ಪುಟ:ಶ್ರೀ ಸಮರ್ಥ ರಾಮದಾಸ ಸ್ವಾಮಿಗಳ ಚರಿತ್ರಪು.djvu/೨೦

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧0. ವಾಗ್ಬೂಷಣ ಶ ಮುಂತಾದ ೭೨ ಜನರು ಮುಖ್ಯ ಶಿಷ್ಯರಿದ್ದರು. ಸಮರ್ಥರು ತಾವು ಹೋದಲ್ಲೆಲ್ಲಾ ಮಠಗಳನ್ನು ಸ್ಥಾಪನೆ ಮಾಡಿ ತಮ್ಮ ತಮ್ಮ ಶಿಷ್ಯರನ್ನು ಆಯಾಯ ಮಠಗಳಲ್ಲಿಟ್ಟು ಅವರ ಕೈಯಿಂದ ಜನರಿಗೆ ಧರ್ಮೋಪದೇಶ ಮಾಡಿಸುತ್ತಿದ್ದರು.ಸಮರ್ಥರು ಹನ್ನೊಂದು ಕಡೆಗೆ ಪ್ರಾಣ ದೇವರ ಪ್ರತಿಷ್ಠಾಪನೆಯನ್ನು ಮಾಡಿದ್ದಾರೆ. ಶಿವಾಜಿಮಹಾರಾಜರು ರಾಮದಾಸ ಸ್ವಾಮಿಗಳ ದರ್ಶನ ತೆಗೆದುಕೊಂ ಡಿದ್ದು-ಒಂದು ಸಾರೆ ಶ್ರೀ ಛತ್ರಪತಿ ಶಿವಾಜಿ ಮಹಾರಾಜರು ರಾಯಗಡದಿಂದ ವರ್ಹಾಡಕ್ಕೆ ಬಂದಾಗ ಒಬ್ಬ ಹರಿದಾಸನ ಕಡೆಯಿಂದ ಹರಿಕೀರ್ತನವನ್ನು ಮಾಡಿಸಿ ದರು, ಅ ಕೀರ್ತನದಲ್ಲಿ ಹರಿದಾಸನು ಧ್ರುವ ಚರಿತ್ರವನ್ನು ಹೇಳಿ “ಸದ್ಗು ರುವಿಲ್ಲದೆ ಮೋಕ್ಷವಿಲ್ಲ”ವೆಂಬ ವಿಷಯವನ್ನು ಪ್ರತಿಪಾದನೆ ಮಾಡಿದನು. ಇದು ಶ್ರೀ ಶಿವಾ ಜಿ ಮಹಾರಾಜರ ಮನಸ್ಸಿನ ಮೇಲೆ ಚನ್ನಾಗಿ ಬಿಂಬಿಸಿತು, ಆಗ ಮಹಾರಾಜರು ತಾವು ಯಾವ ಸತ್ಪುರುಷರಿಗೆ ಶರಣು ಹೋದರೆ ತಮಗೆ ಉಪದೇಶವು ದೊರಕೀತೆಂ ದು ಬಹಳ ಚಿಂತೆಯನ್ನು ಮಾಡತೊಡಗಿದರು, ಅವರ ಮನಸ್ಸಿನಲ್ಲಿ ಶ್ರೀ ಸಮರ್ಥ ದ ದರ್ಶನ ತಗೆದುಕೊಳ್ಳಬೇಕೆಂಬ ಹಂಬಲವು ವಿಶೇಷವಿತ್ತು, ಆದರೆ ಮಹಾರಾ ಜರು ಹಿಂದೆ ಕೆಲವು ಸಾರೆ ಸಮರ್ಥರ ದರ್ಶನಕ್ಕಾಗಿ ಹೋದಾಗ್ಗೆ ಅವರಿಗೆ ದರ್ಶ ನವಾಗಿದ್ದಿಲ್ಲ, ಆದ್ದರಿಂದ ಸಮರ್ಥರ ದರ್ಶನವು ತಮಗೆ ಲಭ್ಯವಾಗುವದಿಲ್ಲ ದು ಬಹಳ ಉದಾಸೀನರಾಗಿದ್ದರು, ಆಕಾರಣ ತಾವು ಯಾರಿಗೆ ಶರಣು ಹೋ ಗಬೇಕೆಂದು ಕೇಳಿಕೊಳ್ಳುವದಕ್ಕಾಗಿ ಕಾಲಿಕಾ ದೇವಿಗೆ ಪ್ರಾರ್ಥನೆಯನ್ನು ಮಾಡಿ ದರು, ಆಗ ಅವರಿಗೆ ಒಂದು ಸ್ವಪ್ನ ಬಿತ್ತು, ಆ ಸ್ವಪ್ನದೊಳಗೆ ಒಬ್ಬ ಮುತ್ತೈದಿಯು ಬಂದು ಮಹಾರಾಜರಿಗೆ “ರಾಮದಾಸ ಸ್ವಾಮಿಗಳಿಗೆ ಶರಣು ಹೋಗಿ ಗುರುಪದೇಶ ವನ್ನು ತೆಗೆದುಕೊಳ್ಳಿರಿ” ಎಂದು ಹೇಳಿದಳು. ಆಗಂತೂ ಮಹಾರಾಜರು ಸಮರ್ಥರ ದರ್ಶನವನ್ನು ತೆಗೆದುಕೊಳ್ಳಬೇಕೆಂದು ಪುನಃ ನಿಶ್ಚಯಮಾಡಿ ತಮ್ಮ ಪರಿವಾರದೊಂ ದಿಗೆ ಚಾಫಳಕ್ಕೆ ಬಂದರು‌,ಆಗ ಸಮರ್ಥರು ಅಲ್ಲಿ ಇದ್ದೇ ಇಲ್ಲ.ಶ್ರೀ ಶಿವಾಜಿಮಹಾ ರಾಜರು ಶ್ರೀ ರಘುಪತಿಯ ದರ್ಶನ ತೆಗೆದುಕೊಂಡು ಶಿಷ್ಯರು ತಂದು ಕೊಟ್ಟ ಪ್ರಸಾದವನ್ನು ಸ್ವೀಕರಿಸಿ ಪುನಃ ನಿರಾಶೆಯಿಂದ ಹೊರಟು ಬಂದರು ಮಹಾರಾಜ ರಿಗೆ ಸಮರ್ಥರ ದರ್ಶನ ತಗೆದುಕೊಳ್ಳ ಬೇಕೆಂಬ ಲವಲವಿಕೆಯು ದಿನೇ ದಿನೇ ಹೆಚ್ಚಾಯಿತು. ಕಾರಕೂನ ಮುಂತಾದವರನ್ನು ಅನೇಕ ಕಡೆಗೆ ಸಮರ್ಥಕ ಶೋಧಕ್ಕಾಗಿ ಕಳಿಸಿದರು, ಆದರೂ ಅವರು ಇಂಥಲ್ಲಿ ಇದ್ದಾರೆಂಬ ಶೋಧ ವಾಗಲಿಲ್ಲ. ತರುವಾಯ ಮಹಾರಾಜರು ಒಂದು ಸಾರಿ, ಸಮರ್ಥರ ದರ್ಶನ ತೆಗೆದುಕೊಳ್ಳದೆ ತಾವು ಅನಗ್ರಹಣ ಮಾಡುವದಿಲ್ಲೆಂದು ದೃಢ ನಿಶ್ಚಯದಿಂದ ಉಪೋಷಣ ಮಾಡಿ ಮಲಗಿಕೊಂಡು ಬಿಟ್ಟರು ಈ ರೀತಿಯಿಂದ ಮಹಾರಾಜರು