ಸರಕಾಂಡ. •••••• •••• ತ್ಯಾಗಮಾಡಬೇಕು. ಸಂಕಟಕಾಲದಲ್ಲಿ ಧೈರ್ಯವನ್ನು ಹೊಂದಬೇಕು. ಧೈರ್ಯ ದಿಂದಲೇ ಸಮಕಾರ್ಯಗಳು ಪೂರ್ಣವಾಗುವವ, ತಂದೆಯೇ, ನಿನ್ನ ಪೂರ್ವಜನ್ಮದ ತಪಸ್ಸಿಗೆ ಮೆಚ್ಚಿ, ಈಗ ನಿಮ್ಮ ಮಗನಾಗಿ ನಾನು ಅವತರಿಸಿರುವೆ ನು. ನನ್ನ ಈ ನಿಜಸ್ವರೂಪವನ್ನು ಯಾರಿಗೂ ತಿಳಿಸಬಾರದು” ಎಂದು ಹೇಳಿದನು. ಬಳಿಕ ದಶರಥಮಹಾರಾಜನು ಮಗನಾದ ಶ್ರೀ ರಾಮಚಂದ್ರನ ಪಾದಗಳ ಲ್ಲಿ ಮಸ್ತಕವನ್ನಿಟ್ಟು ನಮಸ್ಕರಿಸಿದನು. ಇದು ಶ್ರೀರಾಮನಿಗೆ ಸಹನವಾಗಲಿಲ್ಲ. ಆಗ ರಾಮನು ತಂದೆಯನ್ನು ನೋಡಿ ಪೂಜ್ಯರಾದ ಅಪ್ಪಾಜೆಯವರೆ, ತಾವು ನಮ್ಮ ಸ್ಕಾರಮಾಡುವದು ನನಗೆ ಶ್ರೇಯಸ್ಕರವಲ್ಲ. ನಾನು ಈಗ ಮಣಿಯ ಗುಣಗಳಿಂದ ಕಾಡಿ ಶರೀರ ಧಾರಣ ಮಾಡಿರುವೆನು. ಈ ಶರೀರವ ಈಗ 'ವ' 'ದೆ. ತಾವು ನನಗೆ ವಂದ್ಯರು. ಆದ್ದರಿಂದ 3'ವು ನನಗೆ ಸಮಸ್ಯರವಡಬಾರ.” ಎಂದು ಅತಿ ವಿನಯದಿಂದ ಪ್ರಾರ್ಥನೆ ಮೂಡಿದನು. ಈ ವತುಗಳನ್ನು ಕೇಳಿ ಕೌಸಲೆಯೇ ಮೊದಲಾದ ಸಮಸ್ಯರಿಗೂ ಪರಮಹರ್ಷವಾಗಿತ್ತು. ಅವರು ರಾಮನಲ್ಲಿರುವ ಪಿತ್ತ ಭಕ್ತಿಯನ್ನು ಕೊಂಡಾಡಿದರು. ಮುಂದೆ ಕೆಲವು ದಿವಸಗಳ ವರೆಗೆ ತಮ್ಮಂದಿ ರೊಡನೆ ಶ್ರೀರಾಮನು ಪರಮ ಸೌಖ್ಯವನ್ನ? :ಸಿದನು. ಆ ಕಾಲದಲ್ಲಿ ಭೂ ಮಂಡಲವೆಲ್ಲವೂ ಮಳೆ-ಬೆಳೆಗಳಿಂದ ಪ್ರತಿ ಹೊಂದಿತು. ೪ನೆಯ ಪ್ರಕರಣ. ವನವಾಸ ಈರೀತಿ ಶ್ರೀರಾಮನು ಅಯೋಧ್ಯೆಯಲ್ಲಿ ಸೀತಾಸಮೇತನಾಗಿ ರಾಜಸುಖವನ್ನ ನುಭವಿಸುತ್ತಿರಲು, ಒಂದಾನೊಂದು ದಿವಸ ನಾರದ ಶ್ರೀರಾಮನನ್ನು ಕಾಣಲು ಆಕಾಶಮಾರ್ಗದಿಂದ ಬಂದರು. ಆ ದಿವಸ ರವಿವರವಾಗಿತ್ತು. ಶ್ರೀ ರಾಮನು ಅದೇ ಸಾರ್ಯೋಪಾಸನೆ ಮಾಡಿ, ವಿಶ್ರಾಂತಿಗಾಗಿ ಕುಳಿತಿದ್ದರು. ವಿದರಾಗಿ ಬರುತ್ತಿರುವ ಭಗವಧಭಕ್ತ ಶಿರೋಮಣಿಗಳಿದ ನಾರದಮಹರ್ತಿಗಳನ್ನ ನೋಡಿ
ಪುಟ:ಶ್ರೀ ಮದಾನಂದ ರಾಮಾಯಣ.djvu/೫೩
ಈ ಪುಟವನ್ನು ಪರಿಶೀಲಿಸಲಾಗಿಲ್ಲ.