ಈ ಪುಟವನ್ನು ಪರಿಶೀಲಿಸಲಾಗಿಲ್ಲ.

990 ಶ್ರೀಮದಾನಂದ ಆದಾಯಣ. - - - - - - - - - - - - - - - - - - - - - - - ನಿಯಮವನ್ನು ತಿಳುಹಿ (ಎಲೈ ತರುಣಿಯರೇ, ಮನೆಗೆ ತೆರಳಿರಿ, ನನ್ನ 80ಜ್ಯದಲ್ಲಿ ತಿಲಮಾತ್ರವಾದರೂ ಅಧರ್ಮದ ಗಂಧವಿರಬಾರದು. ನಿಮ್ಮ ಅಪರಾಧಗಳನ್ನೂ ಈ ದಿವಸ ಕ್ಷಮಿಸಿರುವೆನು' ಎಂದು ಹೇಳಿದನು. ಈ ಮಾತುಗಳನ್ನು ಕೇಳಿ ಆ ತರುಣ ಯರು ಕಣ್ಣುಗಳಲ್ಲಿ ನೀರು ಸುರಿಸಿ ಶ್ರೀ ರಾಮನ ಪಾದಗಳ ಮೇಲೆ ಬಿದ್ದರು. ಆಗ ರಾಮನು (ಎಳ್ಳೆ ಸುಂದರಿಯರೆ, ನಾನು ದ್ವಾಪರಯುಗದಲ್ಲಿ ಕೃಪಾವ ತುರ ಮಾಡುವೆನು. ಆಗ ನೀವೆಲ್ಲರೂ ರಾಜರ ಪುತ್ರಿಯರಾಗಿ ಜನಿಸಿರಿ, ನಿಮ್ಮ ನ್ನು ಭೌಮಾಸುರನೆಂಬ ರಾಕ್ಷಸನು ತೆರೆಯಲ್ಲಿ ಡುವನು, ನಾನು ಆ ರಾಕ್ಷಸನನ್ನು ವಶಮಾಡಿ ನಿಮ್ಮೆಲ್ಲರನ್ನೂ ವಿವಾಹ ಮಾಡಿಕೊಳ್ಳುವನು. ಈ ಅವತಾರದಲ್ಲಿ ಪತ್ರ ಸರ್ವಥಾ ನಿಮ್ಮ ಮನೋರಥವು ನೆರವೇರಲಾರದು' ಎಂದು ಹೇಳಿದನು. ಈ ದತುಗಳನ್ನು ಕೇಳಿ ತರುಣಿಯರು ಸಂತೋಷದಿಂದ ತಮ್ಮ ತಮ್ಮ ಮನೆಗೆ ತೆರಳಿದರು. ಬಳಿಕ ಶ್ರೀ ರಾಮನು ದಾಸದಾಸಿಯರನ್ನು ಎಷ್ಟು ಕೂಗಿದರೂ ಒಬ್ಬರೂ ಮ೨ರಲಿಲ್ಲ, ಹೊರಗೆ ಬಂದು ನೋಡುವಷ್ಟರಲ್ಲಿ ಯಾವ ಸ್ಥಳದಲ್ಲಿ ನೋಡಿ ದರೂ ಯಾರೂ ಕಾಣಿಸಲಿಲ್ಲ. ಅನಂತರ ಶ್ರೀoaಮನು ಲಕ್ಷಣನನ್ನು ಕೂಗಿ ದನು, ಶ್ರೀ ರಾಮನ ಈ ಧ್ವನಿಯನ್ನು ಕೇಳಿ ಊರ್ಮಿಳೆಯು ಎಷ್ಟು ಶ್ರೀ ರಾಯನು ಕೂಗುತ್ತಿರುವನೆಂದು ಪತಿಗೆ ತಿಳುಹಿದಳು, ಲಕ್ಷಣನು ಈ ಮಾತುಗಳನ್ನು ಕೇಳಿ ಭಯದಿಂದ ಅಣ್ಣನ ಬಳಿಗೆ ಬಂದು ನಿಂತನು. ಶ್ರೀರಾಮನು ನಡೆದ ವೃತ್ತಾಂತ ವನ್ನೆಲ್ಲ ತಿಳುಹಿ, ದೂತರೂ; ದಾಸಿಯರೂ ಎಲ್ಲಿ ಹಾಗಿರುವರೋ, ವಿಚಾರ ದಾರಿಳರೆತರುವಂತೆ ಆಜ್ಞಾಪಿಸಿದನು, ಲಕ್ಷಣನು ಶೋಧಮಾಡುತ್ತಿರಲು, ದೂತರು 0ಮನ ಕಥೆಯನ್ನು ಕೇಳಲು ಊರಹೊರಗೆ ಹೋಗಿರುವುದಾಗಿ ತಿಳಿಯಬಂತು. ಅನಂತರ ಸೌಮಿತ್ರಿಯು ಅವರೆಲ್ಲರನ್ನೂ ಕರೆತರುವಂತೆ ತನ್ನ ದೂತರಿಗೆ ಆಜ್ಞಾಪಿಸಿ ದನು. ರಾಮಕಥೆಯನ್ನು ಕೇಳುತ್ತ ಕುಳಿತಿದ್ದ ದೂತರು ಲಕ್ಷ್ಮಣನ ದೂತರ ಮಾತುಗಳಿಗೆ ಹದರಿದರು. ಅವರಲ್ಲಿ ಕೆಲವರು ಕೀರ್ತನವಾದಮೇಲೆ ಹೂ ಗೋಣವೆಂದರು. ಕೆಲವರು ಈಗಲೇ ಹೋಗೋಣ ನಡೆಯಿರಿ, ಯಜಮಾನರು ಕರೆಸಿದಮೇಲೆ ಕೂಡುವದು ಧರ್ಮವಲ್ಲ ಎಂದರು. ಕೆಲವರು ನಾವು cಮ ಕೀರ್ತನೆಗೆ ಹೋಗಿರುವೆವೆಂದು ಶ್ರೀ ರಾಮನಿಗೆ ಬಹಳ ಸಂತೋಷವಾಗಿರಬಹು ದು, ಎಂದು ಮನಸ್ಸಿಗೆ ಬಂದಂತೆ ಮಾತನಾಡಲುಪಕ್ರಮಿಸಿದರು. ಸಂnಂಶ ರಾಮಕಥೆಯು ಮುಗಿಯುವವರೆಗೂ ಯಾರೂ ಹೊರಡಲು ಇಷ್ಟಪಡಲಿಲ್ಲ. ಈ