ಈ ಪುಟವನ್ನು ಪ್ರಕಟಿಸಲಾಗಿದೆ
ಸ೦ತಾಪಕ.

ಮೂರನೆಯ ಪರಿಚ್ಛೇದ.

ಮಲಾಕರದತ್ತನು ಬಹುಧನಿಕ. ಪ್ರಸನ್ನನಗರದಲ್ಲಿ ಇವನಂತೆ
ಧರ್ಮಪರಾಯಣನೂ ಉದಾರಿಯೂ ಆದವನು ಮತ್ತೊಬ್ಬನಿಲ್ಲ. ಇವನು
ಗಾರುತ್ಮತಪುರವೆಂಬ ಭಾಗದಲ್ಲಿ ವಾಸವಾಗಿದ್ದನು. ಈತನ ಮನೆಯ
ಸುತ್ತಲೂ ದೊಡ್ಡದಾದ ಉಪವನ. ಈ ಉಪವನದಲ್ಲಿ ರಂಭಾದಿಫಲ
ಭರಿತಗಳಾದ ವೃಕ್ಷಪಙ್ತಿಗಳು ಕಣ್ಗೊಳಿಸುತ್ತಿದ್ದುವು. ವನದ ಬಲಗಡೆ
ಮನೋಹರವಾದ ಪುಷ್ಕರಿಣಿ. ಪುಷ್ಕರಿಣಿಯ ಮೇಲ್ಬಾಗದಲ್ಲಿ ಚ೦ದ್ರ
ಕಾಂತ ಶಿಲೆಯಿಂದ ನಿರ್ಮಿತವಾದ ಒಂದು ಮಂಟಪ. ಇದರಸುತ್ತಲೂ
ಇರುವಂತಿಗೆ ಸೇವಂತಿಗೆ ಮಲ್ಲಿಗೆ ಮೊದಲಾದ ಪುಷ್ಪಲತೆಗಳನ್ನು ನೆಟ್ಟು
ಬೆಳೆಯಿಸಿ ಮಂಟಪದ ಮೇಲೆಲ್ಲ ಹಬ್ಬಿಸಿದ್ದುದರಿಂದ ನೋಟಕರಿಗೆ ಇದು
ಲತಾಗೃಹವೆಂಬ ಭ್ರಾಂತಿಯನ್ನುಂಟುಮಾಡುತಲಿದ್ದಿತು. ಬೇಸಗೆಯ ಕಾಲ
ದಲ್ಲಿ ಕಮಲಾಕರದತ್ತನು ಈ ಪ್ರದೇಶದಲ್ಲಿ ವಾಯುಸೇವನೆಯನ್ನು ಮಾಡುವ
ಪದ್ದತಿಯಿದ್ದಿತು. ಈದಿನ ಅವನು ಕಾರ್ಯಾ೦ತರದಲ್ಲಿ ಆಸಕ್ತನಾಗಿದ್ದುದ
ರಿಂದ ಕಿರುಮನೆಯನ್ನು ಬಿಟ್ಟು ಹೊರಕ್ಕೆ ಹೊರಡಲೇ ಇಲ್ಲ. ಆದರೆ ಈ
ಕೃತ್ರಿಮಲತಾಗೃಹದಲ್ಲಿ ಕಮಲಾಕರನಿಗೆ ಪ್ರತಿಯಾಗಿ ಒಬ್ಬ ಸುಂದ
ರಿಯು ಕುಳಿತಿದ್ದಳು. ಸುಂದರಿಗೆ ಸುಮಾರು ಹದಿನೆಂಟುವರ್ಷ ವಯಸ್ಸಾ
ಗಿರಬಹುದು. ಭ್ರಮರಶೋಭಾಹಾರಿಯಾದ ಮುಂಗುರುಳು ಅವಳ ಪದ್ಮ
ಸಮವಾದ ಮುಖದಮೇಲೆ ಹರಿದಾಡುತ್ತೆ ಸದ್ಯೋವಿಕಸಿತವಾದ ಕಮಲ
ವೆಂಬ ಭ್ರಮೆಯುಂಟುಮಾಡುತಲಿದ್ದಿತು. ಕೊರಲಲ್ಲಿ ರತ್ನಖಚಿತವಾದ
ಕಂಠಾಭರಣವೊಂದು ಕಣ್ಗೊಳಿಸುತಿದ್ದಿತು. ಕೈಯಲ್ಲಿ ಮಣಿ ಖಚಿತವಾದ
ಬಳೆ. ಕಿವಿಯಲ್ಲಿ ಹರಳೋಲೆ. ತಳತಳಿಸುವ ನಕ್ಷತ್ರದಂತಹ ಒಂದು
ನಾಸಾಭರಣ. ಇವುಗಳಲ್ಲದೆ ಮತ್ತಾವ ಒಡವೆಯೂ ಇರಲಿಲ್ಲ.
ಯುವತಿಯು ಬಿಳಿಯಬಣ್ಣದ ತೆಳುವಾದ ಒಂದು ರೇಷ್ಮೆಯ ಸೀರೆಯ
ನ್ನುಟ್ಟು ಮೇಘವರ್ಣದ ಕುಪ್ಪಸವನ್ನು ತೊಟ್ಟಿದ‍್ದಳು. ಇವಳ ಸೌಂದ
ರ್ಯಾತಿಶಯವನ್ನು ಸ್ಥಳ ಸಂಕೋಚದಿಂದ ಇಲ್ಲಿ ಹೆಚ್ಚಾಗಿ ವರ್ಣಿಸ
ಲಾರೆವು. ಮನ್ಮಥನ ಮಡದಿಯಾದ ರತಿಯು ನಿಶ್ಚಯವಾಗಿಯೂ