‖ಶ್ರೀ‖
ಸಂತಾಪಕ.
ಮೊದಲನೆಯ ಪರಿಚ್ಛೇದ.
ಇಂದು ಚೈತ್ರಶುದ್ಧ ಪೂರ್ಣಿಮಾ ಸಂಧ್ಯಾಕಾಲ, ಸುಮಾರು ಆರು
ಗಂಟೆಯ ಸಮಯ. ಸೂರ್ಯದೇವನು ಮಾರ್ಗಾಯಾಸದಿಂದ ಶ್ರಾಂತ
ವಾಗಿದ್ದ ತನ್ನ ಕುದುರೆಗಳನ್ನು ಪಶ್ಚಿಮಸಮುದ್ರದ ಬಳಿಗೆ ಕರೆದುಕೊಂಡು
ಹೋಗಿ ದಣುವಾರಿಸುತ್ತಿದ್ದನು. ಆಹಾರಾರ್ಥವಾಗಿ ಸಂಚರಿಸುತ್ತಿದ್ದ ಶುಕ
ಪಿಕಾದಿ ಪಕ್ಷಿಗಳು ತಂತಮ್ಮ ವಾಸಸ್ಥಾನಗಳಿಗೆ ಹಿಂತಿರುಗಿ ಹೋಗುತ್ತಿ
ದ್ದವು. ಗಗನಾಂಗಣವು ಅನಾಯಕವಾದುದನ್ನು ಕಂಡು ಒಂದೆರಡು
ನಕ್ಷತ್ರಗಳು ತಮ್ಮ ಅಲ್ಪ ತೇಜಸ್ಸನ್ನು ಪ್ರದರ್ಶನಮಾಡುವುದಕ್ಕೆ ಇದೇ ತಕ್ಕ
ಸಮಯವೆಂದು ಅಲ್ಲಲ್ಲಿ ತಲೆದೋರುತ್ತಿದ್ದುವು. ಶೀತಲವಾದ ಮಂದಮಾ
ರುತವು ಮಾಲತೀಮಲ್ಲಿಕಾದಿ ನವವಿಕಸಿತ ಪುಷ್ಪಗಳ ಸೌರಭವನ್ನು ಸಂಗ್ರ
ಹಿಸಿಕೊಂಡು ಮತ್ತಾವ ಪುಷ್ಪವಿಶೇಷಗಳಿವೆಯೋ ಅವನ್ನೂ ನೋಡಬೇ
ಕೆ೦ಬ ಅಭಿಲಾಷೆಯಿಂದ ಬಹು ಗಾಂಭೀರ್ಯವನ್ನು ತಾಳಿ ಅಲ್ಲಲ್ಲಿ ಸುಳಿಯು
ತ್ತಿದ್ದಿತು. ಯಥಾಕಾಲದಲ್ಲಿ ಕುಮುದಬಾಂಧವನಾದ ಚಂದ್ರನೂ ಮೇಘ
ಮಂಡಲವನ್ನಡರಿದನು. ಈ ಸಮಯದಲ್ಲಿ ಚಂದ್ರಿಕೆಯ ಶೋಭಾರಾಶಿ
ಯನ್ನು ಕಂಡು ಸಂತೋಷಪಡದವರಾರು ! ಯಾವ ರಸಿಕನು ತಾನೆ
ಇಂತಹ ಸಮಯದಲ್ಲಿ ಸುಖಾನುಭವವನ್ನು ಮಾಡದಿರುವನು ! ಇಹ
ಜೀವನದಲ್ಲಿ ಯಾವನಿಗೆ ತಾನೇ ಈ ಸುಖವನ್ನು ಹೊಂದುವುದಕ್ಕೆ ಆಸೆ
ಯಿಲ್ಲ ! ಆದರೇನು, ವಿರಹಿಗಳಿಗೆ ಇದು ವಿಪತ್ಕಾಲವೇ ಸರಿ.
ಚಂದ್ರಿಕೆಯು ರಸಾತಲವನ್ನೆಲ್ಲ ವ್ಯಾಪಿಸಿ ಪ್ರತಿ ವೃಕ್ಷದ ಮೇಲೆಯೂ
ಕುಳಿತಿರುವ ಪೇಚಕಾದಿ ಪಕ್ಷಿಗಳಿಗೆ ಎಳೆಬಿಸಿಲೆ೦ಬ ಭ್ರಾಂತಿಯನ್ನುಂಟು