ಈ ಪುಟವನ್ನು ಪ್ರಕಟಿಸಲಾಗಿದೆ
೪೪
ಕರ್ಣಾಟಕ ಚ೦ದ್ರಿಕೆ.

ಲಕ್ಷಿಸದೆ " ಎಲಾ, ನೀಚನೇ ! ಪರ ಪಾತಕಿಯೇ ! ಅಬಲೆಯನ್ನು ಭೀತಿಗೊ
ಳಿಸುತ್ತಿರುವ ನಿನ್ನ ಪರಾಕ್ರಮವನ್ನು ಸುಡು. ನಿನ್ನ ಜನ್ಮವನ್ನು ಸುಡು.
ಆ ದುರ್ಗೆಯ ಕೃಪೆಯೊಂದಿದ್ದರೆ ನಿನ್ನಂತಹ ದುರ್ಮಾರ್ಗನಿಂದೇನುತಾನೆ
ಆದೀತು ? " ಎಂದು ಧಿಕ್ಕರಿಸಿದಳು. ಯುವಕನಿಗೆ ಕೋಪಬಂದಿತು. ಕಣ್ಣು
ಗಳು ಕೆಂಪೇರಿದವು. ಕೋಪೋದ್ರೇಕದಿಂದ ಮೈಯೆಲ್ಲ ರೋಮಾಂಚಿತ
ವಾಯಿತು. ಅವನು " ಎಲೇ ಮೂಢಳೇ ! ಇಂದಿಗೆ ನಿನ್ನಾಯುವು
ಪೂರ್ತಿಯಾಗಿಹೋಗಲಿ " ಎಂದು ಖಡ್ಗವನ್ನೆತ್ತಿ ಹೊಡೆಯುವುದರೊಳಗಾಗಿ
ಹಿಂದಣಿಂದ ಯಾರೋ ಬಂದು ಖಡ್ಗವನ್ನು ಕಸುಕೊಂಡರು. ಯುವತಿಯು
ಪ್ರಜ್ಞಾಶೂನ್ಯಳಾಗಿ ನೆಲದಮೇಲೆ ಬಿದ್ದುಬಿಟ್ಟಳು. ಯುವಕನು ಖಡ್ಗಾ
ಪಹಾರವನ್ನು ಮಾಡಿದ ಆಗಂತುಕನಕಡೆಗೆ ತಿರುಗಿದನು. ಆಗಂತುಕನು
ಅದೇ ಖಡ್ಗದಿಂದ ಯುವಕನ ಕೊರಲಿಗೆ ಗುರಿಯಿಟ್ಟು ಹೊಡೆದನು.
ಯುವಕನು ಆ ಪೆಟ್ಟನ್ನು ಉಪಾಯದಿಂದ ತಪ್ಪಿಸಿಕೊಂಡು ಆಗಂತುಕನ
ಮೇಲೆ ಬಿದ್ದನು. ಆಗಂತುಕನು ಅತಿ ರೋಷಾನ್ವಿತನಾಗಿ ಕೈಯ್ಯ
ಲ್ಲಿದ್ದ ಖಡ್ಗದಿಂದ ಮತ್ತೊಂದುಬಾರಿ ಹೊಡೆದನು. ಗುರಿಯಿಲ್ಲದೆ ಹೊಡೆದ
ಆ ಪೆಟ್ಟು ಸಮೀಪದಲ್ಲಿದ್ದ ಬಂಡೆಗೆ ತಗುಲಲು ಖಡ್ಗವು ಪುಡಿಪುಡಿಯಾಗಿ
ಹೋಯಿತು. ಅನಂತರ ಇಬ್ಬರೂ ಬಹಳಹೊತ್ತು ಕಾದಾಡಿದರು. ಕಡೆಗೆ
ಆಗಂತುಕನು ಸೋತು ಬಿದ್ದುಬಿಟ್ಟನು. ಯುವಕನು ಅವನೆದೆಯ ಮೇಲೆ
ಕುಳಿತುಕೊಂಡು, " ಎಲಾ ಕೃತಘ್ನನೇ ! ಪ್ರಾಣದಾನಮಾಡಿದ ನನ್ನ ವಿಷಯ
ದಲ್ಲಿ ನೀನು ಸ್ವಲ್ಪವಾದರೂ ಗೌರವವನ್ನಿಡದೆ ಇಂತಹ ಅಪಕಾರವನ್ನು
ಮಾಡಿದೆಯಾ ? ಇನ್ನು ನಿನ್ನನ್ನು ಸುಮ್ಮನೆ ಬಿಡುವುದು ಸರಿಯಲ್ಲ. ಈ
ವನದಲ್ಲಿರುವ ಕಾಗೆ ಹದ್ದುಗಳಿಗೆ ನಿನ್ನ ಮೃತಶರೀರದಿಂದ ದೊಡ್ಡ ಸಮಾ
ರಾಧನೆಯಾಗಲಿ ! " ಎಂದು ಅವನ ತಲೆಯನ್ನು ನುಲುಚಿ ನೆಲಕ್ಕೆ ಬಡಿದು
" ಇನ್ನು ನನ್ನ ಕೆಲಸಗಳೆಲ್ಲಾ ನಿರ್ವಿಘ್ನವಾಗಿ ನಡೆಯುವುದರಲ್ಲಿ ಸಂಶಯ
ವಿಲ್ಲ " ಎಂದು ಹೇಳಿಕೊಳ್ಳುತ್ತ ಮೂರ್ಛಿತಳಾಗಿ ಬಿದ್ದಿದ್ದ ಯುವತಿಯ
ಬಳಿಗೆ ಬಂದನು. ಯುವತಿಯು ನಿಶ್ಚಲಳಾಗಿ ಬಿದ್ದಿದ್ದಳು. ಯುವಕನು
ಅವಳನ್ನೆತ್ತಿಕೊಂಡು ದಕ್ಷಿಣಾಭಿಮುಖನಾಗಿ ಹೊರಟುಹೋದನು.

——————