ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೨೦ ಶ್ರೀಮದ್ಭಾಗವತವು [ಅಧ್ಯಾ. ೧ ಧ್ವವಾದ ಹಸಿವುಬಾಯಾರಿಕೆಗಳಿಂದ ದಹಿಸಲ್ಪಡುತ್ತಿದ್ದರೂ, ನಿನ್ನ ಮು ಖಾರವಿಂದದಿಂದ ಹೊರಡುವ' ಹರಿಕಥಾಮೃತವನ್ನು ಪಾನಮಾಡುತ್ತಿರುವ ವರೆಗೆ, ನನಗೆ ಆ ಬಾಧೆಯೊಂದೂ ತೋರುವಹಾಗಿಲ್ಲ.” ಎಂದನು. ಇದನ್ನು ಕೇಳಿ ಶುಕಮಹರ್ಷಿಯು, ಆ ಪರೀಕ್ಷಿದ್ರಾಜನ ಶ್ರದ್ಧಾಭಕ್ತಿಗಳನ್ನು ಮನಸ್ಸಿ ನಲ್ಲಿ ಕೊಂಡಾಡುತ್ತ, ಆತನನ್ನು ಮನ್ನಿಸಿ, ಸಮಸ್ತ ಪಾಪನಿವಾರಕವಾದ ಶ್ರೀಕೃಷ್ಣಚರಿತ್ರವನ್ನು ಆತನಿಗೆ ಸವಿಸ್ತರವಾಗಿ ಹೇಳತೊಡಗಿದನು. ಓ ಪರೀಕ್ಷಿದ್ರಾಜಾ ಕೇಳು? ಭಗವಚ್ಚರಿತ್ರವನ್ನು ಕೇಳಬೇಕೆಂಬ ಶ್ರದ್ಧೆಯು ನಿನಗೆ ಸಂಪೂರ್ಣವಾಗಿರುವುದರಿಂದ, ನಿನ್ನ ಬುದ್ಧಿಯು ಚೆ ನ್ನಾಗಿ ಪರಿಪಕ್ವವಾಗಿರುವುದು. ಆ ಭಗವಂತನ ಚರಿತ್ರವಿಷಯವಾಗಿ ಕೇ ವಲಪ್ರಶ್ನೆ ಮಾತ್ರವೇ, ಲೋಕದಲ್ಲಿ ಆ ಶ್ರೀಹರಿಯ ಪಾದತೀರವಾದ ಗಂ ಗಾನದಿಯಂತೆ, ಸಮಸ್ತ ಸ್ತ್ರೀಪುರುಷರನ್ನೂ ಪಾವನಮಾಡುವುದು, ಆ ವಿಷಯವಾಗಿ ಪ್ರಶ್ನೆ ಮಾಡಿದವನೂ, ಅದಕ್ಕೆ ಪ್ರತ್ಯುತ್ತರವನ್ನು ಹೇಳತಕ್ಕ ನನೂ, ಅವರಿಬ್ಬರ ಸಲ್ಲಾಪವನ್ನು ಕಿವಿಯಿಂದ ಕೇಳಿದವನೂ, ಈ ಮ ವರೂ ಅದರಿಂದ ಪಾವನರಾಗುವರು. ಇನ್ನು ಆತನ ಚರಿತ್ರಗಳನ್ನೇ ಕೊಂ ಡಾಡತಕ್ಕವರ ಪುಣ್ಯವಿಶೇಷವನ್ನು ಕೇಳಬೇಕಾದುದೇನು ? ರಾಜಾ! ಇ ನ್ನು ಕೃಷ್ಣಾವತಾರಕಾರಣವನ್ನು ತಿಳಿಸುವೆನು ಕೇಳು. ಹಿಂದೆ ಅನೇಕ ಕೋಟಿವಾನವರು ಭೂಮಿಯಲ್ಲಿ ಕ್ಷತ್ರಿಯರಾಗಿ ಹುಟ್ಟಿ, ರಾಜರಪದಿಂದ ಲೋಕಕಂಟಕರಾಗಿ ವರ್ತಿಸುತಿದ್ದರು. ಮದಾಂಧರಾದ ಆ ದುಷ್ಕೃತ್ರಿ ಯರಿಂದ ತನಗುಂಟಾದ ಭಾರವನ್ನು ತಡೆಯಲಾರದೆ, ಭೂದೇವಿಯು ಗೋ ರೂಪದಿಂದ, ಚತುರಖಬ್ರಹ್ಮನ ಬಳಿಗೆ ಬಂದು, ಕೈಮುಗಿದು ನಿಂತು, ದುಃಖದಿಂದ ಕಣ್ಣೀರನ್ನು ಸುರಿಸುತ್ತ, ತನ್ನ ಕಷ್ಟವನ್ನು ಹೇಳಿ ಕೊಂಡು ಮೊರೆಯಿಟ್ಟಳು, ಬ್ರಹ್ಮನು ಅವಳ ದುಃಖವನ್ನು ನೋಡಿ ಕನಿ ಕರಗೊಂಡು, ಅದಕ್ಕೆ ತಾನು ಯಾವ ಪ್ರತೀಕಾರವನ್ನೂ ಮಾಡಲಾರ ದೆ, ಆ ಭೂದೇವಿಯನ್ನೂ, ರುದ್ರನನ್ನೂ, ಇತರದೇವತೆಗಳನ್ನೂ ತನ್ನೊಡನೆ ಕರೆದುಕೊಂಡು, ಕ್ಷೀರಸಮುದ್ರಕ್ಕೆ ಬಂದನು. ಅಲ್ಲಿ ದೇವದೇವನಾಗಿಯೂ, ಲೋಕನಾಯಕನಾಗಿಯೂ ಇರುವ ಶ್ರೀಮನ್ನಾರಾಯಣನನ್ನು ಪುರುಷ