೧೭೨೨ ಶ್ರೀಮದ್ಭಾಗವತವು [ಅಧ್ಯಾ: ೧. ವಿಚಾರಗಳೆಲ್ಲವನ್ನೂ ತಾನಾಗಿಯೇ ಸೂಚಿಸಿರುವನು. ಆದುದರಿಂದ ನಾವು ಬೇಗನೆ ಮುಂದಿನ ಕಾರಕ್ಕೆ ಯತ್ನಿ ಸಬೇಕು” ಎಂದನು. ಪ್ರಜಾಧಿಪತಿಯಾ ದ ಬ್ರಹ್ಮನು ದೇವತೆಗಳಿಗೆ ಹೀಗೆಂದಾಜ್ಞಾಪಿಸಿ, ಅಭಯವಾಕ್ಯಗಳಿಂದ ಭೂದೇವಿಯನ್ನೂ ಸಮಾಧಾನಗೊಳಿಸಿ, ತನ್ನ ಲೋಕಕ್ಕೆ ಸೇರಿದನು. ಓ ಪರೀಕ್ಷಿದ್ರಾಜಾ ! ಅತ್ತಲಾಗಿ ಮಧುರಾಪುರಿಯಲ್ಲಿ ಮೊದಲು ಯದುವಂಶಜನಾದ ಶೂರಸೇನನೆಂಬವನು, ಯಾದವರೆಲ್ಲರಿಗೂ ಪ್ರಭುವಾಗಿ ಮಾಧುರ ಶೂರಸೇವಗಳೆಂಬ ದೇಶಗಳೆರಡನ್ನೂ ಪಾಲಿಸುತ್ತಿದ್ದನು. ಅದು ಮೊದಲು ಯಾದವರೆಲ್ಲರಿಗೂ ಮಧುರೆಯೇ ರಾಜಧಾನಿಯಾಯಿತು. ರಾ ಜೇಂದ್ರಾ! ಆ ಮಧುರೆಯೇ ಶ್ರೀಕೃಷ್ಣನ ಅವತಾರಸ್ಥಾನವಾದುದರಿಂದ, ಈಗಲೂ ಭಗವಂತನು ಅಲ್ಲಿ ನಿತ್ಯಸಾನ್ನಿಧ್ಯವನ್ನು ಮಾಡುತ್ತಿರುವನು. ಒಮ್ಮೆ ಆ ಪಟ್ಟಣದಲ್ಲಿ ಶೂರನ ಮಗನಾದ ವಸುದೇವನೆಂಬ ಯಾದವನಿಗೆ, ಉಗ್ರ ಸೇನನ ಮಗಳಾದ ದೇವಕಿಯನ್ನು ಕೊಟ್ಟು ವಿವಾಹವು ನಡೆಯಿತು. ಈ ವಿ ವಾಹವು ನಡೆದಮೇಲೆ, ವಸುದೇವನು, ನವೋಡೆಯಾದ ಆ ಪತ್ನಿ ಯನ್ನು ತನ್ನ ಮನೆಗೆ ಕರೆದುಕೊಂಡು ಹೋಗುವುದಕ್ಕಾಗಿ ರಥವನ್ನೇರಿ ದನು. ಆಗ ಉಗ್ರಸೇನನ ಮಗನಾದ ಕಂಸನು, ತನಗೆ ತಂಗಿಯಲ್ಲಿಯೂ, ಭಾವನಲ್ಲಿಯೂ ಇರುವ ಪ್ರೀತಿಗೌರವಗಳನ್ನು ತೋರಿಸುವುದಕ್ಕಾಗಿ, ತಾ ನೇ ಕುದುರೆಯ ಹಗ್ಗವನ್ನು ಹಿಡಿದು,ರಥವನ್ನೊಡಿಸುವುದಕ್ಕೆ ಸಿದ್ಧನಾದನು. ಸುವರ್ಣಮಯವಾದ ನೂರಾರುರಥಗಳು ಆ ವಸುದೇವದೇವಕಿಯರ ರಥದ ಸುತ್ತಲೂ ನೆರೆದು ಬರುತ್ತಿದ್ದುವು. ಯಾದವರಾಜನಾದ ಉಗ್ರಸೇನ ನಿಗೆ ದೇವಕಿಯಲ್ಲಿ ಎಣೆಯಿಲ್ಲದ ಪ್ರೇಮವಿದ್ದುದರಿಂದ, ಅವನು ತನ್ನ ಮಗ ಇಲ್ಲಿ ತನಗಿದ್ದ ಪ್ರೀತಿವಿಶೇಷಕ್ಕೆ ತಕ್ಕಂತೆ, ಸುವರ್ಣಾಲಂಕೃತಗಳಾದ ನಾ ನೂರು ಆನೆಗಳನ್ನೂ, ಹತ್ತು ಸಾವಿರಕುದುರೆಗಳನ್ನೂ, ಸಾವಿರದೆಂಟು ನೂರು ರಥಗಳನ್ನೂ , ಸರಾಭರಣಭೂಷಿತರಾದ ಇನ್ನೂ ರುಮಂದಿ ಗೌಡಿ ಯರನ್ನೂ, ಆ ದೇವಕಿಗೆ ಬಳುವಳಿಯಾಗಿ ಕಳುಹಿಸಿಕೊಟ್ಟನು. ಆ ದೇವಕಿ ವಸುದೇವರು ಪ್ರಯಾಣಮಾಡಿಬರುವ ಕಾಲದಲ್ಲಿ, ಶಂಖ, ದುಂದುಭಿ, ತೂರ್, ಮೃದಂಗ, ಮೊದಲಾದ ಮಂಗಳವಾದ್ಯಗಳೆಲ್ಲವೂ ನುಡಿಸಲ್ಪಡು
ಪುಟ:ಶ್ರೀ ಮದ್ಬಾಗವತ ದಶಮ ಸ್ಕಂದವು ಭಾಗ ೬.djvu/೨೨
ಈ ಪುಟವನ್ನು ಪರಿಶೀಲಿಸಲಾಗಿಲ್ಲ.