೨೪೨ ಶ್ರೀಮದಾನಂದ ರಾಮಾಯಣ, ಈದೇವಾಧಿದೇವಾ, ನಿನ್ನ ಇಚ್ಛೆಗೆ ವಿರೋಧವಾಗಿ ನಾವು ಎಂದಿಗೂ ನಡೆಯುವ ದಿಲ್ಲ. ದ್ವಾಪರಯುಗದಲ್ಲಿ ನಿನ್ನ ಅವತಾರವಾಗುವವರೆಗೂ ನಾವು ಧೈರ್ಯದಿಂದ ಇದ್ದು, ಆಗಲೇ ನಿನ್ನನ್ನು ಸಂತೋಷಗೊಳಿಸುವವ, ರಾಮ, ದರ್ಶನಕೊಡು, ನಾವು ಅನಾಥರಾಗಿರುವೆವು” ಇತ್ಯಾದಿ ಅನೇಕ ವಿಧವಾದ ಅವರ ಸತ್ರಗಳನ್ನು ಕೇಳಿ, ದಯಾನಿಧಿಯಾದ ಶ್ರೀ ರಾಮನು ಮತ್ತೆ ಅವರಿಗೆ ದರ್ಶನಕೊಟ್ಟನು. ಅನೇಕ ವಿಧವಾದ ತನ್ನ ಮಧುರಭಾಷಣಗಳಿಂದ ಅವರನ್ನು ಸಂತೋಷಗೊಳಿಸಿ, ದ್ವಾಪರ ಯುಗದಲ್ಲಿ ನಿಮ್ಮ ಇಷ್ಟಾರ್ಥವನ್ನು ಪೂರ್ಣಮಾಡುವೆನೆಂದು ಅವರಿಗೆ ಮುತ್ತ. ವಚನಕೊಟ್ಟನು. ಅಷ್ಟರಲ್ಲಿ ಲಕ್ಷಣಾದಿಗಳು ಕುದುರೆಯ ಹೆಜ್ಜೆಗಳನ್ನು ಅನುಸ ರಿಸಿ, ಆ ಗುಹೆಯೊಳಗೆ ಬಂದರು. ಸ್ತ್ರೀಸಮೂಹದಲ್ಲಿರುವ ಶ್ರೀರಾಮನನ್ನು ನೋಡಿ ಅವರಿಗೆ ಬಹಳ ಆಶ್ಚರ್ಯವಾಯಿತು. ಆದರೆ ಶ್ರೀರಾಮನಿಂದ ಅವರ ಪೂರ್ವ ವೃತ್ತಂತವನ್ನೆಲ್ಲ ಕೇಳಿದ ಮೇಲೆ ಅವರ ಸಂಶಯಗಳೆಲ್ಲ ಪಂಕೃತವಾದವು ಅನಂ 5 ಶ್ರೀ ರಾಮನು ದೂತರನ್ನು ಅಯೋಧ್ಯೆಗೆ ಕಳುಹಿಸಿ ಅನೇಕ ವಾಹನಗಳನ್ನು ತರಿಸಿದನು ಮತ್ತು ಆ ವಾಹನಗಳಲ್ಲಿ ಆ ತರುಣಿಯರೆಲ್ಲರನ್ನು ಕುಳ್ಳಿರಿಸಿ, ಸೀತಿ ದೇವಿಯ ಇರುವ ಸ್ಥಳಕ್ಕೆ ಕಳುಹಿದನು. ಸೀತಾದೇವಿಯು ಆ ಲಲನೆಯರನ್ನು ಮರ್ಯಾದೆಯಿಂದ ಕಂಡು ಯೋಗ್ಯವಾದ ಅತಿಥಿಸತ್ಕುರಗಳನ್ನು ನಡೆಸಿರ್ದು ಶ್ರೀ ರಾಮನ ಮುಖದಿಂದ ಅವರ ಎಲ್ಲ ವೃತ್ತಾಂತವನ್ನು ಕೇಳಿ ಸೀತೆಯ ಸಮಾಧನಹೊಂದಿದಳು. ಈ ರೀತಿಶ್ರೀ ರಾಮನು ಅನೇಕ ವಿಚಾರ, ವಿಲಾಸಗಳಿಂದ ಆನಂದಬಡುತ್ತ ಒಂದು ಉತ್ತಮವಾದ ಸರೋವರದ ತೀರದಲ್ಲಿ ಏಳು ದಿವಸಗಳವರೆಗೆ ವಾಸಮಾಡಿ ದನು, ಅನಂತರ ಶ್ರೀರಾಮನು ಆ ತರುಣಿಯರ ತಾಯಿತಂದೆಗಳನ್ನು ವಿತರಿಸಿ, ಅವರನ್ನೆಲ್ಲ ಅಯೋಧ್ಯೆಗೆ ಕರೆಸಿ, ವಸ್ತ್ರಾಭರಣಗಳಿಂದ ಸಂತೋಷಗೊಳಿಸಿ, ಅವರ ವರ ಮಕ್ಕಳನ್ನು ಅವರವರ ಅಧೀನಕ್ಕೆ ಕಟ್ಟನು. ಆ ತರುಣಿಯರ ತುಯಿತಂದೆ ಗಳು ಶ್ರೀ ರಾಮನನ್ನು ಬಹುವಿಧವಾಗಿ ಸ್ತೋತ್ರಮಾಡಿದರು. ಆ ತರುಣಿಯರಲ್ಲಿ ಬ್ರಹ್ಮಣಸ್ತ್ರೀಯರಿಗೆ ವಿವಾಹಕಾಲವು ಊರಿತ್ತಿದ್ದರಿಂದ, ಅವರು ತಮ್ಮ ತಮ್ಮ ತಂದೆಗಳ ಮನೆಯಲ್ಲಿ ಬ್ರಹ್ಮಚರ್ಯದಿಂದ ಶ್ರೀರಾಮನ ಭಕ್ತರಾಗಿ ಆಯುಷ್ಯವನ್ನು ಆಳಿದರು. ಮಿಕ್ಕ ಮೂರು ವರ್ಣದ ತರುಣಿಯರು ತಮಗೆ ಯೋಗ್ಯರಾದ ತರುಣ. ರನ್ನು ಹರಿಸಿ ವಿವಾಹಮಾಡಿಕೊಂಡರು. ಶ್ರೀ ರಾಮನು ಅಗಾಗ್ಗೆ ಆ ತರುಣಿಯರ ವಿಷಮುಹೂತಗಳಿಗೆ ಹೋಗಿಬರುತ್ತಿದ್ದನು.
ಪುಟ:ಶ್ರೀ ಮದಾನಂದ ರಾಮಾಯಣ.djvu/೨೪೮
ಈ ಪುಟವನ್ನು ಪರಿಶೀಲಿಸಲಾಗಿಲ್ಲ.