ಈ ಪುಟವನ್ನು ಪರಿಶೀಲಿಸಲಾಗಿಲ್ಲ.

91 ಶ್ರೀ ಮದಾನಂದ ರಾಮಾಯಣ: ಸಮಸ್ತ ಆಸ್ಮಿಕ ಕೃತ್ಯಗಳನ್ನು ಮುಗಿಸಿಕೊಂಡು, ಕುಲಪುರೋಹಿತರಾದ ವಸಿ ಸ್ಯರ ಅಪ್ಪಣೆಯಂತ, ಗ್ರಾಮಾಚಾರ, ಕುಲಾಚಾರ ವ್ಯಾಪಾರ, ಇವು ಗಳನ್ನೆಲ್ಲ ಮುಗಿಸಿಕೊಂಡು, ತನ್ನ ಪರಾಕ್ರಮಿಗಳಾದ ಮಕ್ಕಳೊಡನೆ ಜನಕಮಹಾ ರಾಜನ ವಿವಾಹ ಮಂಟಪದ ಕಡೆಗೆ ಹೊರಟನು. ಆ ಕಾಲದಲ್ಲಿ ವಾದ್ಯಗಳು ಭೋರ್ಗರೆದವ, ದುಂದುಭಿಗಳ ಧ್ವನಿಯು ಅತಿ ಗಂಭೀರವಾಗಿತ್ತು. ಶ್ರೀ ರಾ ಮಾದಿಗಳ ಮೇಲೆ ಪರಸ್ತ್ರೀಯರು ಕಷ್ಟಗಳನ್ನ ರಚಿದರು. ಇತ್ತ ಜನಕಮಹಾ ರಾಜನೂ ತಮ್ಮಲ್ಲಿ ನಡೆಯತಕ್ಕ ಸಮಸ್ತ ಮಂಗಳ ಕಾರ್ಯಗಳನ್ನೂ ಮುಗಿಸಿ ಕೊಂಡು, ರಾಜವೈಭವದಿಂದ ಕೂಡಿದವನಾಗಿ, ದಶರಥನೇ ಮೊದಲಾದವರನ್ನು ವಿವಾಹಮಂಟಪಕ್ಕೆ ಕರೆತರಲು ಬಹಳ ಸಂಭ್ರಮದಿಂದ ಹೊರಟನು, ಮಧ್ಯಮ ರ್ಗದಲ್ಲಿ ಉಭಯಪಕ್ಷದವರ ಸಂದರ್ಶನವಾದನಂತರ ಎಲ್ಲರೂ ವಿವಾಹಮಂಟಪದ ಕಡೆಗೆ ತೆರಳಿದರು. ಆ ಸಮಾರಂಭವು ಜನಗಳಿಗೆ ಪರಮಹರ್ಷಕರವಾಗಿತ್ತು. ಮುಂದೆ ಎಲ್ಲ ರೂ ವಿವಾಹನಂಟಕ್ಕೆ ಸೇರಿದ ಬಳಿಕ, ಜನಕಮಹಾರಾಜನು ವಿವಾಹಮಂಟಪ ದಲ್ಲಿ ಶ್ರೀ ರಾಮಚಂದ್ರ-ಲಕ್ಷಣ-ಭರತ-ಶತ್ರುಘರುಗಳನ್ನು ಶ್ರೇಷ್ಠಗಳಾದ ಸಿಂ ಹಾಸನಗಳ ಮೇಲೆ ಕುಳ್ಳಿರಿಸಿ, ವರಪೂಜೆಯನ್ನು ಸಾಂಗವಾಗಿ ನೆರವೇರಿಸಿ, ಶ್ರೀ ರಾಮನೇ ಮೊದಲಾದವರಿಗೆ ದಿವ್ಯಾಭರಣಗಳನ್ನೂ ಆಮೌಲ್ಯವಾದ ವಸ್ತ್ರಗಳನ್ನೂ ಸಮರ್ಪಿಸಿದನು - ಆಭರಣಗಳನ್ನೂ, ವಸ್ತ್ರಗಳನ್ನೂ ಧರಿಸಿದ ಶ್ರೀ ರಾಮಾದಿ 11ಳು ಶರತ್ಕಾಲದ ಪೂರ್ಣಿಮೆಯ ಚಂದ್ರನಂತ ಪ್ರಕಾಶಿಸಿದರು. ಬಳಿಕ ಮಧು ಪರ್ಕ ಮದಲಾದ ವಿವಾಹಗಳು ನೆರವೇರಿದವು. ಅನಂತರ ದಶರಥಮಹಾರಾ ಜನೂ ತನ್ನ ಸೊಸೆಯರಿಗೆ ಅಸದೃಶಳಾದ ವಸ್ತ್ರಗಳನ್ನೂ ದಿವ್ಯಾಭರಣಗಳನ್ನೂ ಪ್ರತ್ಯೇಕವಾಗಿ ಕೊಟ್ಟು ಸಂತೋಷಗೊಳಿಸಿದನು. ಮುಂದೆ ಶುಭಮುಹೂರ್ತ ದಲ್ಲಿ ಅಗ್ನಿ ಮತ್ತು ದೇವಬ್ರಾಹ್ಮಣರು ಸಾಕ್ಷಿಗಳಾಗಿರಲು, ಆ ವಧೂವರರ ಪಾಣಿಗ್ರಹಣ ಮಹೋತ್ಸವವು ನಡೆಯಿತು. ಆ ಕಾಲದಲ್ಲಿ ಸಮಸ್ತ ಲೋಕಗಳಿ ಗೂ ಹರ್ಷವಾಯಿತು. ಆಕಾಶದಲ್ಲಿ ಇಂದ್ರಾದಿದೇವತೆಗಳು ವಿಮಾನಾರೂಢರಾಗಿ. ಪರಮಸಂತೋಷದಿಂದ ಆ ಉತ್ಸವವನ್ನು ನೋಡುತ್ತಿದ್ದರು. ವಿದ್ಯಾಧರರು ವಧ ವದರ ಮೇಲೆ ಪುಷ್ಪವರ್ಷಣಮಾಡಿದರು. ನಾರದಾದಿ ಮಹರ್ಷಿಗಳು ಆಶೀರ್ವದಿ ಸಿದರು. ಅನಂತರದಲ್ಲಿ ಲಾಜಾಹೋಮ, `ಸಪ್ಪಸದಿ ಮೊದಲಾದ ಮಂಗಳಕಾರ್ಯ ಗಳು ಸಾಂಗೋಪಾಂಗವಾಗಿ ನೆರವೇರಿದವು.