ಸಾರಾpಡಿ. ಇವೆಲ್ಲಾ ಮುಗಿದ ಬಳಿಕ ಶ್ರೀರಾಮಾದಿಗಳು ತಮ್ಮ ತಮ್ಮ ಪತಿಯರೊಡನೆ ಕೌಸಲ್ಯಯ ಮೊದಲಾದ ರಾಜಪತ್ನಿಯರ ಹಿಂದೆ ಭೋಜನಶಾಲೆಯನ್ನು ಪ್ರ ವೇಶಮಾಡಿದರು. ಅಲ್ಲಿಪಾರ್ವತೀಪರಮೇಶ್ವರರ ಪೂಜಯಾದನಂತರ ತಮ್ಮತ ಪತ್ನಿಯರೊಡಗೂಡಿ ಪರಮಾನಂದದಿಂದ ಭೋಜನಮಾಡಿದರು. ದಶರಥ ಮಹಾರಾಜನೂ ಕೂಡ ಮುನಿಗಳು, ಋಷಿಗಳು, ಸ್ನೇಹಿತರು, ಮಂತ್ರಿಗಳು, ಬ್ರಾ ಹ್ಮಣರು ಇವರುಗಳೊಡನೆ ಉಚಿತವಾದ ಆಸನದಲ್ಲಿ ಕುಳಿತು ಜನಕ ಮಹಾರಾ ಜನ ಮನೆಯಲ್ಲಿ ಭೋಜನಮಾಡಿದನು. ಕೌಸಹೋಮೊದಲಾದ ವರಪಕ್ಷದಜನ ರಿಗೆ ಬೀಗಿತ್ತಿಯರಿಗೆ) ಜನಕಮಹಾರಾಜನ ಕಡೆಯ ತರುಣಿಯರ ಉಪಚಾರವಂತೂ ಹೇಳಲೇತೀರದು. ಇವಿಧವಾದ ಅನೇಕ ಉತ್ಸವಗಳಲ್ಲಿ ನಾಲ್ಕು ದಿವಸಗಳನ್ನು ಉಭಯಪಕ್ಷದವರೂ ನಾಲ್ಕು ಘಳಿಗೆಗಳಂತ ಕಳೆದರು. ಬಳಿಕ ಐದನೇದಿವಸ ಜನ ಕಮಹಾರಾಜನು ಅಳಿಯಂದಿರಿಗೆ ಆನೆ, ಒಂಟೆ, ಕುದುರೆ ರಥ, ಕಾಲಾಳು, ಆಭ ರಣಗಳು, ವಸ್ತ್ರಗಳು, ಆಯುಧಗಳು ಇವೇ ಮೊದಲಾದ ಸಮಸ್ಯಪದಾರ್ಥಗಳ ನ್ನು ಯಥೇಚ್ಛವಾಗಿ ಸಮರ್ಪಿಸಿ ಸಂತೋಷಗೊಳಿಸಿದನು. ಮತ್ತ ದಶರಥನು ಹಾರಾಜನಿಗೂ, ಕೌಸಲ್ಯ ಮೊದಲಾದ ವರ್ಗದವರಿಗೂ ವಸ್ತ್ರಾಭರಣಗಳನ್ನು ಸಮರ್ಪಿಸಿದನು. ಬಹಳ ಹೇಳುವದೇನು? ದಶರಥನ ಕತೆಯ ಸಮಸ್ತ ಜನರ ಈ ಸ್ವಾರ್ಥವನ್ನೂ ಪೂರ್ಣಮಾಡಿದನು. ಇದನ್ನು ನೋಡಿ ದಶರಥಮಹಾರಾಜನು ಆಶ್ಚರ್ಯಗೊಂಡು, ಮುಂ ದ ಜನಕಮಹಾರಾಜನ ಕೋರಿಕೆಯಂತೆ ಒಂದುತಿಂಗಳವರೆಗೂ ವಿದೇಹನಗರದ ಲ್ಲೇ ಸಪರಿವಾರವಾಗಿ ವಾಸಮಾಡಲು, ದಶರಥಮಹಾರಾಜನು ನಿಶ್ಚಯಮಾಡಿದನು, ಮಿಕ್ಕ ವಿಶ್ವಾ ಮಿತ್ರರೇ ಮೊದಲಾದ ಬ್ರಾಹ್ಮಣರೂ, ವಿವಾಹಕ್ಕೋಸ್ಕರ ಬಂದಸ ಮಸ್ತ್ರ ರಾಜರೂ ಪರಮಹರ್ಷದಿಂದ ಜನಕಮಹಾರಾಜನೇ ಮೊದಲಾದ ಸಮಸ್ತ ರ ಅಪ್ಪಣೆಯನ್ನು ಪಡೆದು ತಮ್ಮ ತಮ್ಮ ಸ್ಥಾನಗಳಿಗೆ ತೆರಳಿದರು. ಬಳಿಕ ಜನಕ ಮಹಾರಾಜನು ಶ್ರೀ ರಾಮನೇ ಮೊದಲಾದ ಅಳಿಯಿಂದಿರೊಡನೆ ಕೂಡಿ ಏನೋ ದದಿಂದ ಒಂದು ತಿಂಗಳನ್ನು ಒಂದು ದಿವಸದಂತೆ ಕಳೆದನು. ಮುಂದೆ ದಶರಥಾದಿ ಗಳು ಹೊರಡುವ ಸನ್ನಾಹವನ್ನು ಸಿದ್ಧ ಮಡಿ ಜನಕ ಮಹಾರಾಜನು ತನ್ನ ಸೀತಾದೇ ವಿಯೇ ಮೊದಲಾದ ಪ್ರಿಯರನ್ನು ಕಳುಹಿಸಿಕೊಡುವದೇ ಯೋಗ್ಯವೆಂದು ನಿಮ್ಮ ಯಮಾಡಿದನು, ಪ್ರಯಾಣಕಾಲದಲ್ಲಿ ಎಲ್ಲರಿಗೂ ಬಹಳ ವ್ಯಸನವಾಯಿತ ಸೀತೆಯೇ ಮೊ
ಪುಟ:ಶ್ರೀ ಮದಾನಂದ ರಾಮಾಯಣ.djvu/೩೭
ಈ ಪುಟವನ್ನು ಪರಿಶೀಲಿಸಲಾಗಿಲ್ಲ.