ರಾಮದಾಸಸ್ವಾಮಿಗಳ ಚರಿತ್ರ. ೧೫ ಕೂಡ್ರಿಸಿಕೊಂಡು ಅವರ ಕ್ಷೇಮಕುಶಲವೃತ್ತಾಂತವನ್ನು ವಿಚಾರಿಸಿ ಸಮರ್ಥ ರ ಸ ಮರ್ಥ್ಯವನ್ನು ಕುರಿತು ಬಹಳ ಸ್ತುತಿಮಾಡಿ ಅವರ ಬಗ್ಗೆ ತನ್ನ ಪೂಜ್ಯ ಬುದ್ಧಿ ಯನ್ನು ವ್ಯಕ್ತಪಡಿಸಿದನು. ಬಹಳೊತ್ತಿನ ತನಕ ಇಬ್ಬರೊಳಗೂ ಸಂಭಾಷಣವ ಯಿತು. ತರುವಾಯ ಶಿವಾಜಿಮಹಾರಾಜರು ತಾವು ಹೋಗಿ ಬರುತ್ತೇವೆಂದು ಅಪ್ಪ ಣತಿಯನ್ನು ಕೇಳಿಕೊಂಡರು, ಆಗ ತುಕಾರಾಮನು-ಕಗ ಮಧ್ಯಾಹ್ನವಾಯಿತು ಪಾಂಡುರಂಗನ ನೈವೇದ್ಯವು ಸಿದ್ಧವಾಗಿರುತ್ತದೆ, ಪ್ರಸಾದಗ್ರಹಣವಾಡಿ ಹೋಗ ಬೇಕು ?” ಎಂದು ಹೇಳಿದನು ಆಗ ಮಹಾರಾಜರು- ನನ್ನ ಸಂಗಡ ಬಹಳ ಜನರು ಇದ್ದಾರೆ, ಆದ್ದರಿಂದ ದಯಮಾಡಿ ಆಗ್ರಹಮಾಡಬಾರದು~ ಎಂದು ವಿನಂ ತಿ ಮಾಡಿದರು, ಅದನ್ನು ಕೇಳಿ ತುಕಾರಾಮನು-“ ವಿಶ್ವಂಭರನು ಸರ್ವರ ಪೋಷ ಮಾಡುತ್ತಾನೆ, ಅವನ ಮನೆಯಲ್ಲಿ ಏನು ಕಡಿಮೆಯಾಗಿರುತ್ತದೆ! " ಎಂದು ಹೇಳಿ ದನ್ನು ಆಗ ಮಹಾರಾಜರು ಪುನಃ~ ಸ್ಕಾವಿ, ನನ್ನ ಸಂಗಡ ಅನೇಕ ಕುದುರೆ ಗಳು ಬಂದಿರುತ್ತವೆ, ಅವುಗಳ ಹೊಟ್ಟೆಗೆ ಮೇವು ಕಾಳುಗಳು ದೊರಕುವದು ಇಲ್ಲಿ ಕಠಿಣವಾದೀತು” ಎಂದು ಅಂಜ೦ಜುತ್ತ ನುಡಿದರು. ಅದಕ್ಕೆ ಆ ಮಹಾತ್ಮನುಆ ಎಲ್ಲ ವ್ಯವಸ್ಥೆಯನ್ನು ವಿಶ್ವಂಭರನು ಮಾಡುವನು. ನೀವು ಚಿಂತೆಮಾಡಬೇಡಿರಿ » ಎಂದು ಹೇಳಿ ಅವರನ್ನು ಇಟ್ಟು ಕೊಂದನು. ಮಹಾರಾಜರು ತಮ್ಮ ಎಲ್ಲ ಪರಿವಾ ರದವರಿಗೆ ಅಲ್ಲಿಯೇ ಮುಕ್ಯಮು ಮಾಡಲಿಕ್ಕೆ ಅಪ್ಪಣತೆಯನ್ನು ಮಾಡಿದರು. ಇತ್ಯ ಲಾ ತುಕಾರಾಮನು ತನ್ನ ಮಗನಾದ ನಾರಾಯಣನಿಗೆ ಕರೆದು ಮನೆಯೊಳಗಿನ ಮೇವು ಕಾಳುಗಳನ್ನು ಒಯ್ಯು ಸೈನ್ಯದೊಳಗಿನ ಎಲ್ಲ ಕುದುರೆಗಳಿಗೆ ಹಾಕಿ ಬಾ ಎಂ ದು ಅಪ್ಪಣಮಾಡಿದನು, ತುಕಾರಾಮನ ಮನೆಯು ತೀರಸಣ್ಣದಿತ್ತು. ಅದು ಒಂದು ಜಂತಿ ಮತ್ತು ಮರು ಗಳಗಳಿಂದ ಕೂಡಿ ಆದಂಥಾದ್ದಿತ್ತ೦ದು ಹೇಳಿದರೂ ಅಡಿ ಇಲ್ಲ, ಆ ಮನೆಯಲ್ಲಿ ಒಂದು ಸಿವಡು ಮೇವು ಮತ್ತು ಒಂದು ಹಿಡಿಶುಂಬ ಕಡ್ಡಿ ದ್ದವು! ಅದಕ್ಕೂ ಹೆಚ್ಚಿಗೆ ಏನೂ ಇದ್ದಿಲ್ಲ! ಅದನ್ನಷ್ಟೇ ನಾರಯಣನು ತೆಗೆ ದುಕೊಂಡು ಶಿವಾಜಿ ಮಹಾರಾಜರ ಲಷ್ಕರದ ಛಾವಣಿಯೊಳಗೆ ಹೋಗಿ ನಿಂ ತು ಎಲ್ಲ ರಾಹುತರನ್ನು ಕರೆದು-* ನಿಮ್ಮ ನಿಮ್ಮ ಕುದುರೆಗೆ ಬೇಕಾಗುವಷ್ಟು ಮೇವು ಆಳುಗಳನ್ನು ತೆಗೆದುಕೊಂಡು ಹೋಗ• ಎಂದು ಹೇಳಿದನು, ಎಲ್ಲರೂ ಆತ್ತು ಸ್ವಲ್ಪದರೊಳಗಿಂದ ಈ ಹುಡುಗನು ಹ್ಯಾಗೆ ಪೂರೈಸುವನೆಂದು ನಕ್ಕರು! ಆದ ಎಲ್ಲರೂ ಬಂದು ತಮಗೆ ಸಂಕಸುಕಾಗುವಷ್ಟು ವೈದರು. ಅಂದರೂ ಅದು ಇನ್ನೂ ತೀರಲಿಲ್ಲ!l ಆಗ ಎಲ್ಲರೂ ತುಕಾರಾಮನಿಗೆ - ಧನ್ಯಧನ್ಯ' ಎಂದು ನುಡಿದರು. ಆ ಮೇಲೆ ಇಂದಾಯಣ ತೀರದಲ್ಲಿ ಒಂದು ಭವ್ಯವಾದ ಮಂಟಪವನ್ನು ನಿರ್ಮಿಸಿ ಈ ತಮವಾದ ಸನ್ಯವನ್ನು ಸಿದ್ಧ ಮಾಡಿ ಎಲ್ಲರನ್ನು ಕರೆದುಕೊಂಡು ಹೋಗಿ ಎಥಾಸ್ಥಿತವಾಗಿ ಭೋಜನವಾಡಿಸಿದನು, ತಿಲಮಾತ್ರವಾದರೂ ವ್ಯವಸ್ಥೆಯಲ್ಲಿ
ಪುಟ:ಶ್ರೀ ಸಮರ್ಥ ರಾಮದಾಸ ಸ್ವಾಮಿಗಳ ಚರಿತ್ರಪು.djvu/೨೫
ಈ ಪುಟವನ್ನು ಪರಿಶೀಲಿಸಲಾಗಿಲ್ಲ.