ಶ್ರೀಮದಾನಂದ ರಾಮಾಯಣ, ನಾಶಮಡುವನು ಈ ಅಯೋಧ್ಯೆಯಲ್ಲಿ ಅನೇಕ ವಿಧವಾದ ವೇಷಗಳನ್ನು ಧರಿ ಸಿ, ಅವನ ದೂತರು ತಿರುಗುತ್ತಿರುವರು. ಶ್ರೀರಾಮನಿಗೆ ಅವರ ಭಯವು ಸ್ವಲ್ಪ ಚದರೂ ಇಲ್ಲ, ಆದರೆ ನಮಗೆ ನಿಮಗ ಬಹಳ ಭಯವಾಗಿರುವದು. ಕಾರಣ ನಾವು ದುರ್ಬಲರಾಗಿರುವವ ದುರ್ಬಲರನ್ನೇ ಅವನು ಹಿಂಸಿಸಬೇಕೆಂದು ನಿಯ ಮವಿರುವದು, ವ್ಯವಹಾರದಲ್ಲಾದರೂ ಮೇಕೆ, ಕುರಿ ಇವುಗಳನ್ನೇ ಜನರು ದೇ• ವತೆಗಳಿಗೆ ಬಲಿಕೊಡುತ್ತಾರೆ, ಆದರೆ ಸಿಂಹದ ಮರಿಗಳನ್ನು ಮಾತ್ರ ಯಾರೂ ಮುಟ್ಟುವದಿಲ್ಲ, ಈ ಕಳ್ಳನು ಯಾವಾಗ ಮನೆಯನ್ನು ಲೂಟಿ ಮಾಡುವನೋ ತಿಳಿ ಯದು. ಆದ್ದರಿಂದ ಎಚ್ಚರಗೊಂಡು, ಸಮಾಧಾನ ಹೊಂದಿದ ಅಂತಃಕರಣವುಳ್ಳ ನಂಗಿ, ಕೈಯಲ್ಲಿ ಹದನರಾದ ಖಡ್ಗವನ್ನು ಧರಿಸಿ ನಿಲ್ಲಿಂ, ಕವಚಗಳನ್ನು ಧರಿ ಸಿರಿ, ಧೈರ್ಯವನ್ನು ಹೊಂದಿರಿ, ಹೆದರಬೇಡಿ, ಈ ಅಯೋಧ್ಯೆಯಲ್ಲಿ ಯಾರು ಯುದಾಗಲೂ ಎಚ್ಚರದಿಂದಿರುವರೋ ಅವರಿಗೆ ಕಳ್ಳರ ಭಯವೇ ಇಲ್ಲ. ಈ ನಮ್ಮ ಉಪದೇಶವನ್ನು ಮರೆಯಬೇಡಿರಿ, ಜನರೆ, ಎಚ್ಚರ, ಎಚ್ಚರ, 11 ” ಎಂದು ಅನೇಕ ರೀತಿಗಳಿಂದ ಬೋಧಮಾಡಲಾರಂಭಿಸಿದರು. ಜನರು ನೃತ್ಯರ ಈ ವಚನ ಗಳನ್ನು ವಿಚಾರ ಮಾಡಿದರು. ಶ್ರೀ ರಾಮನ ಕೃಪೆಯಿಂದ ಅವರಿಗೆ ಜ್ಞಾನವ ಯಿತು. ಪ್ರಾತಃಕಾಲದಲ್ಲಿ ಅವರೆಲ್ಲರೂ ಸ್ನಾನಮಾಡಿ ನಿತ್ಯಕೃತ್ಯಗಳನ್ನು ಮುಗಿಸಿ ಕೊಂಡು, ಸಭಾಮಂಟಪಕ್ಕೆ ಬಂದರು. ಪ್ರಜೆಗಳು ಶ್ರೀರಾಮನ ಚರಣಗಳಿಗೆ ನಮಸ್ಕರಿಸಿ, ಕರಮಚಂದ್ರ, ನನಗೆ ನಿನ್ನ ಕೃಪೆಯಿಂದ ಆತ್ಮಬೋಧವಾಯಿತು ಎಂದು ವಿಜ್ಞಾಪಿಸಿದರು. ಆ ಮಾತುಗಳನ್ನು ಕೇಳಿ ಶ್ರೀಮನು ನಗುತ್ತ “ನಿಮಗೆ ಏನು ತಿಳುವಳಿಕೆಗೆ ಬಂದಿರುವದು? ಹೇಳಿರಿ ಎಂದನು. ಆಗ ಪ್ರಜೆಗಳು ರಾಮ ಚಂದ್ರ, ದೇಹವೇ ಅಯೋಧ್ಯೆಯು ಒಂಭತ್ತು ಇಂದ್ರಿಯ ಗೋಲಕಗಳೇ ಒಂಥ ತ್ತು ಬಾಗಿಲುಗಳು ಬ್ರಹ್ಮರಂಧ್ರವೇ ಸಕ್ಷದ್ಯುರ, ಮೋಹವೆಂಬುದೇ ರಾತ್ರಿ, ಭ್ರಾಂತಿಯೇ ನಿದ್ರೆ, ಇಂಥಾ ಮೃತ್ಯುವಿಗೆ ಆಧೀನವಾಗಿರುವದು ಒಳ್ಳೇದಲ್ಲ. ಕಲವೇ ಒಬ್ಬ ಚೋರನು ಪಾತ್ರ, ಪಿತ್ತ, ಕಫಗಳೇ ಅವನ ದೂತರು, ಜ್ಞಾನ ನೇ ಒಂದು ಖಡ್ಡ, ಜೀವಾದಿಗಳೇ ದುರ್ಬಲರು. ಸಾರಾಂಶ, ಈ ದೇಹದ ಮಧ್ಯ ದಲ್ಲಿ ಎಲ್ಲ ಅಯೋಧ್ಯಯ ಇರುವದು, ಅದರ ನಾಶವಾಗಬಾರದು ಎಂಬ ಇಚ್ಚೆಯಿದ್ದರೆ, ಕಲನನ್ನೂ ಅವನ ದೂತರನ್ನೂ ಪುಷ್ಟರಾಗಗೊಡದೆ, ಅಯೋಧ್ಯೆಯಲ್ಲಿರುವ ಮನನ್ನು ಆಶ್ರಯಿಸಬೇಕು. ಈವು, ಈ ರೀತಿಯಾಗಿ ನಿನ್ನ ಮಹಿಮೆಯನ್ನು ತಿಳಿದು ನಾವು ಕೃದವು” ಎಂದು ಹೇಳಿದರು ಇರಲಿ,
ಪುಟ:ಶ್ರೀ ಮದಾನಂದ ರಾಮಾಯಣ.djvu/೨೮೬
ಈ ಪುಟವನ್ನು ಪರಿಶೀಲಿಸಲಾಗಿಲ್ಲ.