ಈ ಪುಟವನ್ನು ಪ್ರಕಟಿಸಲಾಗಿದೆ



ಸ೦ತಾಪಕ.
೪೫

ಹನ್ನೆರಡನೆಯ ಪರಿಚ್ಛೇದ.

ಯಾವ ವನದಲ್ಲಿ ಧೂರ್ತನಾದ ಆ ಸನ್ಯಾಸಿಯು ತನ್ನ ಪ್ರತ್ಯರ್ಥಿ
ಯಾದ ಆಗಂತುಕನನ್ನು ಹೊಡೆದು ಕೆಡವಿ, ಸಹಾಯರಹಿತಳಾದ ಬಾಲೆ
ಯನ್ನು ಎತ್ತಿಕೊಂಡು ಓಡಿಹೋದನೋ, ಅದೇ ವನದಲ್ಲಿ ಮರುದಿನ
ಬೆಳಗ್ಗೆ ಒಬ್ಬ ವಿರಕ್ತೆಯುಜಪಸರವನ್ನು ತಿರುಗಿಸುತ್ತ ಅರ್ಧನಿಮೀಲಿತ
ನಯನೆಯಾಗಿ ಕುಳಿತಿದ್ದಳು. ಅವಳಿಗೆ ಸುಮಾರು ನಾಲ್ವತ್ತೈದುವರ್ಷ
ವಿರಬಹುದು. ಅ೦ಗಾಂಗಗಳೆಲ್ಲ ಗಳಿತವಾಗಿದ್ದುವು. ಹಣೆಯಲ್ಲಿ ಒಂದು
ಸಣ್ಣ ಮಚ್ಚೆ ಇದ್ದಿತು. ಇದು ಸಾಧಾರಣವಾಗಿ ನೋಡುವವರಿಗೆ ಕುಂಕು
ಮದ ಬೊಟ್ಟೆಂದು ಭ್ರಮೆಯುಂಟುಮಾಡುತ್ತಿದ್ದಿತು. ವಿರಕ್ತಿಯು ಜಪ
ಸರವನ್ನು ಎಡಗೈಯ್ಯಲ್ಲಿ ಹಿಡಿದುಕೊಂಡು ಎದ್ದು ನಿಂತಳು. ಭಕ್ತಮನೋ
ರಥದಾಯಕನಾದ ಭಾಸ್ಕರನು ಉದಯಪರ್ವತವನ್ನೇರಿ ಇಣಿಕಿ ನೋಡು
ತ್ತಿದ್ದನು. ವಿರಕ್ತೆಯು ಆದಿತ್ಯಹೃದಯವನ್ನು ಪಠಿಸುತ್ತೆ ದಿನಮಣಿಯನ್ನು
ಸ್ಥಿರದ್ರಷ್ಟಿಯಿಂದ ನೋಡಲಾರಂಭಿಸಿದಳು. ದಿನಮಣಿಯು ಉದಯಪರ್ವತ
ವನ್ನು ಬಿಟ್ಟು ಮೇಲೆ ಬಂದನು. ವಿರಕ್ತೆಯು ಪ್ರಣಾಮವನ್ನು ಮಾಡಿ
ಉತ್ತರಾಭಿಮುಖವಾಗಿ ಹೊರಟಳು. ವೃಕ್ಷಗಳಿಂದ ನಿಬಿಡವಾದ ಆ ವನದ
ಉತ್ತರಪಾರ್ಶ್ವದಲ್ಲಿ ಒಬ್ಬ ಪುರುಷನು ಅಶ್ವಾರೂಢನಾಗಿ ಬರುತ್ತಿದ್ದನು.
ವಿರಕ್ತೆಯು ಅಲ್ಲಿಯೇ ನಿಂತುಬಿಟ್ಟಳು. ಅಶ್ವಾರೋಹಿಯು ಅವಳ ಸಮೀ
ಪಕ್ಕೆ ಬಂದು ಕುದುರೆಯಿಂದಿಳಿದನು. ವಿರಕ್ತೆಯು ಸೂರ್ಯಾವಲೋಕನ
ದಿಂದ ಮಂದದೃಷ್ಟಿಯುಳ್ಳವಳಾಗಿ ಅವನನ್ನು ಬಹುಕಾಲದಮೇಲೆ ಗುರುತಿ
ಸಿದಳು. ಅಶ್ವಾರೋಹಿಯು " ಅತ್ತಿಗೇ ! ಇದೇನು ! ನನ್ನನ್ನು ಮರೆತೇ
ಬಿಟ್ಟೆಯಾ ? " ಎಂದು ಕೇಳಿದನು. ವಿರಕ್ತೆಯು ಅವನ ಕಂಠಸ್ವರದಿಂದ
ಪರಿಚಯವನ್ನು ಹೊಂದಿ " ವಿನಯಾ ! ನಿನ್ನನ್ನು ಮರೆಯುವೆನೇ ? ದೃಷ್ಟಿ
ಯು ಸ್ವಲ್ಪ ಮಂದವಾಗಿದ್ದುದರಿಂದ ಗುರುತು ತಿಳಿಯಲಿಲ್ಲ. ಇದೇನು ?
ಈಬಾರಿ ಇಷ್ಟು ಜಾಗ್ರತೆಯಾಗಿ ಬಂದೆ ? " ಎಂದು ಪ್ರಶ್ನೆಮಾಡಿದಳು.
ಅಶ್ವಾರೋಹಿಯ ಹೆಸರು ವಿನಯಚಂದ್ರ. ಇವನು ಆ ವಿರಕ್ತೆಯ
ತಂಗಿಯ ಗಂಡ. ವಿರಕ್ತೆಯ ಹೆಸರು ಕಳಾಮಾಲಿನಿ. ಅವಳ ತಂಗಿಯ