ನರತಂಡ. ಓ varvasan ಪ್ರಜೆಗಳೂ ಆ ಮಾತಿಗೆ ತನ್ನ ಸಮ್ಮತಿಯನ್ನಿತ್ತರು. ಬಳಿಕ ಕುಲಪುರೋಹಿತರಾದ ವಸಿಷರು ನಾಳಿನದಿವಸವೇ ಶ್ರೇಷ್ಠವಾದ ಮುಹೂರ್ತವಿರುವದಂದು ದಶರಥಮಹಾ ರಾಜನಿಗೆ ತಿಳುಹಿದರುಆನಂತರ ಮಹಾರಾಜರ ಅಪ್ಪಣೆಯಂತ ರಾಜಾಭಿಷೇಕದ ಸಮಸ್ತಸಂಚಾರಗಳನ್ನೂ ಸಿದ್ಧಪಡಿಸುವ ಪ್ರಯತ್ನ ನಡೆಯಿತು. ಈ ವರ್ತಮಾ ಸವ ಶ್ರೀ ರಾಮನಿಗೆ ಆದಿವಸ ರಾತ್ರಿ ತಿಳಿಯಿತು. ಶ್ರೀ ರಾಮನು ಏಕಾಂತಗೃಹ ದಲ್ಲಿ ಸೀತಾದೇವಿಯನ್ನು ಕುರಿತು ಜಾನಕಿಯೇ, ನಾಳಿನ ದಿವಸ ನನಗೆ ರಾಜ್ಯಾಭಿ ಷೇಕವನ್ನು ಮಾಡಲು ನನ್ನ ತಂದೆಯು ನಿಶ್ಚಯಿಸಿರುವನು. ಆದರೆ ಆ ಕಲಸವು ನಡೆಯುವದಿಲ್ಲ. ಕೈಕೇಯಿಯ ನಿರ್ಬಂಧದಿಂದ ದಶರಥಮಹಾರಾಜನು ಹದಿನಾಲ್ಕು ವರ್ಷಗಳ ವರೆಗೂ ವನವಾಸಮಾಡುವಂತೆ ನನಗೆ ಅಪ್ಪಣೆ ಮಾಡುವನು. ನಾನು ವನವಾಸವನ್ನು ಮುಗಿಸಿಕೊಂಡು ಬರುವ ವರೆಗೂ ನೀನು ಇಲ್ಲಿಯೇ ಗುರುಹಿರಿಯ ರನ್ನನುಸರಿಸಿಕೊಂಡು ವಾಸಮಾಡು” ಎಂದನು " ಈ ಮಾತುಗಳನ್ನು ಕೇಳಿ, ಜಾನಕಿಯು ರಘುನಾಥನೇ, ನಿನ್ನನ್ನು ಬಿಟ್ಟು ನಾನು ಒಂದು ಗಳಿಗೆಯಾದರೂ ಇಲ್ಲಿ ವಾಸಮಾಡಲಾರೆನು, ನಿನ್ನ ಜೊತೆಯಲ್ಲರು ವದೇ ನನಗೆ ಪ್ರಿಯಕರವು, ನನಗೆ ನೀನಿಲ್ಲದ ಅರಮನೆಯು ಅರಣ್ಯದಂತ ಕಾಣುವ ದು, ಸುವ್ರತೆಯರಿಗೆ ಪತಿಸೇವೆಯೇ ಪರಮಪಾವನವ, ಅದಲ್ಲದೆ ನನ್ನ ವಿವಾಹ ಕಾಲದಲ್ಲಿ ನೀನೇ ನನಗೆ ಪತಿಯಾದರೆ, ಹದಿನಾಲ್ಕು ವರ್ಷಗಳು ಋಷಿಗಳಂತ ವನ ವಾಸಮಾಡುವನೆಂದು ದೇವತೆಗಳಿಗೆ ಬೇಡಿಕೊಂಡಿರುವನು, ಒಬ್ಬ ಮಹನೀಯರು ನನ್ನ ಹಸ್ತವನ್ನು ನೋಡಿ, ನೀನು ಹದಿನಾಲ್ಕು ವರ್ಷಗಳು ವನವಾಸ ಮಾಡಬೇ ಕಾದ ಸಂದರ್ಭವಿರುವದೆಂದು ಹೇಳಿರುವರು. ನಾನು ತಂದೆಯ ಮನೆಯಲ್ಲಿರುವಾಗ ವಾಲ್ಮೀಕಿಗಳಿಂದ ರಚಿತವಾದ ರಾಮಾಯಣದಲ್ಲಿ ಸೀತೆಯು ರಾಮನೊಡನೆ ಹದಿನಾ ು ವರ್ಷಗಳ ವನವಾಸ ಮಾಡುವಳೆಂದು ಓದಿದಂತ ಜ್ಞಾಪಕವಿದ ಪ್ರಭೂ, ಖಂಡಿತ ನನ್ನನ್ನು ಬಿಟ್ಟು ಅರಣ್ಯಕ್ಕೆ ತಾವು ಪ್ರಯಾಣಮಾಡಲಾಗದು, ನಿಶ್ಚಯ ನಾಗಿ ಕರೆದುಕೊಂಡು ಹೋಗುವೆನೆಂದು ವಾಗ್ದಾನ ಕೊಡಿರಿ, ಇಲ್ಲವಾದರೆ ನಾನು ಪ್ರಾಣಗಳನ್ನಿಟ್ಟುಕೊಂಡಿರುವದಿಲ್ಲ” ಎಂದಳು. ಜಾನಕಿಯ ಈ ಮಾತುಗ ಳನ್ನು ಕೇಳಿ ಶ್ರೀರಾಮನು ಪರಮಹರ್ಷದಿಂದ ಸೀತಾದೇವಿಗೆ ನಿನ್ನನ್ನು ಅರಣ್ಯ ಕರೆದುಕೊಂಡು ಹೋಗುವೆನು' ಎಂದು ಅಭಯವನ್ನಿತ್ತನು, ಬೆಳಗಾಗಲು, ಶ್ರೀರಾಮನ ಪಟ್ಟಾಭಿಷೇಕವು ಮುಹೂರ್ತಕ್ಕೆ ಸರಿಯಾಗಿ ಆಗಬೇಕೆಂದು ಎಲ್ಲರೂ ತಮ್ಮ ತಮ್ಮ ಕೆಲಸಗಳನ್ನೇ ಮಾಡುವದರಲ್ಲಿ ತೊಡಗಿ
ಪುಟ:ಶ್ರೀ ಮದಾನಂದ ರಾಮಾಯಣ.djvu/೫೫
ಈ ಪುಟವನ್ನು ಪರಿಶೀಲಿಸಲಾಗಿಲ್ಲ.