ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೭೩೦ ಶ್ರೀಮದ್ಭಾಗವತವು [ಅಧ್ಯಾ, ೧, ಸ್ವಲ್ಪಮಟ್ಟಿಗೆ ಯುಕ್ತಾಯುಕ್ತತಾರತಮ್ಯವನ್ನು ಯೋಚಿಸಬೇಕು ಹೇಗೆಂ ದರೆ; ಅಶರೀರವಾಣಿಯ ಅರ್ಧವನ್ನು ವಿಮರ್ಶಿಸುವಪಕ್ಷದಲ್ಲಿ, ಇವಳಲ್ಲಿ ಹು ಟ್ಟುವ ಮಕ್ಕಳಿಗಾಗಿ ನೀನು ಭಯಪಡಬೇಕೇ ಹೊರತು, ಇವಳಿಂದ ನಿನಗೇನೂ ಭಯವಿಲ್ಲವಷ್ಟೆ? ಆದುದರಿಂದ ಮುಂದೆ ವಳಲ್ಲಿ ಹುಟ್ಟುವ ಮಕ್ಕಳನ್ನೆಲ್ಲಾ ನಿನ್ನ ವಶಕ್ಕೆ ಕೊಟ್ಟುಬಿಡುವೆನು ಅಷ್ಟಾದರೆ ಸಾಕಲ್ಲವೆ”ಎಂದನು. ಆಮಾತ ನ್ನು ಕೇಳಿದಮೇಲೆ ಕಂಸನ ಕೋಪವು ಸ್ವಲ್ಪವಾಗಿ ತಗ್ಗಿತು. ವಸುದೇವನ ಮಾತು ಯುಕ್ತವೆಂದೂ ತೋರಿತು ತನ್ನ ಪ್ರಯತ್ನವನ್ನು ಬಿಟ್ಟು ಸು ಮ್ಮನಾದನು. ಆಗ ವಸುದೇವನ ಬಹಳ ಸಂತೋಷ ಭರಿತನಾಗಿ, ಆ ಕಂಸನ ನ್ನು ಬಹಳವಾಗಿ ಸ್ತೋತ್ರ ಮಾಡುತ್ತ, ತನ್ನ ನಿವಾಸಕ್ಕೆ ಹೊರಟುಬಂದನು. ಹಾಗೆಯೇ ಕೆಲವು ಕಾಲವು ಕಳೆಯಿತು ದೇವಕಿಗೆ ಗರ್ಭಧಾರಣಕಾಲವೂ ಬಂ ದೊದಗಿತು. ಸಕಲದೇವತಾಂಶಭೂತೆಯಾದ ಆ ನಾರೀಮಣಿಯು, ವರ್ಷಕ್ಕೆ ಒಂದು ಮಗುವಿನಂತೆ, ಎಂಟು ಗಂಡುಮಕ್ಕಳನ್ನೂ, ಒಂದು ಹೆಣ್ಣು ಮ ಗುವನ್ನೂ ಪಡೆಯುತ್ತಬಂದಳು ಪಕ್ಷಿ ದಾಜಾ! ಅವಳಲ್ಲಿ ಹುಟ್ಟುವ ಶಿಶು ಗಳೆಲ್ಲವನ್ನೂ ಕಂಸಸಿಗೆ ಒಪ್ಪಿಸಿಬಿಡುವುದಾಗಿ ವಸುದೇವನು ಪ್ರತಿಜ್ಞೆ ಮಾಡಿ ಕೊಟ್ಟಿದ್ಯನಲ್ಲವೆ” ಆತನು ಬಹಳ ಸತ್ಯಸಂಧನಾದುದರಿಂದ, ತಾನು ಕೊಟ್ಟ ಮಾತಿನಂತೆ, ಮೊದಲು ತನಗೆ ಹುಟ್ಟಿದ ಕೀರ್ತಿವಂತನೆಂಬ ಮಗನನ್ನು ಬಹಳವ್ಯಸನದೊಡನೆ ಕಂಸನ ಕೈಗೆ ತಂದೊಪ್ಪಿಸಿದನು. ( ಹೊಟ್ಟೆಯಲ್ಲಿ ಹುಟ್ಟಿದ ಮಗುವನ್ನು ತಾನಾಗಿ ತಂದು ಮೃತ್ಯುವಿನ ಕೈಗೆ ಕೊಡಲು,ವಸು ದೇವನಿಗೆ ಹೇಗೆತಾನೇ ಮನಸ್ಸು ಬಂದಿತು?”ಎಂದು ಸೀನು ಆಶ್ರಪಡಬಹು ದು, ಲೋಕದಲ್ಲಿ ಸತ್ಯಸಂಧರಾದ ಸಾಧುಗಳಿಗೆ ಸಹಿಸಲಾರದ ದುಃಖವಿಲ್ಲ! ಸತ್ಯಕ್ಕಾಗಿ ಎಲ್ಲವನ್ನೂ ಸಹಿಸಿಕೊಳ್ಳುವರು!ಹಾಗೆಯೇ ಜ್ಞಾನಿಗಳಿಗೆ ಆಸೆಹುಟ್ಟಿಸತಕ್ಕ ವಸ್ತುವಿಲ್ಲ ! ದುರಾತ್ಮರಿಗೆ ಮಾಡಬಾರದ ಕೆಲಸ ವಿಲ್ಲ! ಧೀರರಿಗೆ ಬಿಡಬಾರದ ವಸ್ತುವಿಲ್ಲ! ಆದುದರಿಂದ ವಸುದೇವನು ಸುಖದುಃಖಗಳೆರಡನ್ನೂ ಸಮವಾಗಿ ಭಾವಿಸುತ್ತ, ಆಡಿದ ಮಾತಿಗೆ ತಪ್ಪ ಲಾರದ, ಹೆತ್ತ ಮಗುವನ್ನು ತಾನೇ ತಂದು ಕಂಸನ ಕೈಗೆ ಕೊಟ್ಟು, ಅವನ ಮುಂದೆ ವಿನೀತನಾಗಿ ನಿಂತಿದ್ಯಮ ಅದನ್ನು ನೋಡಿ ಕಂಸನು, ವಸು