ಮನೋಹರಕಾಂಡ. ww ಶ್ರೀರಾಮನ ಸದುಪದೇಶ ಒಂದನೊಂದು ದಿವಸ ಶ್ರೀ ರಾಮನು ಸಿಂಹಾಸನದ ಮೇಲೆ ಕುಳಿತಿರಲು, ಪ್ರಜೆ ಗಳು (ರಾಮಚಂದ್ರ, ನೀನು ಪರಮಾತ್ಮ ಸ್ವರೂಪನೆಂದು ನಾವು ಮತ್ತೆ ಮತ್ತೆ, ಕೇಳುತ್ತಿರುವವ ಆದ್ದರಿಂದ ನಮಗೆ ಏನಾದರೂ ಸದುಪದೇಶ ಮಾಡು ಎಂದು ಪ್ರಾರ್ಥಿಸಿದರು. ಈ ಮಾತುಗಳನ್ನು ಕೇಳಿ ಶ್ರೀರಾಮನು “ಎಲೈ ಪ್ರಜೆಗಳಿರು, ನನ್ನ ದೂತರ: ನಿಮಗೆ ಪ್ರತಿದಿವಸವೂ ಉಪದೇಶ ಮಾಡುತ್ತಿರುವರು. ಅದನ್ನು ನೀವು ಕೇಳೇ ಇಲ್ಲವೇ ಹಾಗೆ ಇರಲಿ, ಇವತ್ತಿನ ವರೆಗೂ ಆದದ್ದಾಯಿತು. ಈ ದಿವಸ ರಾತ್ರಿ ನೀವು ಎಚ್ಚರವಾಗಿದ್ದು ನನ್ನ ದೂತರ ಉಪದೇಶಗಳನ್ನು ಕೇಳಿ ರಿ” ಎಂದು ಹೇಳಿದನು. ಅದನ್ನು ಕೇಳಿ ಸಮಸ್ತ ಪುರಜನರೂ 'ಈ ದಿವಸ ತ್ರಿ ಜಾಗರೂಕರಾಗಿದ್ದು ದುದೂತರ ಉಪದೇಶವನ್ನು ಕೇಳಬೇಕು' ಎಂದು ನಿ ಶಯ ಮಾಡಿದರು. ಬಳಿಕ ಅವರೆಲ್ಲರೂ ತಮ್ಮ ತಮ್ಮ ಮನೆಗಳಿಗೆ ತೆರಳಿದರು. ಅವರಿಗೆ ಆ ದಿನ ಪ್ರತಿ ನಿದ್ರೆ ಬರಲೇ ಇಲ್ಲ. ಅಷ್ಟರೊಳಗೆ ದುಧ್ಯಂತ್ರಿಯಾ ತು, ಆಗ ರಾಮದೂತರು ದುಂದುಭಿಯನ್ನು ಬಾರಿಸುತ್ತಾ ನಗರದ ಪ್ರದಕ್ಷಿಣೆ ಮಾಡಲಾರಂಭಿಸಿದರು. ಆ ದೂತರು ಎಲೆ ಪ್ರಜೆಗಳಿ, ಎಚ್ಚರವಾಗಿರಿ, ನಿದ್ರೆಮಾಡಬೇಡಿರಿ, ಈ ನಿದ್ರೆಯು ನಿಮಗೆ ಒಳ್ಳೇದಲ್ಲ. ನಿಮಗೆ ಯಾವ ಕಾಲದಲ್ಲಿ ತೊಂದರೆಗಳು ಬರುವವೋ, ಅದು ಗೊತ್ತಾಗುವದಿಲ್ಲ. ಈ ಅಯೋಧ್ಯಾನಗರಿಗೆ ಒಂಭತ್ತು ಬಾಗಿಲುಗಳಿವೆ, ಮತ್ತು ಒಂದು ಬಹಳ ಚಿಕ್ಕ ಬಾಗಿಲೂ ಇರುವದು. (5ಾಮರಾಜ್ಯದಲ್ಲಿ ಭಯದ ಸಂಬಂಧವೇ ಇಲ್ಲವೆಂದು ತಿಳಿದು ರಪಾಲಕರು ಕೆಲವು ಬಾಗಿಲುಗಳನ್ನು ಮುಚ್ಚುವರು. ಕಲವು ಬಾಗಿಲುಗಳನ್ನು ಮುಚ್ಚದೆ ಹಾಗೆ ಹೇ ಬಿಡುವರು. ಆ ಬಾಗಿಲುಗಳಿಗೆ (ಅರ್ಗಗಳು) ಅಗಳಿಗಳಿಲ್ಲ, ಚಿಲಕಗಳಿಲ್ಲ, ಎಲ್ಲೆ ಜನರೇ, ದಕ್ಷಿಣದಿಕ್ಕಿನಲ್ಲಿ ಕಳ್ಳಬಣ್ಣದ ಒಬ್ಬ ಚೋರನಿರುವನು. ಅವನು ಯಾರಿಗೂ ಎಂದಿಗೂ ಕಾಣುವದಿಲ್ಲ, ಅವನು ಗುಪ್ತರೂಪದಿಂದ ಇಲ್ಲಿಗೆ ಬರುವ ನು, ಆತನು ನಾಗರಿಕರಂತೆ ಕಾಣುತ್ತಾನೆ. ಅವನ ಸಹಾಯದಿಂದ ಒಬ್ಬ ದೂ ತನು ಹೊರಗೆ ಬಂದನೆಂದರೆ, ದುರ್ಗವನ್ನು ಭೇದಿಸಿ, ಅದರಲ್ಲಿರುವ ಮುಖ್ಯರನ್ನು
ಪುಟ:ಶ್ರೀ ಮದಾನಂದ ರಾಮಾಯಣ.djvu/೨೮೫
ಈ ಪುಟವನ್ನು ಪರಿಶೀಲಿಸಲಾಗಿಲ್ಲ.