ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶ್ರೀಮದಾನಂದ ರಾಮಾಯಣ, ನಮಗೆ ಮಾತ್ರ ಶಿಕ್ಷ ಮಡುವನು, ತಾನು ಮಾತ್ರ ಅಪರಾಧಗಳನ್ನೇ ಮಾಡುತ್ತಿ. ರುವನು, ಅವನಿಗೆ ಶಿಕ್ಷೆ ಕೊಡುವವರು ಯಾರು? ಈ 6ನು ಸರಿಯಾದ ನ್ಯಾಯವಿಮರ್ಶೆ ಮಾಡುವವನಲ್ಲ' ಎಂದು ನನ್ನ ಮೇಲೆ ಅಪವಾದ ಕೊಡಬಹುದು, ಆದ್ದರಿಂದ ನಾನು ನಕ್ಕದ್ದಕ್ಕೆ ಕಾರಣವನ್ನು ಈಗಲೇ ಶೋಧಮಾಡಿ ಅದಕ್ಕೆ ಸರಿ ಯಾದ ಶಿಕ್ಷೆಯನ್ನು ನಾನೇ ಮಾಡಿಕೊಳ್ಳುವೆನು” ಎಂದು ಮನಸ್ಸಿನಲ್ಲಿ ಯೋಚಿಸಿ, ಹೇ ಸಭಾಸದರೇ, ನೀವು ನಕ್ಕದ್ದಕ್ಕೆ ಕಾರಣವೇನು?' ಎಂದು ಕೇಳಿದನು. ಅವರು ಮಹಾವಿ, ತಮ್ಮ ದೂತನು ರಾಜ್ಯಸಭೆಯಲ್ಲಿ ನಗುವದನ್ನು ನೋಡಿ ನಮಗೆ ನಗೆ ಬಂತು' ಎಂದು ವಿಜ್ಞಾಪಿಸಿದರು. ಬಳಿಕ ಶ್ರೀ ರಾಮನು ದೂತನನ್ನು ಕರೆಸಿ ವಿಚಾರಿಸಿದನು. ಅವನು ಮಹಾರಾಜರೇ, ನಾನು ಬೀದಿಯಲ್ಲಿ ನಿಂತಿರುವಾಗ ಒಬ್ಬ ಕಟ್ಟಿಗೆ ಮಾರುವ ಮನುಷ್ಯನು ನಗುತ್ತಾ ಹೊರಟು ಹೋದನು. ಅವನನ್ನು ನೋಡಿ ನಾನು ಅಲ್ಲಿ ಬಹಳ ಹೊತ್ತಿನ ವರೆಗೂ ನಗುತ್ತಾ ನಿಂತಿದ್ದೆನು, ಇಲ್ಲಿಗೆ ಬಂದಮೇಲೆ ಆ ವಿಷಯವು ಜ್ಞಾಪಕಕ್ಕೆ ಬಂದದ್ದರಿಂದ ಯತ್ನವಿಲ್ಲದೆ ನಕ್ಕೆನು ಎಂದು ಹೇಳಿಕೊಂಡನು. ಆಗ ಶ್ರೀರಾಮನು ಆ ಕಟ್ಟಿಗೆಹೊರೆಯವನನ್ನು ಕುಜ ಸಭೆಗೆ ಕರತರಲು, ದೂತರಿಗೆ ಆಜ್ಞಾಪಿಸಿದನು, ಕಟ್ಟಿಗೆಹೊರೆಯವನು ಸಭೆಗೆ ಬಂದಕೂಡಲೆ ಶ್ರೀರಾಮನು ಮೊದಲನಂತೆ ಪ್ರಶ್ನೆ ಮಾಡಿದನು. ಆ ಮನುಷ್ಯನು ಶ್ರೀರಾಮನಿಗೆ ನಮಸ್ಕರಿಸಿ ನ್ಯಾವಿ, ನಾನು ಅಡವಿಯಿಂದ ಬರುತ್ತಿರುವಾಗ ಒಂದು ಅರಳಿ ಮರವು ನಗುತ್ತಿತ್ತು, ಅದನ್ನು ನೋಡಿ ನನಗೆ ನಗುವುಬಂತು ಆಗ ನಾನು ನಕ್ಕೆನು, ಬೀದಿಯಲ್ಲಿ ಓಡ್ಯಾಡುತ್ತಿರುವಾಗ ದುತ್ತೆ ಆದು ಸ್ಮರಣೆಗೆ ಬಂದದ್ದರಿಂದ ನಗಬೇಕಾಯಿತು' ಎಂದು ಹೇಳಿಕೊಂಡನು “ ಶ್ರೀಮನು (ಅವನ ಮಾತು ಸುಳ್ಳೋ, ಅಥವಾ, ನಿಜವೋ, ಆ ವೃಕ್ಷದ ಬಳಿಗೆ ಹೋಗಿ ನೋಡಿ ಬನ್ನಿ' ಎಂದು ದೂತರಿಗೆ ಆಜ್ಞಾಪಿಸಿದನು, ಅವರು ವೃಕ್ಷವು ನಗುವದನ್ನು ನೋಡಿ ಬಂದು ಶ್ರೀರಾಮನಿಗೆ ಆ ವಿಷಯವನ್ನು ಅರಿಕೆ ದೂರಿದರು. ಬಳಿಕ ಶ್ರೀರಾಮನು ಆ ವೃಕ್ಷವನ್ನು ಕಡಿದು ಹಾಕುವಂತ ಸೇವಕ ರಿಗೆ ಆಜ್ಞಾಪಿಸಿದನು. ದಖತರು ಆ ವೃಕ್ಷದ ಬಳಿಗೆ ಕಡಲಿಗಳನ್ನು ತೆಗೆದುಕೊಂ ಡು ಬಂದೊಡನೆ ಅನೃಕ್ಷದಲ್ಲಿರುವ ಬ್ರಹ್ಮನು ಕಲ್ಲುಗಳಿಂದ ಆದೂತರನ್ನು ಕೂಡ ದನು. ಅಂದರೆ ಅತೃಕ್ಷದಿಂದ ಕಲ್ಲುಗಳು ಮಾತ್ರ ಹೊರಗೆ ಬರುತ್ತಿದ್ದವು. ಆ ಕಲುಗಳಿಂದ ದೂರ ತಲೆಗಳು ಒಡೆದು ರಕ್ತವು ಸರಿಯಿಲಂಭಿಸಿತು. ಬಳಎಲ್ಲರೂ ಅಳುತ್ತಿಶ್ರೀರಾಮನ ಬಳಿಗೆ ಬಂದರು. ಆತನು ಇನ್ನೂ ನೂರು