ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೭೨೧ ಅಧ್ಯಾ: ೧.] ದಶಮಸ್ಕಂಧವು. ಸೂಕ್ತ ಮಂತ್ರದಿಂದ ಸ್ತುತಿಸಿ, ಸ್ವಲ್ಪ ಹೊತ್ತಿನವರೆಗೆ ಬಾಂಬಲಿಯಾಗಿ ಧ್ಯಾನಿಸುತ್ತ ನಿಂತನು. ಹೀಗೆ ಬ್ರಹ್ಮನು ಸಮಾಧಿಯಲ್ಲಿರುವಾಗ, ಆತನ ಕಿವಿಗೆಮಾತ್ರ ಕೇಳಿಸುವಂತೆ ಒಂದಾನೊಂದು ಅಶರೀರವಾಣಿಯು ಹೊ ರಟಿತು. ಅದನ್ನು ಕೇಳಿದೊಡನೆ ಬ್ರಹ್ಮನು ಸಂತೋಷದಿಂದ ಸಮೀಪದ ಲ್ಲಿದ್ದ ದೇವತೆಗಳನ್ನು ಕುರಿತು ( ಎಲೈ ದೇವತೆಗಳಿರಾ ! ನಾವು ಬಂದ ಕಾರವು ಸಫಲವಾಯಿತು! ನಾನು ಈ ಸಮಾಧಿಯಲ್ಲಿರುವಾಗ, ಭಗವಂತನ ಮುಖಾರವಿಂದದಿಂದ ಹೊರಟ ಅಭಯವಾಕ್ಯಗಳನ್ನು ಕೇಳಿದನು. ಅದನ್ನು ನಿಮಗೆ ತಿಳಿಸುವೆನು ! ನೀವೆಲ್ಲರೂ ಅದರಂತೆಯೇ ನಡೆದುಕೊಳ್ಳಬೇಕು. ಈ ವಿಷಯದಲ್ಲಿ ವಿಳಂಬಮಾಡಬಾರದು. ಭಗವಂತನು ಭೂದೇವಿ ಗುಂಟಾಗಿರುವ ಈ ಕಷ್ಟವನ್ನು ಮೊದಲೇ ತಿಳಿದಿರುವನು. ಅದ ಕ್ಕೆ ಪರಿಹಾರೋಪಾಯವನ್ನೂ ಮೊದಲೇ ಸಂಕಲ್ಪಿಸಿರುವನು. ಈ ವಿಚಾ ರದಲ್ಲಿ ನೀವು ನಡೆಸಬೇಕಾದ ಕಾರವೇನೆಂದರೆ, ನೀವೆಲ್ಲರೂ ನಿಮ್ಮ ನಿಮ್ಮ ಅಂಶಗಳಿಂದ ಯದುವಂಶದಲ್ಲಿ ಹುಟ್ಟಬೇಕು. ಆ ಸತ್ಯೇಶ್ವರನೂ ತನ್ನ ಕಾಲಶಕ್ತಿಯಿಂದ ಭೂಭಾರವನ್ನು ಪರಿಹರಿಸುವುದಕ್ಕಾಗಿ ಅದೇ ಯಾದವ ಕುಲದಲ್ಲಿ ಮನುಷ್ಯರೂಪದಿಂದವತರಿಸುವನು. ಆ ಭಗವಂತನು ತನ್ನ ಪೂ ರ್ಣಾಂಶದಿಂದ ಇನ್ನು ಶೀಘ್ರಕಾಲದಲ್ಲಿಯೇ ವಸುದೇವನ ಮಗನಾಗಿ ಹುಟ್ಟುವುದರಿಂದ, ಅದಕ್ಕೆ ಮೊದಲೇ ನೀವು ಯಾದವರಾಗಿ ಜನಿಸಿರಬೇ ಕು ! ಅವನ ಸೇವಾರವಾಗಿ ಕೆಲವು ದೇವಸಿಯರೂ ಅಲ್ಲಿಯೇ ಸ್ತ್ರೀ ರೂಪದಿಂದ ಹುಟ್ಟಿ ! ಋಷಿಗಳು ಗೋರೂಪದಿಂದ ನಂದಗೋಕುಲದಲ್ಲಿ ಜನಿಸಿ, ತಪಸ್ಸಿನಿಂದ ಹೇಗೋ ಹಾಗೆ, ಹಾಲು, ಬೆಣ್ಣೆ, ತುಪ್ಪ ಮೊದಲಾದ ದ್ರವ್ಯಗಳಿಂದ ಅವನನ್ನು ಸಂತೋಷಪಡಿಸಬೇಕು. ಆ ಭಗವಂತನ ಕಳೆಯೆನಿಸಿಕೊಂಡವನಾಗಿಯೂ, ಸಹಸ್ರಫಣೆಗಳಿಂದ ಶೋಭಿತನಾಗಿ ಯೂ, ಸತ್ವಶಕ್ತನಾಗಿಯೂ ಇರುವ ಆದಿಶೇಷನೂ, ಆ ಭಗವಂತ ಸಹಾಯಾರವಾಗಿ ಅವನಿಗೆ ಅಣ್ಣನಾಗಿ ಜನಿಸುವನು. ಲೋ ಕವೆಲ್ಲವನ್ನೂ ಮೋಹಗೊಳಿಸತಕ್ಕ ವಿಷ್ಣುಮಾಯೆಯೂಕೂಡ, ಆತನ ಆ ಜ್ಞೆಯಿಂದ ಅಲ್ಲಿಯೇ ಸ್ತ್ರೀರೂಪದಿಂದವತರಿಸುವಳು. ಭಗವಂತನು ಈ