೧೩೧ ಅಧ್ಯಾ. ೧.] ದಶಮಸ್ಕಂಧವು. ದೇವನ ಸತ್ಯಕ್ಕೆ ಮೆಚ್ಚಿ , ಸಂತೋಷಪೂರ್ವಕವಾದ ಮಂದಹಾಸ ದೊಡನೆ ಆತನನ್ನು ಕುರಿತು (1 ವಸುದೇವಾ ! ಇವನಿಂದ ನನಗೇನೂ ಭಯ ವಿಲ್ಲ ! ನಿಷ್ಕಾರಣವಾಗಿ ಈ ಮಗುವನ್ನು ನಾನೇಕೆ ಕೊಲ್ಲಲಿ ! ಇವನನ್ನು ಹಿಂತಿರುಗಿ ನಿನ್ನ ಮನೆಗೆ ಕರೆದುಕೊಂಡು ಹೋಗಿ ಪೋಷಿಸು! ಆದರೆ ಒಂದು ಮಾತ್ರ ಚೆನ್ನಾಗಿ ನೆನಪಿರಲಿ : ನಿನ್ನ ಎಂಟನೆಯ ಮಗನನ್ನಲ್ಲವೇ ದೈವವು ನನಗೆ ಮೃತ್ಯುವನ್ನಾಗಿ ವಿಧಿಸಿರುವುದು ! ಆ ಶಿಶುವನ್ನು ಮಾತ್ರ ಹುಟ್ಟಿದ ಕೂಡಲೇ ನನಗೆ ತಂದೊಪ್ಪಿಸಬೇಕು. ಇನ್ನು ನೀನು ಹೊರಡು” ಎಂದನು. ಆಗ ವಸುದೇವನು ಹಾಗೆಯೇ ಆಗಲೆಂದು ಹೇಳಿ ; ಆ ಮಗುವನ್ನೆತ್ತಿಕೊಂ ಡು, ತನ್ನ ಮನೆಗೆ ಹಿಂತಿರುಗಿದನು. ಆದರೇನು ? ದುರಾತ್ಮ ನಾದ ಆ ಕಂಸ ನು ಕೇವಲಚಪಲಬಡ್ಡಿಯುಳ್ಳವನಾದುದರಿಂದ, ಯಾವಾಗ, ಏನನರ್ಥ ವನ್ನು ತಂದಿಡುವನೋ ಎಂಬ ಭಯದಿಂದ ವಸುದೇವನು, ಆ ಕಂಸನ ಪ್ರಿಯ ವಾಕ್ಯಗಳನ್ನು ನಂಬದೆ, ಒಳಗೊಳಗೆ ಭಯದಿಂದ ಕಳವಳಿಸುತ್ತಲೇ ಇದ್ದನು. ಓ ಪರೀಕ್ಷಿದಾಜಾ ! ಈ ಸಂಗತಿಯು ಹೀಗಿರುವಾಗ, ಒಮ್ಮೆ ಪೂಜ್ಯ ನಾದ ನಾರದಮುನಿಯು 'ಕಂಸನ ಅರಮನೆಗೆ ಬಂದು, ಅವನನ್ನು ಕುರಿತು . ಓ ರಾಜಕಮಾರಾ ! ನಿನ್ನ ಹಿತಕ್ಕಾಗಿ ನಾನು ಒಂದು ರಹಸ್ಯವನ್ನು ತಿಳಿಸ ಬೇಕೆಂದು ಬಂದೆನು. ಏನೆಂದು ಕೇಳುವೆಯಾ ? ಗೋಕುಲದಲ್ಲಿರತಕ್ಕ ನಂ ದನೇ ಮೊದಲಾದ ಯಾದವರೂ, ಗೋಪಸಿಯರೂ, ಯಾದವಾಂಗನೆ ಯರೂ ಅವರೊಡನೆ ಸೇರಿರುವ ಬಂಧುಮಿತ್ರರೂ, ಇವರೆಲ್ಲರೂ ದೇವಾಂಶ ದಿಂದ ಹುಟ್ಟಿದವರು. ನೀನೂ, ನಿನ್ನ ಅನುವರ್ತಿಗಳೂ ದೈತ್ಯಾಂಶದಿಂದ ಹುಟ್ಟಿದವರು. ಓ ಕಂಸಾ! ಪೂರೈಜನ್ಮದಲ್ಲಿ ನೀನು ಕಾಲನೇಮಿಯೆಂಬ ರಾಕ್ಷಸನಾಗಿದ್ದು ವಿಷ್ಣುವಿಂದ ಸಂಕೃತನಾದೆ ! ಈಗಲೂ ಆ ವಿ ಷ್ಟು ವೇ ನಿನ್ನ ನ್ಯೂ, ಲೋಕಕಂಟಕರಾದ ನಿನ್ನ ಕರೆಯವರನ್ನೂ ಕೊಲ್ಲು ವುದಕ್ಕಾಗಿ ಯತ್ನಿಸಿರುವನು. ಈ ಉದ್ದೇಶದಿಂದಲೇ ಅವನು ಯಾದ ವಕುಲದಲ್ಲಿ ದೇವಕೀಪುತ್ರನಾಗಿ ಜನಿಸುವನು. ಇತರಯಾದವರೆಲ್ಲರೂ ಅವನಿಗೆ ಸಹಾಯಕರು! ನಿನಗೆ ಜನ್ಮಾಂತರದ್ವೇಷಿಗಳಾಗಿ ಹುಟ್ಟಿ ರುವ ಆ ಯಾದವರವಿಷಯದಲ್ಲಿ ನೀನು ಬಹಳ ಎಚ್ಚರಿಕೆಯಿಂದಿರಬೇಕು.
ಪುಟ:ಶ್ರೀ ಮದ್ಬಾಗವತ ದಶಮ ಸ್ಕಂದವು ಭಾಗ ೬.djvu/೩೧
ಈ ಪುಟವನ್ನು ಪರಿಶೀಲಿಸಲಾಗಿಲ್ಲ.