ರಾಜ್ಯ ಕಾಂಡ, ಈ ರೀತಿಯಾಗಿ ಶ್ರೀ ರಾಮನು ಆನಂದದಿಂದ ಕಾಲಹರಣ ಮಾಡುತ್ತ ಒಂದು ದಿವಸ ಮಥುರೆಗೆ ಹೋದನು. ಅಲ್ಲಿ ಶತ್ರುಪನ ಮಗನಾದ ಸುಬಾಹು ವಿನ ರಾಜ್ಯ ಕಾರಭಾರಗಳನ್ನು ನೋಡುತ್ತ ಕೆಲವು ದಿವಸಗಳು ವಾಸವಾಗಿದ್ದನು ಒಂದು ರೀತಿಯಲ್ಲಿ ಶ್ರೀರಾಮನು ಸೀತೆಯೊಡನೆ ಯಮುನಾನದಿಯ ಮರಳಿನಲ್ಲಿ ಸು ವರ್ಣದ ಮಂಚದ ಮೇಲೆ ಮಲಗಿದ್ದನು. ಸಮಸ್ತ ದಸರೂ, ದಾಸಿಯರೂ ಮಲಗಿ ರುವ ಸಂದರ್ಭವನ್ನು ನೋಡಿ ಕಳಿಂದಿಯು ಉತ್ತಮ ಸ್ತ್ರೀರೂಪವನ್ನು ಧರಿಸಿದಳು. ಮುತ್ತು ಆಕೆಯು ಶ್ರೀ ರಾಮನ ಬಳಿಗೆ ಬಂದು ಆತನ ಪಾಡಗಳನ್ನು ಮುಟ್ಟಿದಳು. ಒಡನೆ ಶ್ರೀ ರಾಮನಿಗೆ ಎಚ್ಚರವಾಯಿತು. ಶ್ರೀ ರಾಮನು ಎದುರಿಗೆ ನಿಂತಿರುವ ದಿವ್ಯ ಸುಂದರಿಯಾದ ಸರ್ವಾಭರಣಗಳಿಂದ ಒಪ್ಪವ ತರುಣೀಮಣಿಯನ್ನು ನೋಡಿ ದನ್ನು ಶ್ರೀ ರಾಮನಿಗೆ ಆಕೆಯು ಯಮುನೆಯೆಂದು ತಿಳಿಯಿತು, ಆಗ ಶ್ರೀ ರಾಮ ನುಡೇ ಸೂರ್ಯಪ್ರತೀ, ಇಂಥ ಮಧ್ಯರಾತ್ರಿಯಲ್ಲಿ ಸ್ತ್ರೀವೇಷವನ್ನು ಧರಿಸಿ ನನ್ನ ಬಳಿಗೆ ಏಕೆ ಬಂದಿ' ಎಂದು ಪ್ರಶ್ನೆ ಮಾಡಿದನು. ಕಾಳಿಂದಿಯು ಹೇ ಪ್ರಭೋ, ನಿನಗೆ ಗೊತ್ತಿಲ್ಲದ ವಿಷಯಗಳಾವು? ಹೀಗಿರಲು ನನ್ನನ್ನು ಯಾಕೆ ವಿಚಾರಿಸುವ ಎಂದು ಹೇಳಿ ನಾಚಿಕೆಯಿಂದ ಭೂಮಿಯನ್ನು ನೋಡುತ್ತ ನಿಂತಳು. ಶ್ರೀ ರಾಮನು ಆ ಕಂಳಿದಿಗೆ ಈ ಅವತಾರದಲ್ಲಿ ತಾನು ಕೈಕೊಂಡಿರುವ ಏಕಪವ್ರತವನ್ನು ತಿಳುಹಿ, ದ್ವಾಪರಯುಗದಲ್ಲಿ ಕೃಷ್ಣರೂಪದಿಂದ ನಿನ್ನ ಇಚ್ಛೆಯನ್ನು ಪೂಣಿ ಮಾಡುವನು' ಎಂದು ವಚನಕೊಟ್ಟನು. ಬಳಿಕ ಯಮುನೆಯು ಸಂತೋಷದಿಂದ ಶ್ರೀ ರಾಮನ ಚರಣಕಮಲಗಳಿಗೆ ನಮಸ್ಕರಿಸಿ, ತನ್ನ ವಾಸಸ್ಥಾನಕ್ಕೆ ಪ್ರಯಾಣ ಯಡಿದಳು. -ರಾಜ್ಯಕಾಂಡ ಪೂರ್ವಾರ್ಧಮಾಪ್ತಃ
ಪುಟ:ಶ್ರೀ ಮದಾನಂದ ರಾಮಾಯಣ.djvu/೨೪೯
ಈ ಪುಟವನ್ನು ಪರಿಶೀಲಿಸಲಾಗಿಲ್ಲ.