ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶ್ರೀ ಮದಾನಂದ ಮಯಣ, ಇರುತ್ತಿದ್ದನು. ಆ ಉಪವನದಲ್ಲಿ ಬಹಳ ಹೂಗಳು ಇದ್ದುದರಿಂದ ಯಾವ ದೂತರಿಗೂ ಲವನ ಕೃತ್ಯವು ತಿಳಿಯಲೇ ಇಲ್ಲ. ಎಂಟನೆಯ ದಿವಸ ವನಪಾಲಕರು ಪುಷ್ಪಗಳನ್ನು ತೆಗೆದುಕೊಂಡು ತಪೋವನಕ್ಕೆ ಹೊರಡಲು ಸಿದ್ದ ನಾದ ಅವನನ್ನು ಹಿಡಿದರು, ಮತ್ತು ಈ ಪುಷ್ಪಗಳನ್ನು ಯಾರ ಅಪ್ಪಣೆಯಿಂದ ಕೊಯ್ದೆ” ಎಂದು ಪ್ರಶ್ನೆ ಮಾಡಿದರು. ಆಗ ಲವನು “ಎಲೈ ವನಪಾಲಕರೆ, ಈ ದಿವಸವೇ ನಾನು ಇಲ್ಲಿಗೆ ಬಂದಿದ್ದೇನೆಂದು ನೀವು ತಿಳಿಯಬೇಡಿರಿ, ಈಗ ಏಳು ದಿವಸಗಳಿಂದಲೂ ಇಲ್ಲಿಗೆ ಬಂದು ಪುಷ್ಪಗಳನ್ನು ತೆಗೆದುಕೊಂಡು ಹೋಗುತ್ತಿರುವೆನು. ಇರಲಿ, ನ ನನ್ನು ಬಿಡಿರಿ. ಮುಂದೆ ನಾನು ಪ್ರಯಾಣ ಮಾಡುವೆನು' ಎಂದನು. ಈ ಮಾತುಗಳನ್ನು ಕೇಳಿ, ದೂತರು ಹೋಗುವದೆಲ್ಲಿಗೆ ? ನೀನು ರಾಮನಿಗೆ ಅಪರಾಧಿಯಾಗಿರುವೆ. ನಿನ್ನನ್ನು ಶಿಕ್ಷೆ ಮಾಡಿಸಲು ಶ್ರೀ ರಾಮನ ಬಳಿಗೆ ಕರೆದು ಕೊಂಡು ಹೋಗುವೆವು' ಎಂದು ಮಾತನಾಡಿದರು. ಆಗ ಲವನು 'ನಿರಪರಾಧಿ ಯಾದ ಸೀತೆಯನ್ನು ಅರಣ್ಯಕ್ಕೆ ಕಳುಹಿದ ರಾಮನ ವಿಷಯದಲ್ಲಿ ನನಗೆ ಸ್ವಲ್ಪ ಪಾದರೂ ಹೆದರಿಕೆ ಇಲ್ಲ. ನಾನು ನಿಮ್ಮ ಜೊತೆಗೆ ಬರುವದಿಲ್ಲ' ಎಂದು ಹೇಳಿ ಮುಂದೆ ಹೊರಟನು. ಆಗ ಕೂರರಾದ ಭಟರು ಲವನ ಸುತ್ತಲೂ ಮುತ್ತಿದರು. ಆ ರಾಜಕುಮಾರನು ತನ್ನ ಧನುಸ್ಸನ್ನು ಟಿಂಕರಿಸಿ ತೀಕ್ಷವಾದ ಬಾಣಗಳಿಂದ ಆ ದೂತರನ್ನು ಶ್ರೀ ರಾಮನ ಎದುರಿಗೆ ಬೀಳುವಂತೆ ಹೊಡೆದನು. ಯಜ್ಞ ಮಂಟಪ ದಲ್ಲಿ ಬಿದ್ದು ಮೂರ್ಛಿತರಾದ ದೂತರು ಸ್ವಲ್ಪ ಹೊತ್ತಿನ ಮೇಲೆ ಎಚ್ಚರಗೊಂ ಡು ನಡೆದ ವೃತ್ತಾಂತವನ್ನೆಲ್ಲ ಶ್ರೀ ರಾಮನಿಗೆ ಅರಿಕೆ ಮಾಡಿದರು. ಇದು ರಾಮ ನಿಗೆ ಬಹಳ ಆಶ್ಚರ್ಯವಾಗಿ ಕಂಡಿತು. ಆ ಬಾಲಕನು ಯಾರಿರಬಹುದೆಂದು ಶ್ರೀ ರಾಮನು ಎಷ್ಟು ಯೋಚಿಸಿದರೂ ನಿಶ್ಚಯವಾಗಲಿಲ್ಲ. ಅನಂತರ ಶ್ರೀ ರಾಮನು ನಾವಿರಜನ ದೂತರನ್ನು ಉಪವನದ ರಕ್ಷಣೆಗಾಗಿ ಕಳುಹಿದನು. ಒಂಬತ್ತನೇ ದಿ ವಸ ಲವನು ಪ್ರತಿದಿವಸದಂತೆ ಉಪವನಕ್ಕೆ ಬಂದು ನಷ್ಟಗಳನ್ನು ಸ್ವೀಕರಿಸಿ ತ ಪೋವನಕ್ಕೆ ಹೊರಟನು. ಆಗ ಸೇನಾನಾಯಕರು ಲವನನ್ನು ತಡೆದರು. ಆಲ ವಕುಮಾರನು , “ಎಲೈ ಸೇನಾಧಿಪತಿಗಳಿರಾ, ನನ್ನ ದಾರಿಗೆ ಸರ್ವಥಾ ಪ್ರತಿಬಂಧ ಮಾಡಬೇಡಿರಿ, ಶ್ರೀ ರಾಮನು ಅನ್ಯಾಯದ ಕಾರ್ಯ ಮಾಡಿದ್ದರಿಂದ ಅವನಿಗೆ ಎಂದಿಗೂ ಜಯವಾಗಲಾರದು. ನೀವು ನನ್ನೊಡನೆ ಯುದ್ಧ ಮಾಡಿ ಅನ್ಯಾಯವಾ ಗಿ ಮರಣಹೊಂದಬೇಡಿರಿ, ನಿಮ್ಮ ರಾಜನು ನಿಮಗೆ ಶ್ರೇಷ್ಠನಾದಾನು, ನಾನು ಅಧರ್ಮಾಚರಣೆ ಮಾಡಿದ ಆತನನ್ನು ಸ್ವಲ್ಪವೂ ಮೆಚ್ಚಲಾರೆನು” ಎಂದನು,