವು?' ಎಂದು ಚಿಂತಿಸುತ್ತಿದ್ದಳು. ಆಗ ಹತ್ತರ ಕುಳಿತಿದ್ದ ಚಿಕ್ಕ ಮಗನಾದ ಲವನ್ನು (ಜನನಿಯ, ಆಶ್ರೀ ರಾಮನ ವನದಲ್ಲಿ ರುವ ಕಮಲಗಳಿಗೋಸ್ಕರ ನೀನು ಇಷ್ಟೇಕೆ ಯೋಚನೆ ಮಾಡುವೆ? ಈ ದಿವಸವೇ ಪ್ರತವನ್ನಾರಂಭಿಸು, ನಿನಗೆ ಕ ಮಲಗಳನ್ನು ತಂದುಕೊಡುವ ಭಾರನನಗಿರಲಿ' ಎಂದು ಮಾತನಾಡಿದನು. ಈ ವ ಚನಗಳನ್ನು ಕೇಳಿ ಸೀತಾದೇವಿಯು ಅತಿಪ್ರೇಮದಿಂದ ಮಗನನ್ನು ಮುದ್ದಾಗಿ ದುಗು! ಶ್ರೀ ರಾಮನ ಆ ಉಪವನವನ್ನು ಶೂರರಾದ ಭಟರು ಕಾಯುತ್ತಿರುವರು. ಅವರು ಈ ಚಿಕ್ಕವನಾದ ನಿನ್ನನ್ನು ಒಳಗೆ ಸಹ ಬಿಡಲಾರರು” ಎಂದಳು. ಈ ಯಿಯ ಈ ಮಾತುಗಳನ್ನು ಕೇಳಿ ಲವನು ಅಮ್ಮಾ, ಇದೇನು? ಇಷ್ಟು ಹೆದರಿ ಸುವೆ? ನಮ್ಮ ಗುರುಗಳ ಅನುಗ್ರಹದಿಂದ ದೇವೇಂದ್ರನನ್ನಾದರೂ ಜಿಯಿಸಿ, ನಿನ್ನ ಕಾರ್ಯವನ್ನು ಪೂರೈಸುವನು. ಈ ಹುಲ್ಲುಕಡ್ಡಿಗಳಂತಿರುವ ಮಾನವರ ಪಾಡೇ ನು? ನನಗೆ ಆಜ್ಞಾಪಿಸು, ನಿನ್ನ ಪ್ರತಕ್ಕೆ ಸಾಕಾಗುವಷ್ಟು ಕಮಲಗಳನ್ನು ತಂದು ಕೂಡುವನೋ, ಇಲ್ಲವೋ ಅದಾದರೂ ಒಂದು ಪರೀಕ್ಷೆಯಾಗಿ ಬಿಡಲಿ” ಎಂದು ಮಾತನಾಡಿದನು, ಲವನ ಬಲವಾದ ಆಗ್ರಹದಿಂದ ಅವನಿಗೆ ಕಮಲಾಹರಣಕ್ಕೆ ಪ್ರಯಾಣ ಡಲು ಸೀತೆಯು ಅಪ್ಪನಮಾಡಿದಳು. ಬಳಿಕ ಲವನು ತಾಯಿಗೂ, ಗುರುಗಳಿಗೂ ನಮುಸ್ಕರಿಸಿ ರಥವನ್ನೇರಿ ಅಯೋಧ್ಯೆಯ ಕಡೆಗೆ ಪ್ರಯಾಣ ಮಾಡಿದನು. ಉಪ ವನದ ಸಮೀಪಕ್ಕೆ ಹೋದಕೂಡಲೆ ರಥವನ್ನು ದೂರದಲ್ಲಿ ನಿಲ್ಲಿಸಿ , ಲವನು ಮ ಲ್ಲ ಮೆಲ್ಲನೆ ಉಪವನವನ್ನು ಪ್ರವೇಶಿಸಿದನು. ಆಗ ವನರಕ್ಷಕರೆಲ್ಲರೂ ಭೋಜನ ಕೈ ಹೋಗಿದ್ದರು. ಅವನು ತನಗೆ ಬೇಕಾದಷ್ಟು ಹೊಸಹೊಸ ಕಮಲಗಳನ್ನು ಕೂಯ್ದು ಕೊಂಡು ರಥಾರೂಢನಾಗಿ ಆಶ್ರಮಕ್ಕೆ ತೆರಳಿದನು. ಸೀತೆಯೂ ಅವನು ತಂದ ಪುಷ್ಟಗಳನ್ನು ನೋಡಿ ಹಿರಿಹಿರಿ ಹಿಗ್ಗಿದಳು, ಮತ್ತು ಆಕೆಯು ಶ್ರೀರಾಮ ನ ಚರಣಗಳಿಗೆ ಪರಮಭಕ್ತಿಯಿಂದ ಅದನ್ನು ಅರ್ಪಿಸಿದಳು. ಇದೇ ಮೇರೆಗೆ ಲ ವನು ಏಳು ದಿವಸಗಳ ವರೆಗೂ ಯಾವ ಪ್ರತಿಬಂಧಗಳೂ ಇಲ್ಲದೆ ಕಮಲಗಳನ್ನು
ಪುಟ:ಶ್ರೀ ಮದಾನಂದ ರಾಮಾಯಣ.djvu/೧೯೩
ಈ ಪುಟವನ್ನು ಪರಿಶೀಲಿಸಲಾಗಿಲ್ಲ.