ಈ ಪುಟವನ್ನು ಪ್ರಕಟಿಸಲಾಗಿದೆ
ಕರ್ಣಾಟಕ ಚ೦ದ್ರಿಕೆ.

ಮಾರ್ಗದಲ್ಲಿ ಅನರ್ಘನಗರವು ಕಾಣಿಸುವುದು. ಗುಡ್ಡವನ್ನು ಹತ್ತಿ
ಇನ್ನೂ ದಕ್ಷಿಣಕ್ಕೆ ಹೋದರೆ ಕಿಂಶುಕಾಟವಿಯೆಂಬ ಅರಣ್ಯವು ಸಿಕ್ಕುವುದು.
ಈ ಗುಡ್ಡದ ಬಳಿಯಲ್ಲಿ ದೊಡ್ಡ ದೊಡ್ಡ ವೃಕ್ಷಗಳು ಗುಂಪಾಗಿ ಬೆಳೆದಿದ್ದುದ
ರಿಂದ ಹಗಲಹೊತ್ತು ಮಾರ್ಗದಲ್ಲಿ ಆಯಾಸಗೊಂಡು ಬಂದವರು ವಿಶ್ರಮಿ
ಸಿಕೊಳ್ಳುವುದಕ್ಕೆ ಅತ್ಯನುಕೂಲವಾಗಿದ್ದಿತು. ಸಮೀಪದಲ್ಲಿಯೇ ಒಂದು
ಪುಷ್ಕರಿಣಿಯು ನಿರ್ಮಲವಾದ ಜಲದಿಂದ ಪಾಂಥರ ಶ್ರಮವನ್ನು ಪರಿಹರಿ
ಸುತ್ತಿದ್ದಿತು. ಸುತ್ತಮುತ್ತಲಿರುವ ಪ್ರದೇಶಕ್ಕಿಂತ ಇದು ಬಲು ತಗ್ಗಾಗಿದ್ದು
ದರಿಂದ ಮಳೆಯ ನೀರೆಲ್ಲವೂ ಇಲ್ಲಿಗೇ ಹರಿದುಬಂದು ನಿಂತು ಪುಷ್ಕರಿಣಿ
ಯೆನಿಸಿಕೊಂಡಿತ್ತಲ್ಲದೆ ಇದನ್ನಾರೂ ಪ್ರಯತ್ನಪೂರ್ವಕವಾಗಿ ನಿರ್ಮಿಸಿರಲಿಲ್ಲ.
ಸಂಜೆಯಾದೊಡನೆಯೇ ಈ ಮಾರ್ಗದಲ್ಲಿ ಜನರು ಸಂಚರಿಸುವುದು ಬಹು
ವಿರಳ. ಪ್ರತಿದಿನವೂ ಸಂತಾಪಕನು ತನ್ನ ಮಿತ್ರನೊಡನೆ ಈ ಪ್ರದೇಶದ
ಲ್ಲಿಯೇ ಪಥಿಕರನ್ನು ಹಿಡಿದು ಹಿಂಸಿಸುತ್ತಿದ್ದನು. ಎಂದಿನಂತೆ ಈ ದಿವಸವೂ
ಸಂತಾಪಕನು ಮಾರ್ಗಸ್ಥರನ್ನು ನಿರೀಕ್ಷಿಸುತ್ತಿದ್ದಾಗ ಒಂದು ಬಂಡಿಯು
ಬರಲು ಅದನ್ನು ತಡೆದು ನಿಲ್ಲಿಸಿ ಪ್ರಯಾಣಿಕನನ್ನು ಹಿಡಿದುಕೊಂಡನು.
ಯುವಕನಾಗಿದ್ದ ಆ ಪ್ರಯಾಣಿಕನು ಇವನನ್ನು ತನ್ನ ಮುಷ್ಟಿಯಿಂದ
ಗುದ್ದಿದನು. ಇಬ್ಬರೂ ಕಾಳಗವಾಡುತ್ತಿದ್ದಾಗ ನಂದಕುಮಾರಮಿತ್ರನು
ಪ್ರಯಾಣಿಕನನ್ನು ಪ್ರಹರಿಸಲು ಪ್ರಯಾಣಿಕನು ವಿಕಾರಸ್ವರದಿಂದ ಅರಿ
ಚುತ್ತೆ ಕೆಳಕ್ಕೆ ಬಿದ್ದು ಪ್ರಾಣವನ್ನು ಬಿಟ್ಟನು. ಈ ವಿಕಾರಸ್ವರವನ್ನು
ಕೇಳಿಯೇ ನಮ್ಮ ಪೂರ್ವ ಪರಿಚಿತನಾದ ಪಥಿಕನು ಇತ್ತ ಕಡೆ ಬಂದುದು.
ಬಂದುದಕ್ಕೆ ತಕ್ಕ ಪ್ರತಿಫಲವಾದುದನ್ನು ಪಾಠಕಮಹಾಶಯರೆಲ್ಲರೂ
ಚೆನ್ನಾಗಿ ತಿಳಿದಿರುವರು. ಸಂತಾಪಕನು ನಂದಕುಮಾರ ಮಿತ್ರನೊಡನೆ
ಆ ಸಂಹೃತನಾದವನ ಬಳಿಯಲ್ಲಿದ್ದ ವಸ್ತ್ರಾಭರಣಗಳನ್ನೆಲ್ಲ ಅಪಹರಿಸಿ ಅವನ
ನಡುವಿನಲ್ಲಿದ್ದ ಒಂದಾನೊಂದು ಪತ್ರಿಕೆಯನ್ನು ಕಂಡು ಅದನ್ನೂ ತೆಗೆದು
ಕೊಂಡು ನೋಡುತ್ತೆ ಹೊರಟುಹೋದನು.




*