ಈ ಪುಟವನ್ನು ಪ್ರಕಟಿಸಲಾಗಿದೆ
ಸಂತಾಪಕ.
೩೫

ಸಂತಾಪಕನನ್ನು ನಿಂದಿಸಿ ಬದುಕಿದವರನ್ನು ಯಾರನ್ನೂ ಅವನು ನೋಡಿರ
ಲಿಲ್ಲವಾದುದರಿಂದ ಈ ಯುವತಿಯನ್ನು ಸಂತಾಪಕನು ಸಂಹರಿಸದೇಬಿಡುವು
ದಿಲ್ಲವೆಂದೆಣಿಸಿ ಅಲ್ಲಿ ನಿಲ್ಲದೆ ಹೊರಕ್ಕೆ ಹೊರಟುಹೋದನು. ಭುಜಂಗ
ಮನು ಹೊರಟುಹೋದ ತತ್‌ಕ್ಷಣವೇ ಯುವತಿಯು ಆ ಕುಟೀರದಿಂದ
ಹೊರಕ್ಕೆ ಓಡಿಹೋಗಬೇಕೆಂದು ಪ್ರಯತ್ನಿಸಿದಳು. ಆದರೆ ಅದು ವಿಫಲ
ವಾಯಿತು. ಸಂತಾಪಕನು ಅವಳ ಮುಡಿಯನ್ನು ಗಟ್ಟಿಯಾಗಿ ಹಿಡಿದು
ಕೊಂಡು, " ಎಲೇ ! ಮೂರ್ಖಳೇ ! ನೀನೆಲ್ಲಿಗೆತಾನೆ ಓಡಿಹೋಗುವೆ ?
ನಿನ್ನಿದಿರಾಗಿ ನಿಂತಿರುವ ನಾನು ಯಾರೆಂದು ತಿಳಿದಿರುವೆ ? ಸಂತಾಪಕನ ಸಾಹ
ಸವು ನಿನಗಿನ್ನೂ ತಿಳಿದಿಲ್ಲವೋ ? ಅದಿರಲಿ, ನಿನ್ನ ಕೋಮಲವಾದ ಬಾಹು
ಲತೆಗಳಿಂದ ನನ್ನನ್ನೊ೦ದುಬಾರಿ ಆಲಿಂಗಿಸು. ಆ ವೃದ್ಧಮಂತ್ರಿಯಾದ
ಪಲ್ಲವಕನ ಮನೆಯಲ್ಲಿ ನೀನು ಅನುಭವಿಸುತ್ತಿದ್ದ ಸೌಖ್ಯಕ್ಕಿಂತ ಶತಾಧಿಕ
ವಾದ ಸೌಖ್ಯವನ್ನು ನನ್ನ ಬಳಿಯಲ್ಲಿ ಪಡೆಯುವೆ. ಎಲ್ಲಿ ನಿನ್ನ ಮುಖ
ವನ್ನು ತೋರಿಸು " ಎಂದು ಯುವತಿಯ ಗಲ್ಲವನ್ನು ಹಿಡಿದು ಅಲುಗಿಸಿದನು.
ಯುವತಿಯುಹುಲ್ಲೆಯ ಮರಿಯಂತೆ ಅವನ ಹಿಡಿಯಿಂದ ಹಾರಿ ತಪ್ಪಿಸಿ
ಕೊಂಡು ದೂರದಲ್ಲಿ ನಿಂತು " ಎಲಾ, ನೀಚನೇ! ಪರಮಪಾತಕಿಯೇ !
ಯುಕ್ತಾಯುಕ್ತ ವಿವೇಚನೆಯಿಲ್ಲದ ಪಶುವೇ ! ಪರಸ್ತ್ರೀಯನ್ನು ಬಲಾ
ತ್ಕರಿಸಿ ಬದುಕಬೇಕೆಂದು ಅಪೇಕ್ಷಿಸುವೆಯಾ ? ನಿನ್ನಂತಹ ಕೇಡಿಗನಿಗೆ ನರ
ಕವೇ ಗತಿಯಲ್ಲದೆ ಮತ್ತೆಬೇರೆಯಲ್ಲ. ಈಗಲಾದರೂ ನೀನು ನನ್ನನ್ನು
ಗೋಳಿಡಿಸದೆ ಬಿಟ್ಟುಬಿಡು. ಇಲ್ಲವಾದರೆ ಈ ಖಡ್ಗದಿಂದಲೇ ನಿನ್ನನ್ನು
ತುಂಡುತುಂಡುಮಾಡುವೆನು. ಎಂದು ನೆಲದಮೇಲೆ ಬಿದ್ದಿದ್ದ ಸಂತಾಪಕನ
ಖಡ್ಗವನ್ನು ಕೈಗೆ ತೆಗೆದುಕೊಂಡಳು. ಸಂತಾಪಕನು ಅದಕ್ಕೆ ಸ್ವಲ್ಪವಾದರೂ
ಅಂಜದೆ " ಶಹಬಾಸ್ ಶಹಬಾಸ್ ! ಎಲೆ ಹುಡುಗೀ ! ಇದುವರೆಗೂ ನಿನ್ನ
ಸೌಂದರ್ಯವೊಂದೇ ನನ್ನನ್ನು ಮರಳುಮಾಡಿದ್ದಿರು. ಈಗಲಾದರೋ
ನಿನ್ನ ಧೈರ್ಯಸಾಹಸಾದಿಗಳು ನನ್ನನ್ನು ಮತ್ತಷ್ಟು ಮುಗ್ಧನನ್ನಾಗಿ ಮಾಡಿ
ದುವು. ಅಸಮಪ್ರತಾಪಶಾಲಿಯಾದ ನನಗೆ ನಿನ್ನಂತಹ ಸ್ತ್ರೀರತ್ನವೇ ಪತ್ನಿ
ಯಾಗಬೇಕಲ್ಲದೆ ಮತ್ತಾವಳೂ ಸರಿಬಾರಳು. ನೀನು ನನ್ನನ್ನು ಮದುವೆ
ಯಾಗದ ಪಕ್ಷದಲ್ಲಿ ಆ ಖಡ್ಗದಿಂದ ಈಗಲೇ ನನ್ನನ್ನು ಸಂಹರಿಸಿಬಿಡು "
ಎಂದು ತಲೆಬಾಗಿದನು.